ಕೊಪ್ಪಳ ಜಿಲ್ಲೆಯು ಅಕ್ಷರಶಃ ಆಕರ್ಷಣೀಯ ತಾಣ: ರಾಹುಲ್ ರತ್ನಂ ಪಾಂಡೆಯ
Kannadanet 24×7 News ಹಲವಾರು ಐತಿಹಾಸಿಕ ಮತ್ತು ಪ್ರಸಿದ್ಧ ಧಾರ್ಮಿಕ ತಾಣಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ವಿಶೇಷ ಆಕರ್ಷಣೀಯ ಕೇಂದ್ರವಾಗಿ ಎಲ್ಲರ ಜನಮನ ಸೆಳೆಯುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಆನೆಗೊಂದಿಯ ತಳವಾರಘಟ್ಟ ರಸ್ತೆಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಮಾರ್ಚ್ 12ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಮಹತ್ವದ್ದು ಏನು ಇಲ್ಲ ಎಂದು ಕೆಲವರು ಹೇಳುತ್ತಾರೆ. ಹಾಗೆ ಹೇಳುವವರು ಒಮ್ಮೆ ಕೊಪ್ಪಳ ಜಿಲ್ಲೆಗೆ ಬಂದು ಸುತ್ತಿದಾಗ ಅವರ ಅಭಿಪ್ರಾಯ ಬದಲಾಗುತ್ತದೆ. ಕೊಪ್ಪಳ ಜಿಲ್ಲೆಯು ಅವರ ನೆಚ್ಚಿನ ತಾಣಗಳಲ್ಲಿ ಒಂದಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಕೊಪ್ಪಳ ಜಿಲ್ಲೆಯು ವಿಶೇಷ ಐತಿಹ್ಯ ಹೊಂದಿದ ಪ್ರದೇಶವಾಗಿದೆ ಎಂದು ತಿಳಿಸಿದರು.
Comments are closed.