ಕವಿರಾಜಮಾರ್ಗ ಆ ಕಾಲದ ಕನ್ನಡ ಜಗತ್ತನ್ನು ಪರಿಚಯಿಸುತ್ತದೆ; ಎಚ್.ಎಸ್.ಪಾಟೀಲ
ಕೊಪ್ಪಳ; ಮಾ,೧೧,- ಕವಿರಾಜಮಾರ್ಗ ಕನ್ನಡ ನಾಡಿನ ಆ ಕಾಲದ ಜಗತ್ತನ್ನು ಪರಿಚಯಿಸುತ್ತದೆ. ಈ ಕೃತಿಯ ಬಗ್ಗೆ ನಡೆದಷ್ಟು ಚರ್ಚೆಗಳು ಯಾವ ಕೃತಿಯ ಬಗ್ಗೆಯೂ ನಡೆದಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಾದ ಎಚ್.ಎಸ್.ಪಾಟೀಲರವರು ನಡಿದರು. ಅವರು ಶಕ್ತಿಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ, ಭಾಗ್ಯನಗರ-ಕೊಪ್ಪಳ ಇವರಿಂದ ನಡೆದ ವಿಚಾರ ಮಂಥನಕೂಟ-೪೮ರಲ್ಲಿ ‘ಕವಿರಾಜಮಾರ್ಗ’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನುಡಿದರು. ಕವಿರಾಜಮಾರ್ಗ ಕನ್ನಡ ನಾಡಿನ ಮಹತ್ವದ ಕೃತಿಯಾಗಿದೆ. ಇದು ಅಲಂಕಾರಿಕ ಕೃತಿಯಾಗಿದ್ದು ಕಾವ್ಯ ಹೇಗಿರಬೇಕು ಎಂಬ ಬಗ್ಗೆ ವಿಫುಲವಾದ ಮಾರ್ಗಗಳನ್ನು ತೋರುತ್ತದೆ. ಕವಿಗಳಿಗೆ ಮತ್ತು ಅರಸರಿಗೂ ಇದು ಮಾರ್ಗವಾಗಿದ್ದು ಅದಕ್ಕಾಗಿ ಇದನ್ನು ಕವಿರಾಜಮಾರ್ಗ ಎಂದು ಕರೆದಿದ್ದಾರೆ. ಕನ್ನಡ ನಾಡು ಎಲ್ಲಿಂದ ಎಲ್ಲಿಯ ವರೆಗೆ ಹರಡಿಕೊಂಡಿತ್ತು ಎಂಬ ಬಗ್ಗೆ ಮಾಹಿತಿ ದೊರೆಯುವುದರ ಜೊತೆಗೆ ಕನ್ನಡ ನಾಡಿನ ಜನರು ಹೇಗೆಲ್ಲಾ ವೀರ-ಶೂರ-ದೀರರಾಗಿದ್ದರು, ಅಷ್ಟೇ ಅಲ್ಲದೇ ಅವರು ಎಂತಹ ಪ್ರಬುದ್ಧರಾಗಿದ್ದರು ಎಂಬುದನ್ನು ಈ ಕೃತಿ ತಿಳಿಸುತ್ತದೆ ಎಂದರು. ನಂತರ ನಡೆದ ಸಂವಾದದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಎ.ಎಂ.ಮದರಿ, ಈಶ್ವರ ಹತ್ತಿ, ಬಸವರಾಜ ಪೂಜಾರ, ಸಿದ್ಧಲಿಂಗಪ್ಪ ಕೊಟ್ನೆಕಲ್, ಪ್ರವೀಣ ಪೋ. ಪಾಟೀಲ ಮುಂತಾದವರು ಎತ್ತಿದ ಪ್ರಶ್ನೆಗಳಿಗೆ ಎಚ್.ಎಸ್.ಪಾಟೀಲರವರು ಉತ್ತರಿಸಿದರು. ಈ ಕಾರ್ಯಕ್ರಮದಲ್ಲಿ ಸಂಯೋಜಕಾರಾದ ಡಿ.ಎಂ.ಬಡಿಗೇರಾರವರು ಉಪಸ್ಥಿತರಿದ್ದರು.
Comments are closed.