ಗ್ಯಾರಂಟಿ ಯೋಜನೆ ಮನೆ‌ ಮನೆ ಸರ್ವೆ, ಮಾಹಿತಿ ಹಂಚಿಕೆ

Get real time updates directly on you device, subscribe now.

ಕೊಪ್ಪಳ: ಕೊಪ್ಪಳ ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿದರು. ಸರಿ ಯೋಚನೆಗಳಲ್ಲಿ 2000 ಗೃಹಲಕ್ಷ್ಮಿ ಗೃಹಜೋತಿ ಅನ್ನಭಾಗ್ಯ ಇವನಿಗೆ ಮತ್ತು ಶಕ್ತಿ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಈ ಒಂದು ಪ್ರಯೋಜನಗಳನ್ನು ಪಡೆದುಕೊಂಡಂತ ಜನ ತಮ್ಮ ಸಂತಸವನ್ನ ಹಂಚಿಕೊಂಡರು. ತಾಂತ್ರಿಕ ದೋಷಗಳಿಂದ ತಡವಾಗಿರುವ ನಿಂತಿರುವ ಮತ್ತು ಬಂದ್ ಆಗಿರುವ ಯೋಜನೆಗಳನ್ನ ಮರು ಸ್ಥಾಪಿಸಲು ಅಗತ್ಯ ದಾಖಲೆಗಳನ್ನು ನೀಡುವಂತೆ ಸದಸ್ಯರು ವಿನಂತಿಸಿದರು ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಅಶೋಕ್ ಗೋರಂಟಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ವಾರ್ಡ್ ಸದಸ್ಯರಾದ ಅಕ್ಬರ್ ಪಾಶಾ ಪಲ್ಟನ್, ಎಸ್. ಟಿ. ಘಟಕದ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಮಂಜುನಾಥ ಗೊಂಡಬಾಳ, ರಾಮು ಪೂಜಾರ ಸೇರಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!