ಕರಾಟೆ ತರಬೇತಿದಾರ ಡಾ. ಶಿಹಾನ್ ಜಬೀವುಲ್ಲಾರವರಿಗೆ ಪೈಲ್ವಾನ್ ರಂಜಾನಸಾಬ್ ರಾಜ್ಯ ಪ್ರಶಸ್ತಿ
ಗಂಗಾವತಿ: ಮಾರ್ಚ್-೦೯ ಶನಿವಾರ ಕೊಪ್ಪಳದ ಸುನ್ನಿ ಮುಸ್ಲಿಂ ಶಾದಿ ಮಹಲ್‌ನಲ್ಲಿ ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ನೂತನ ತಾಲೂಕು ಮತ್ತು ಜಿಲ್ಲಾ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗಂಗಾವತಿಯ ಪಿಂಜಾರ್ ಸಮಾಜದ ಖ್ಯಾತ ಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾರವರ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಸಾಧನೆಯನ್ನು ಗುರುತಿಸಿ ಪೈಲ್ವಾನ್ ರಂಜಾನ್‌ಸಾಬ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ರಾಜ್ಯಾಧ್ಯಕ್ಷರಾದ ಹೆಚ್ ಜಲೀಲ್‌ಸಾಬ್ ಮತ್ತು ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಕಾಸಿಮಲಿ ಮುದ್ದಾಬಳ್ಳಿ ಮತ್ತು ಗಂಗಾವತಿ ತಾಲೂಕು ಪಿಂಜಾರ ಸಂಘದ ಅಧ್ಯಕ್ಷರಾದ ಟಿಪ್ಪು ಸುಲ್ತಾನ್ ಮಂಗಳೂರು ಇವರು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
Comments are closed.