ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿಶ್ವ ವಿದ್ಯಾಲಯದ ಸನ್ನದ್ಧ: ಕುಲಪತಿ ಮೇತ್ರಿ
Kannadanet NEWS 24×7 ವಿಜಯನಗರ – ಕೊಪ್ಪಳ ಕನ್ನಡ ನಾಡಿಗೆ ವಿಶೇಷ ನೆರವಾಗಿದೆ. ಇಲ್ಲಿನ ಸಾಮ್ರಾಟ್ ಅಶೋಕನ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಧರ್ಮ ಜ್ಞಾನ ಕೇಂದ್ರಗಳು ಆಶ್ರಯಿಸಿ, ಧರ್ಮವನ್ನು ಬಿತ್ತುತ್ತಿದ್ದಾರೆ. ಕೊಪ್ಪಳವು ಚಾರಿತ್ರಿಕ ಹಿನ್ನೆಲೆ ಹೊಂದಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಕೆ.ಎಮ್.ಮೇತ್ರಿ ಅವರು ಅಭಿಪ್ರಾಯಪಟ್ಟರು.
ಕೊಪ್ಪಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರಥಮ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೊಪ್ಪಳವು ಸಹ ಕನ್ನಡಕ್ಕೆ ವಿಶೇಷ ಸ್ಥಾನಮಾನ ನೀಡಿದ ಭೂಮಿಯಾಗಿದೆ. ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದೂ, ಹಾಗಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುನ್ನುಗ್ಗಲು ಹಾಗೂ ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿಶ್ವ ವಿದ್ಯಾಲಯದ ಸನ್ನದ್ಧವಾಗಿದೆ. ಈ ಭಾಗದ ಶಿಕ್ಷಣ ಇನ್ನಷ್ಟು ಬೆಳವಣಿಗೆ ಯಾಗಲಿ ಎಂದರು.
ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ವಿಷ್ಣುಕಾಂತ್.ಎಸ್.ಚಟಪಲ್ಲಿ ಮಾತನಾಡಿ, ಕೊಪ್ಪಳ ವಿಶ್ವ ವಿದ್ಯಾಲಯದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದರು.
ಗೊಟಗೋಡಿ, ಶಿಗ್ಗಾಂವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಮಾತನಾಡಿ, ಸಂವಿಧಾನ ಆಶಯವನ್ನು ಜಾರಿಗೆ ತರುವ ಕೆಲಸವಾಗಬೇಕು. ಸಂವಿಧಾನ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದರು.
ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಸುರೇಶ ಎಚ್. ಜಂಗಮಶೆಟ್ಟಿ ಮಾತನಾಡಿ, ದೇಶದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯ ಉತ್ತುಂಗಕ್ಕೆ ಏರಬೇಕು. ವಿಶ್ವ ವಿದ್ಯಾಲಯದ ಉದ್ದೇಶ ಈಡೇರಲಿ ಎಂದರು.
ಬೀದರ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವ ವಿದ್ಯಾಲಯ ಸ್ಥಾಪನೆಯಾಗಿದೆ. ಹೊಸ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣದ ಜೊತೆಗೆ ಉದ್ದೇಶ ಕೌಶಲ್ಯ ಭರಿತಾದ ಕೋರ್ಸುಗಳನ್ನು ಪ್ರಾರಂಭಿಸಿ ಆ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಅವರರವರ ಭವಿಷ್ಯ ರೂಪಿಸಿಕೊಳ್ಳಬೇಕು. ಹೊಸ ವಿಶ್ವ ವಿದ್ಯಾಲಯದ ನಾಡಿನಲ್ಲಿಯೇ ಹೆಸರುವಾಸುವಂತಾಗಲಿ ಮಾಡೋಣ ಎಂದರು
