ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ನೇಮಕ
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರನ್ನು ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಡಾ ಪ್ರಕಾಶ್ ಜಿ.ಸಿ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ರೆಡ್ಡಿ ಶ್ರೀನಿವಾಸ ಅವರನ್ನು ನೇಮಿಸಲಾಗಿದೆ. ಉಪಾಧ್ಯಕ್ಷರಾಗಿ ಗಂಗಾವತಿಯ ಎಸ್.ಟಿ.ಖಾದ್ರಿ, ಹುಲಿಗಿಯ ಟಿ.ಜನಾರ್ಧನ, ತಾವರಗೇರೆಯ ಚಂದ್ರಶೇಖರ ನಾಲತವಾಡ, ಕುಕನೂರಿನ ಖಾಸಿಂಸಾಬ್ ಮರ್ದಾನ್ ಸಾಬ್ ಹಾಗೂ ಕಾರಟಗಿಯ ನಾಗರಾಜ ಅರಳಿ ಅವರು ನೇಮಕವಾಗಿದ್ದಾರೆ. ಸದಸ್ಯರನ್ನಾಗಿ ಯಲಬುರ್ಗಾದ ಮಲ್ಲಪ್ಪ ಯಮನಪ್ಪ ಜಕಲಿ, ಮುನಿರಾಬಾದಿನ ಬಾಲಚಂದ್ರ ಸ್ಯಾಮುವೆಲ್, ಮರ್ಲಾನಹಳ್ಳಿಯ ಸೋಮನಾಥ ದೊಡ್ಡಮನಿ, ಹನುಮಸಾಗದ ಫಾರೂಖ್ ದಲಾಯತ್, ಕಾರಟಗಿಯ ಶಕುಂತಲಾ, ಕುಷ್ಟಗಿಯ ಶಾರದಾ ಕಟ್ಟಿಮನಿ, ಹನುಮಸಾಗರದ ಮೈನುದ್ದೀನ್ ಖಾಜಿ, ಕನಕಗಿರಿಯ ಹಜರತ್ ಹುಸೇನ್, ನಿಲೋಗಲ್‌ನ ಮಲ್ಲಪ್ಪ ಭಂಡಾರಿ, ಕೊರ್ಲಹಳ್ಳಿಯ ಸುಧೀರ್ ಶಾಮಾಚಾರ, ಗಂಗಾವತಿಯ ಆನಂದ ಹಾಸಲಕರ, ಬರಗೂರಿನ ದೇವಪ್ಪ ಬಾವಿಕಟ್ಟಿ, ಬಸವನದುರ್ಗಾದ ವೆಂಕಟೇಶ್ ಬಾಬು, ಕುಕನೂರಿನ ಸಂಗಪ್ಪ ವೀರಪ್ಪ ಗುತ್ತಿ ಮತ್ತು ಕೊಪ್ಪಳದ ಅಮ್ಜದ್ ಪಟೇಲ್ ಇವರನ್ನು ನೇಮಿಸಿದೆ. ಕೊಪ್ಪಳ ಅಪರ ಜಿಲ್ಲಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Comments are closed.