ಮಹಿಳಾ ಕಾಂಗ್ರೆಸ್ ಮುಖಂಡರಿಂದ ಪಾಲಾಕ್ಪಪ್ಪಗೆ ಸನ್ಮಾನ 

Get real time updates directly on you device, subscribe now.

ಕೊಪ್ಪಳ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನಿಸ್ವಾರ್ಥ ಸೇವೆ ಮತ್ತು ಸ್ಥಳಿಯ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅವಿರತ ಸೇವೆ ಪರಿಗಣಿಸಿ ಕಾಂಗ್ರೆಸ್ ಸೇರಿದ ಬಿಜೆಪಿ ಮುಖಂಡ ತಾಲೂಕ ಪಂಚಾಯತಿ ಮಾಜಿ ಸದಸ್ಯ ಹುಲಗಿಯ ಪಾಲಾಕ್ಷಪ್ಪ ಗುಂಗಾಡಿ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಸನ್ಮಾನಿಸಿ ಸ್ವಾಗತಿಸಿದರು.
ತಾಲ್ಲೂಕಿ ಹುಲಗಿ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಲೋಕಸಭೆ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಸಮ್ಮುಖದಲ್ಲಿ ಸಾಕಷ್ಟು ಅಭಿಮಾನಿಗಳ ಜೊತೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರನ್ನು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಸ್ವಾಗತಿಸಿದರು.
ತಾಲೂಕ ಪಂಚಾಯತಿ ಸದಸ್ಯರಾಗಿ, ಸ್ಥಳಿಯ ಹುಲಿಗೆಮ್ಮ ದೇವಸ್ಥಾನಕ್ಕೆ, ಗ್ರಾಮ ಪಂಚಾಯತಿಗೆ ಸುಧೀರ್ಘವಾಗಿ, ಜನಪರವಾಗಿ ಸೇವೆ ಮಾಡಿರುವ ಇವರ ಸೇರ್ಪಡೆಯಿಂದ ಬಂಡಿಹರ್ಲಾಪೂರ ಮತ್ತು ಹಿಟ್ನಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ ಎಂದು ಜ್ಯೋತಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜನಾರ್ಧನ ಹುಲಗಿ, ಎಸ್. ಬಿ. ನಾಗರಳ್ಳಿ, ಕಾಟನ್ ಪಾಶಾ, ರಾಜಶೇಖರ್ ಆಡೂರ, ಶರಣಪ್ಪ ಸಜ್ಜನ್, ಎಸ್.ಟಿ. ಘಟಕ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ತಾಲೂಕ ಕೆಡಿಪಿ ಸದಸ್ಯೆ ನಾಗರತ್ನ ಹುಲಗಿ, ಸುಮಂಗಲಾ ನಾಯಕ್, ಅಕ್ಬರ್ ಪಾಶಾ, ಪ್ರಸನ್ನ ಗಡಾದ, ಬಾಲಚಂದ್ರ ಶ್ಯಾಮುಯೇಲ್, ವಿಶ್ವನಾಥ ರಾಜು, ಚನ್ನಕೇಶವ ಬಂಡಿಹರ್ಲಾಪೂರ, ತೋಟಪ್ಪ ಕಾಮನೂರ, ವೀರಣ್ಣ ಗಾಣಗೇರ, ಭರಮಪ್ಪ ನಗರ, ರವಿ ಕುರಗೋಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!