ಆನೆಗೊಂದಿ ಉತ್ಸವದ ವೇದಿಕೆ ಪರಿಕಲ್ಪನೆ ಅದ್ಭುತ: ಯಶೋಧಾ ವಂಟಗೋಡಿ
Kannadanet 24×7 News ಐತಿಹಾಸಿಕ ಆನೆಗೊಂದಿ ಉತ್ಸವ-2024ರ ವೇದಿಕೆಯ ಪರಿಕಲ್ಪನೆಯು ಅಭಿನಂದನಾರ್ಹ ಸಂಗತಿಯಾಗಿದೆ. ಮಾನ್ಯ ಶಾಸಕರು ಮುಂದೆ ನಿಂತು ಇತಿಹಾಸ ಹಿನ್ನೆಲೆಯ ವೇದಿಕೆಯನ್ನು ನಿರ್ಮಿಸಲು ಶ್ರಮಿಸಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಆನೆಗೊಂದಿಯ ತಳವಾರಘಟ್ಟ ರಸ್ತೆಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಮಾರ್ಚ್ 12ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಟೀಮ್ ವರ್ಕ್ಗೆ ಉತ್ತಮ ಉದಾಹರಣೆಯು ಆನೆಗೊಂದಿ ಉತ್ಸವವಾಗಿದೆ. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಪರಿಶ್ರಮದಿಂದ ಉತ್ಸವ ಯಶಸ್ವಿ ಸಾಧ್ಯವಾಗಿದೆ ಎಂದು ತಿಳಿಸಿದರು.
Comments are closed.