ಕೊಪ್ಪಳ ಲೋಕಸಭಾ ಕ್ಷೇತ್ರ ಗೆದ್ದು ಮೋದಿಜೀ ಅವರಿಗೆ ಉಡುಗೊರೆ ನೀಡಬೇಕಾಗಿದೆ -ಡಾ ಬಸವರಾಜ ಕ್ಯಾವಟರ್
ಕನಕಗಿರಿ : ನರೇಂದ್ರ ಮೋದಿ ಅವರ ಅನೇಕ ಜನಪರ ಕಾರ್ಯಗಳಿಗೆ ಈಗಾಗಲೇ ದೇಶವಾಸಿಗಳು ಬೆಂಬಲ ನೀಡುತ್ತಿದ್ದು ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಗೆದ್ದು ಮೋದಿಜೀ ಅವರಿಗೆ ಉಡುಗೊರೆ ನೀಡಬೇಕಾಗಿದೆ , ಪ್ರಮುಖರ ಹಾಗೂ ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿ ಕೊಪ್ಪಳ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ಮೂಡಿದೆ ಎಂದು ಡಾ ಬಸವರಾಜ ಕ್ಯಾವಟರ್ ಹೇಳಿದರು
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆಯಲ್ಲಿ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರು ಭಾಗವಹಿಸಿ ಮಾತನಾಡಿದರು.
2014ರವರೆಗೆ ಜಗತ್ತಿನ ಐದು ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತವನ್ನು ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಮುನ್ನಡೆಸಿದ ಶ್ರೇಯಸ್ಸು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ್ದು. ಈ ಏಳಿಗೆಯು ಹೀಗೆಯೇ ಮುಂದುವರೆಯಬೇಕಾದರೆ ಮೂರನೇ ಬಾರಿಗೆ ಬಿಜೆಪಿಯು ಬಹುಮತದಿಂದ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ನಂಬಿರುವ ಕಾರ್ಯಕರ್ತರು ಒಮ್ಮತದಿಂದ ಬಿಜೆಪಿಯನ್ನು ಈ ಬಾರಿಯೂ ಗೆಲ್ಲಿಸುವುದಕ್ಕೆ ಶ್ರಮಿಸುವುದಾಗಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಇಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಮಂಡಲದ ಮರ್ಲಾನಹಳ್ಳಿ ಹಾಗೂ ಯರಡೋಣ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿಗಳಾದ ಡಾಕ್ಟರ್ ಬಸವರಾಜ ಕ್ಯಾವಟರ್ ಅವರು ಭಾಗವಹಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು, ಉಭಯ ಪಕ್ಷದ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.