ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗಕ್ಕೆ ನೂತನ ಸಾರಿಗೆ ಆರಂಭ

Get real time updates directly on you device, subscribe now.

  ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದಲ್ಲಿ ನೂತನ ಪ್ರತಿಷ್ಟಿತ ರಾತ್ರಿ ಸಾರಿಗೆಯನ್ನು (ನಾನ್ ಎಸಿ ಸ್ಲೀಪರ್) ಪ್ರಾರಂಭಿಸಲಾಗಿದೆ.
*ಸಾರಿಗೆ ಕಾರ್ಯಾಚರಣೆ ಸಮಯ:* ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ನಾನ್ ಎಸಿ ಸ್ಲೀಪರ್ ವಾಹನವು ಕೊಪ್ಪಳದಿಂದ 20.30 ಗಂಟೆಗೆ ಹಾಗೂ ಗಂಗಾವತಿಯಿಂದ 4.15 ಮತ್ತು 21.45ಕ್ಕೆ ಹೊರಡಲಿದ್ದು, ಕಲಬುರಗಿಗೆ 3.45ಕ್ಕೆ & 21.30ಕ್ಕೆ, ಬೀದರ್‌ಗೆ 6.45ಕ್ಕೆ ತಲುಪಲಿದೆ. ಕಲಬುರಗಿಯಿಂದ 22 ಮತ್ತು 4 ಗಂಟೆಗೆ ಹಾಗೂ ಬೀದರ್‌ದಿಂದ 18.30ಕ್ಕೆ ಹೊರಡಲಿರುವ ವಾಹನಗಳು ಗಂಗಾವತಿಗೆ 4 ಮತ್ತು 21.30ಕ್ಕೆ, ಕೊಪ್ಪಳಕ್ಕೆ 5.15ಕ್ಕೆ ತಲುಪಲಿದೆ.
ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದ ಸಾರಿಗೆಗೆ ಮುಂಗಡ ಟಿಕೇಟ್ ಬುಕ್ ಮಾಡಲು ಸಂಸ್ಥೆಯ ಅಧೀಕೃತ ವೆಬ್‌ಸೈಟ್  www.ksrtc.in ನಲ್ಲಿ ಹಾಗೂ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾಗಳ ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯದ ಸದಪಯೋಗ ಪಡೆದುಕೊಳ್ಳುವಂತೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು   ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!