ಕೊಡಗು ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ ಸಂಗಪ್ಪ ಆಲೂರು ಮಾತನಾಡಿ, ಈ ಭಾಗವು ಕಲ್ಯಾಣ ಕರ್ನಾಟಕ ಸಂತ ಮಹಾಂತರ ನಾಡಗಿದೆ. ಕೊಪ್ಪಳ ವಿಶ್ವ ವಿದ್ಯಾಲಯ ಒಂದು ವರ್ಷಗಳ ಗುಣಮಟ್ಟದ ಶಿಕ್ಷಣ ನೀಡಿದ ಸಾರ್ಥಕ ಗಳಿಗೆಯಾಗಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅತ್ಯುತ್ತಮವಾದ ಬೀಜ ಬಿತ್ತುವ ಮೂಲಕ ಕಳೆ, ಕಸವನ್ನೂ ಕಿತ್ತು ತೆಗೆದು, ಸಮೃದ್ಧಿಯ ನಾಗರಿಕರಾಗಿ ರೂಪಿಸುವ ಕನಸು ವಿಶ್ವ ವಿದ್ಯಾಲಯದ ಹೊಂದಿದೆ. ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತವಾದ ಜ್ಞಾನ ನೀಡಬೇಕಿದೆ. ಇಲ್ಲಿರುವ ವಿದ್ಯಾರ್ಥಿಗಳು ನಾಡಿನ ಸಂತರು, ಜ್ಞಾನಿಗಳು, ಪಂಡಿತರು, ದೇಶವನ್ನು ಆಳುವ ನಾಗರಿಕರಾಗಲು ಇಲ್ಲಿನ ಪ್ರಾಧ್ಯಾಪಕರು ಹಾಗೂ ಶಿಕ್ಷಕರು ಶ್ರಮಿಸಬೇಕು ನಾವೆಲ್ಲರೂ ಚಲಾವಣೆಯ ನಾಣ್ಯ ಹಾಗೂ ನೋಟುಗಳು ವಂತಾಗಬೇಕು. ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಕ್ರಿಯಾಶೀಲ ರಾಗಿದ್ದು, ಅವರನ್ನು ನಿವೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಾಸನ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ತರೀಕೆರಿ ಸಿ. ತಾರಾನಾಥ ಮಾತನಾಡಿ, ಕೊಪ್ಪಳ ನಾಡು ಕಲ್ಯಾಣ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಜ್ಞಾನ ಎಲ್ಲರಿಗೂ ಸಿಗಬೇಕು. ಮನುಷ್ಯನ ಕ್ರಿಯಿಗೆ ಸೂರ್ಯನ ಶಕ್ತಿ ಆಧಾರವಾಗಿದೆ. ವಿಕಾಸದ ಹಾದಿಯಲ್ಲಿ ವಿವಿಧ ಸಂಘರ್ಷವನ್ನು ಎದುರಿಸಿ ಮನುಷ್ಯ ಮುಂದು ವರೆದಿದ್ದಾನೆ. ಮನುಷ್ಯನ ಮಾತ್ರ ಸಂವಹನ ಕಲೆ ಹಾಗೂ ಬುದ್ಧಿ ಶಕ್ತಿ ಇರುವುದು ಎಂದರು.
ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಎಮ್.ಆರ್.ಗಂಗಾಧರ್ ಮಾತನಾಡಿ, ನೂತನ ವಿಶ್ವ ವಿದ್ಯಾಲಯದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಿವೆ. ವಿಶೇಷ ಹೆಣ್ಣು ಮಕ್ಕಳನ್ನು ನಗರಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವರ ಪಾಲಕರು ನಿರಾಕರಿಸುವುದು ಸಹಜವಾಗಿದೆ. ಆದರೆ ನೂತನ ವಿಶ್ವ ವಿದ್ಯಾಲಯದ ಜಿಲ್ಲೆಯ ಸ್ಥಾಪನೆ ಯಾಗವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದ ಕನಸು ನನಸಾಗಿದೆ ಎಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲ ಸಚಿವರಾದ ಎಸ್.ಎನ್.ರುದ್ರೇಶ ಮಾತನಾಡಿ, ಜಾತಿ ಧರ್ಮದಲ್ಲಿ ವಿಶ್ವ ವಿದ್ಯಾಲಯ ಗಳು ಸೋರುಗುತ್ತಿವೆ. ಜಾತಿ ಧರ್ಮವನ್ನು ಮಕ್ಕಳು ಹೊರ ಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಮಾತನಾಡಿ, ಕಳೆದ ಒಂದು ವರ್ಷದಿಂದ ಇಲ್ಲಿನ ಜನತೆ ಅನೇಕ ರೀತಿ ಪ್ರೋತ್ಸಾಹ ಹಾಗೂ ಸಹಕಾರ ನೀಡಿದಾರೆ. ಕೊಪ್ಪಳ ವಿಶ್ವ ವಿದ್ಯಾಲಯ ಬೆಳೆಯ ಬೇಕು ಎಂದರೆ ಜನ ಸಮುದಾಯದ ಸಹಕಾರ ಅಗತ್ಯ. ವಿಶ್ವ ವಿದ್ಯಾಲಯವನ್ನು ಬಲಿಷ್ಠ ಗೊಳಿಸೋಣ. ವಿಶ್ವ ವಿದ್ಯಾಲಯದಲ್ಲಿ ಒಂದು ಕುಟುಂಬ ದ್ದಂತೆ ಕೆಲಸ ಮಾಡುತ್ತಿದ್ದೇವೆ.ಕಲ್ಯಾಣ ಭಾಗವನ್ನು ಉತ್ತುಂಗಕ್ಕೆ ಏರುವ ಮಾಡೋಣ ಎಂದರು.
ಕುಲ ಸಚಿವರಾದ ಡಾ.ಕೆ.ವಿ.ಪ್ರಸಾದ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ಸಿ.ಐ.ಚಲವಾದಿ, ಡಾ.ಪ್ರಕಾಶ ಯಳವಟ್ಟಿ, ಡಾ.ಬಾಜಿ ದೇವೇಂದ್ರಪ್ಪ, ವಿಶ್ವ ವಿದ್ಯಾಲಯದ ವ್ಯಾಪ್ತಿಯ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ಭೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.
Comments are closed.