ದೌರ್ಜನ್ಯ ನಿಯಂತ್ರಣ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನೇಮಕ
ದೌರ್ಜನ್ಯ ನಿಯಂತ್ರಣ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾಗಿ ಹುಸೇನಪ್ಪ ಹಿರೇಮನಿ ನೇಮಕ ಅಭಿನಂದನೆ
ಕುಷ್ಟಗಿ,ಮಾ,19; ದೌರ್ಜನ್ಯ ನಿಯಂತ್ರಣ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ ನೇಮಕ ಮಾಡಿ ಆದೇಶಿಸಿದ್ದಾರೆ.
ಗಂಗಾವತಿ ತಾಲೂಕಿನ ಈಳಿಗನೂರು ಗ್ರಾಮದ ವೀರೇಶ ತಂದೆ ಚಂದ್ರಪ್ಪ ಚಲವಾದಿ, ಕೂಕನೂರು ಪಟ್ಟಣದ ಯಮನೂರಪ್ಪ ತಾಯಿ ಲಕ್ಷ್ಮವ್ವ ಗೊರ್ಲೆಕೊಪ್ಪ, ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಹುಸೇನಪ್ಪ ತಂದೆ ಆಳೂರಪ್ಪ ಹಿರೇಮನಿ, ಕೊಪ್ಪಳದ ಚಿನ್ನಪ್ಪ ತಂದೆ ವೀರಪ್ಪ ತಳವಾರ, ಗಂಗಾವತಿ ತಾಲೂಕಿನ ಕೃಷ್ಣಾಪೂರ ಗ್ರಾಮದ ದೇವಪ್ಪ ತಂದೆ ಶರಣಪ್ಪ ಮೆಣಸಗಿ ಇವರನ್ನು ನಿಯಮಾನುಸಾರ ದೌರ್ಜನ್ಯ ನಿಯಂತ್ರಣ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಇವರುಗಳನ್ನು ಆಯ್ಕೆ ಮಾಡಿದ್ದಾರೆ. ದೌರ್ಜನ್ಯ ನಿಯಂತ್ರಣ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಕ್ಕೆ ವಕೀಲರಾದ ಪಿ.ರಮೇಶ, ಶುಖಮುನಿ ಗುಮಗೇರಿ, ಮರಿಯಪ್ಪ ಪೂಜಾರಿ, ಮುಖಂಡರಾದ ಹನುಮಂತ ಪೂಜಾರಿ, ನಾಗರಾಜ ನಂದಾಪೂರ, ನೀಲಪ್ಪ ಕುದರಿ, ಶರಣಪ್ಪ ತುಗ್ಗಲದೋಣಿ, ಯಮನೂರ ಮನ್ನೇರಾಳ, ಪರುಶುರಾಮ ಮದ್ನಾಳ, ದುರಗೇಶ ಮೀಯಾಪೂರ, ವಿರೇಶ ಕಲ್ಲಗೋನಾಳ, ನಾಗರಾಜ ಶಿವನಗುತ್ತಿ, ದುರಗೇಶ ದೇವರಮನಿ, ಶರಣಪ್ಪ ಕಳ್ಳಿ, ಚಂದ್ರಶೇಖರ ಕುಂಬಾರ, ಚಂದ್ರಶೇಖರ್
ನಾಯಕ, ರಾಜು ನಾಯಕ ಹಾಗೂ ತಾಲೂಕು ಹಳ್ಳಿ ಗ್ರೂಪ್ ಸರ್ವ ಸದಸ್ಯರು ಮತ್ತು ಮುದೇನೂರ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಅಭಿನಂದನೆ ಸಲ್ಲಿಸಿದ್ದಾರೆ.
Comments are closed.