ಹೊಸ ಐಟಿಐ ಸಂಸ್ಥೆ ಪ್ರಾರಂಭಿಸಲು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ

Get real time updates directly on you device, subscribe now.

Kannadanet 24×7 News  2024 ನೇ ಸಾಲಿನಲ್ಲಿ ಹೊಸ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿ ಘಟಕಗಳನ್ನು ಪ್ರಾರಂಭಿಸಲು ಎನ್.ಸಿ.ವಿ.ಟಿ ಸಂಯೋಜನೆ ಪಡೆಯಲು ಮತ್ತು ಸ್ಥಳಾಂತರಗೊAಡ ಸಂಸ್ಥೆಗಳು ಮರು ಸಂಯೋಜನೆ ಪಡೆಯುವ ಸಂಬAಧ ಸಂಯೋಜನಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಡಿ.ಜಿ.ಟಿ ನವದೆಹಲಿರವರ  NIMI portal  (www.nimionlineadmission.in)    ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.

ಅರ್ಜಿ ಸಲ್ಲಿಸಬೇಕಾದಲ್ಲಿ ಸಂಸ್ಥೆಯವರು ಡಿ.ಜಿ.ಟಿ ನಿಯಮಾನುಸಾರ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾರುತ್ತದೆ ಹಾಗೂ ಸಂಯೋಜನೆಗಾಗಿ ನಿಮಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ  ಪಡೆಯಬೇಕಾಗಿರುತ್ತದೆ.
ಹೊಸದಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಕನಿಷ್ಠ ನಾಲ್ಕು ವೃತ್ತಿಗಳಿಗೆ ಎನ್.ಸಿ.ವಿ.ಟಿ ಸಂಯೋಜನೆ ಪಡೆಯಬೇಕಾಗಿರಯತ್ತದೆ ಹಾಗೂ ಡಿಜಿಟಿ ನಿಯಮಾನುಸಾರ ಕಟ್ಟಡ,ವಿದ್ಯುತ್, ಯಂತ್ರೋಪಕರಣ, ಸಿಬ್ಬಂದಿ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾಗಿರುತ್ತದೆ ಮತ್ತು ಪ್ರಸ್ತುತ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚುವರಿ ವೃತ್ತ/ಘಟಕಗಳನ್ನು ಪ್ರಾರಂಭಿಸಲು ಕನಿಷ್ಠ 4 ಗ್ರೆಡಿಂಗ್ ಹೊಂದಿರಬೇಕು.
ಪ್ರಸ್ತುತ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಸಂಸ್ಥೆಯು ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊAಡಿದ್ದಲ್ಲಿ ಡಿ.ಜಿ.ಟಿ ನಿಯಮಾನುಸಾರ ಸಂಯೋಜನೆ ರದ್ದಾಗುತ್ತದೆ. ಈಗಾಗಲೇ ಸಂಯೋಜನೆ ಪಡೆದ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊಳಿಸಿ, ನ್ಯಾಯಾಲಯಗಳಲ್ಲಿ ಪ್ರಕರಣ ಹೂಡಿರುವ ಸಂಸ್ಥೆಗಳು ಸ್ಥಳಾಂತರಗೊAಡಿರುವ ಸ್ಥಳದಲ್ಲಿ ಮರು ಸಂಯೋಜನೆ ಪಡೆಯಲು ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆದು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಸ್ಥಳಾಂತರಗೊAಡಿರುವ ಸಂಸ್ಥೆಯವರು ನಿಯಮಾನುಸಾರ ಸಂಯೋಜನೆ ಪಡೆದ ನಂತರ 2024 ನೇ ಸಾಲಿನಲ್ಲಿ ಪ್ರವೇಶಾತಿಗಳಿಗೆ ಅನುಮತಿಸಲಾಗುವುದು ಇಲ್ಲವಾದಲ್ಲಿ ಪ್ರವೇಶಾತಿಗಳಿಗೆ ಅವಕಾಶಗಳಿರುವುದಿಲ್ಲ ಹಾಗೂ ಎನ್.ಸಿ.ವಿ.ಟಿ ಸಂಯೋಜನೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು.
ಸಂಯೋಜನೆ ಹೊಂದಲು ಡಿ.ಜಿ.ಟಿ ನಿಯಮಾನುಸಾರ ಅರ್ಹತೆ ಹೊಂದಿರುವ ಸಂಸ್ಥೆಗಳು ನಿರಾಕ್ಷೇಪಣಾ ಪತ್ರ ಪಡೆಯಲು ಮಾರ್ಚ್ 30 ರೊಳಗಾಗಿ ಆಯುಕ್ತಾಲಕ್ಕೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ  ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಇವರನ್ನು  ಸಂಪರ್ಕಿಸಬಹುದು ಎಂದು ಟಣಕನಕಲ್ ಐಟಿಐ ಸಂಸ್ಥೆಯ ಪ್ರಾಚಾರ್ಯರಾದ ಗವಿಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!