ಕಾರ್ಮಿಕ ವರ್ಗದ ಮಹಾನಾಯಕ ಕಾಮ್ರೆಡ್ ಕಾಲ್ ಮಾರ್ಕ್ಸ್ ರವರ 142ನೇ ಸ್ಮರಣ ದಿನದ ಕಾರ್ಯಕ್ರಮ
ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಛೇರಿಯಲ್ಲಿ ![]()

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವಿಶ್ವದ ದುಡಿಯುವ ಜನಗಳ ಪರ ಧ್ವನಿ ಎತ್ತಿದ, ಸಹಸ್ರಮಾನದ ಮೇಧಾವಿ ವೈಜ್ಞಾನಿಕ ಸಮತಾವಾದಿ ಸಿದ್ಧಾಂತದ ಪ್ರತಿಪಾದಕ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಕಾರ್ಲ್ ಮಾರ್ಕ್ಸ್ ರವರ 142ನೇ ಸ್ಮರಣ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಉದ್ಬಾಳ್ ಮಾತನಾಡಿ ವಿಶ್ವದ ದುಡಿಯುವ ಜನಗಳ ಆಶಾಕಿರಣ ಕಾರ್ಮಿಕ ವರ್ಗದ ವಿಮೋಚನೆಗೆ ದಾರಿ ತೋರಿದ ಶ್ರೇಷ್ಠ ಮೇಧಾವಿ ಹಾಗೂ ಮಹಾನ್ ಕ್ರಾಂತಿಕಾರಿಯಾಗಿದ್ದ ಅವರು ಯಾವ ಶೋಷಿತ ಜನರ ರಕ್ತವನ್ನು ಜಿಗಣೆಯಂತೆ ಶ್ರೀಮಂತ ಬಂಡವಾಳಿಗರು ಹಿರುತ್ತಿದ್ದರೋ, ಆ ಜನರ ಕೈಗೆ ಅವರು ಮಾರ್ಕ್ಸ್ ವಾದದ ಅಸ್ತ್ರವನ್ನು ನೀಡಿದರು. ಸಮಾಜವಾದಿ ಕ್ರಾಂತಿಯ ದಾರಿಯ ಮೂಲಕ ಸಮತಾವಾದಿ ಸಮ ಸಮಾಜವನ್ನು ನಿರ್ಮಿಸುವ ವೈಜ್ಞಾನಿಕ ತತ್ವ ಸಿದ್ಧಾಂತವನ್ನು ಜಗತ್ತಿಗೆ ನೀಡಿದವರು. ಆ ಮಾರ್ಕ್ಸ್ ವಾದದ ಬೆಳಕಿನಲ್ಲಿ ಈ ದೇಶದ ಮಹಾನ್ ಕ್ರಾಂತಿಕಾರಿ ಕಾಮ್ರೇಡ್ ಶಿವದಾಸ್ ಘೋಷ್ ರವರು ನಮ್ಮ ಪಕ್ಷ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ವನ್ನು ಈ ನೆಲದಲ್ಲಿ ಸ್ಥಾಪಿಸಿದರು. ಅಂತೆಯೇ ನಾವೆಲ್ಲರೂ ಮಾರ್ಕ್ಸ್ ವಾದ ಲೆನಿನ್ ವಾದ ಮತ್ತು ಶಿವದಾಸ್ ಘೋಷ್ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಗತ್ ಸಿಂಗ್ ನೇತಾಜಿ ಕಂಡಂತೆ ಈ ದೇಶದಲ್ಲಿಯೂ ಸಮಾಜವಾದಿ ಕ್ರಾಂತಿ ನಡೆಸಲು ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಶರಣು ಗಡ್ಡಿ, ರಮೇಶ್.ವಿ, ಶರಣು ಪಾಟೀಲ್, ಗಂಗರಾಜ ಅಳ್ಳಳ್ಳಿ, ದೇವರಾಜ್, ಮಂಜುಳಾ,ಶಾರದಾ ಮುಂತಾದವರು ಭಾಗವಹಿಸಿದ್ದರು.
Comments are closed.