ಆನೆಗೊಂದಿ ಉತ್ಸವಕ್ಕೆ ಸಿದ್ಧತೆ ಬಲು ಜೋರು

Get real time updates directly on you device, subscribe now.

ಆನೆಗೊಂದಿ ಉತ್ಸವ: ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಕರ್ಷಕ
 : ಆನೆಗೊಂದಿ ಉತ್ಸವ-2024ರ ಅಂಗವಾಗಿ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಾರ್ಚ್ 9ರಂದು ಆಕರ್ಷಕ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜರುಗಿತು.
ಮಾ.11 ಮತ್ತು 12ರಂದು ನಡೆಯಲಿರುವ ಆನೆಗೊಂದಿ ಉತ್ಸವ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗಂಗಾವತಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಸಹಯೋಗದಲ್ಲಿ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ವಿವಿಧ ತಂಡಗಳಿಂದ ನೋಂದಾಯಿಸಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳನ್ನು ವೀಕ್ಷಿಸಿದರು.
ಆನೆಗೊಂದಿ ಉತ್ಸವ: ಹಗ್ಗ-ಜಗ್ಗಾಟದಲ್ಲಿ ಹೊಸಕೇರಾ ತಂಡ ಜಯ
 ಆನೆಗೊಂದಿ ಉತ್ಸವ-2024ರ ಅಂಗವಾಗಿ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಾರ್ಚ್ 9ರಂದು ಹಮ್ಮಿಕೊಂಡಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಗಂಗಾವತಿ ತಾಲ್ಲೂಕಿನ ಹೊಸಕೇರಾದ ದುರ್ಗಾ ಪರಮೇಶ್ವರಿ ತಂಡವು ಜಯಗಳಿಸಿದೆ. 
ಮಾರ್ಚ್ 11 ಮತ್ತು 12ರಂದು ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ ನಿಮಿತ್ತ ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಇದರ ಭಾಗವಾಗಿ ಶನಿವಾರ ಜರುಗಿದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಕೇರಾದ ದುರ್ಗಾ ಪರಮೇಶ್ವರಿ ತಂಡವು ಇತ್ತೀಚೆಗೆ ನಡೆದ ಕನಕಗಿರಿ ಉತ್ಸವದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು.
ಆನೆಗೊಂದಿ ಉತ್ಸವದ ಹಗ್ಗ-ಜಗ್ಗಾಟದಲ್ಲಿ ಕೊಪ್ಪಳದ ನಾಗರಾಜ ನೇತೃತ್ವದ ತಂಡ ದ್ವಿತೀಯ ಹಾಗೂ ಕನಕಗಿರಿಯ ತಾಲ್ಲೂಕಿನ ಹನುಮನಾಳ ತಂಡವು ತೃತೀಯ ಸ್ಥಾನ ಪಡೆದಿದ್ದು, ಈ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು.
ಆನೆಗೊಂದಿ ಉತ್ಸವ: ಶಾಸಕರಿಂದ ಸಿದ್ಧತೆ ಪರಿಶೀಲನೆ
—- ಮಾರ್ಚ್ 11 ಮತ್ತು 12ರಂದು ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ-2024ರ ಸಿದ್ಧತೆಗಳನ್ನು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಮಾರ್ಚ್ 9ರಂದು ಪರಿಶೀಲಿಸಿದರು.
ಶಾಸಕರು ಉತ್ಸವದ ಮುಖ್ಯ ವೇದಿಕೆ, ಮಾಧ್ಯಮದ ಗ್ಯಾಲರಿ, ಗಣ್ಯರು, ಸಾರ್ವಜನಿಕರಿಗೆ ಕೂಡುವ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸಿದ್ಧತೆಗಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
 ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿಯಲ್ಲಿ 2024ರ ಆನೆಗೊಂದಿ ಉತ್ಸವದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. 
ಮಾರ್ಚ್ 11 ಮತ್ತು 12ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಉತ್ಸವದ ತಯಾರಿಯ ಭಾಗವಾದ ವೇದಿಕೆ ಸ್ಥಳ ಮತ್ತು ಆವರಣ ಸ್ವಚ್ಛತಾ ಕಾರ್ಯಗಳು ನಡೆದಿದೆ. ಅಲ್ಲದೇ ಆನೆಗೊಂದಿಯ ಐತಿಹಾಸಿಕ ಸ್ಥಳಗಳ ಸ್ವಚ್ಛತಾ ಕಾರ್ಯಗಳು ಸಹ ಅಲ್ಲಲ್ಲಿ ನಡೆಯುತ್ತಲಿವೆ. ಉತ್ಸವದ ಮುಖ್ಯ ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಅಳವಡಿಕೆ, ಗಣ್ಯರ ಸಾರ್ವಜನಿಕರ ಪ್ರತ್ಯೇಕ ಆಸನಗಳ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ನಾನಾ ಕಾರ್ಯಗಳು ಬಲು ಜೋರಾಗಿ ನಡೆಯುತ್ತಿವೆ.
ಆನೆಗೊಂದಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಫಲಕಗಳು,.ವಿದ್ಯುತ್ ದೀಪಗಳ ಅಲಂಕಾರ ಸಾರ್ವಜನಿಕರ ಗಮನ ಸೆಳೆಯುವಂತಿವೆ.
ಆನೆಗೊಂದಿ ಉತ್ಸವ: ಮುಕ್ತ ಮ್ಯಾರಥಾನ್ ಸ್ಪರ್ಧೆ ಮಾ.10ಕ್ಕೆ
—-
  ಆನೆಗೊಂದಿ ಉತ್ಸವ-2024ರ ಅಂಗವಾಗಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಮ್ಯಾರಥಾನ್ ಸ್ಪರ್ಧೆಯನ್ನು ಮಾರ್ಚ್ 10ರಂದು ಬೆಳಿಗ್ಗೆ 6.30 ಗಂಟೆಗೆ ಆನೆಗೊಂದಿಯ ಕಡೆಬಾಗಿಲುದಲ್ಲಿ ಏರ್ಪಡಿಸಲಾಗಿದೆ.
ಮ್ಯಾರಾಥಾನ್ ಆನೆಗೊಂದಿಯ ಕಡೆಬಾಗಿಲುದಿಂದ ಪ್ರಾರಂಭಗೊಂಡು ಅಂಜನಾದ್ರಿ ಬೆಟ್ಟದ ದಾರಿ, ಪಂಪಾ ಸರೋವರವರೆಗೆ ಮುಕ್ತಾಯವಾಗಲಿದೆ.
ಮಾ.10ರ ಬೆಳಿಗ್ಗೆ 6 ಗಂಟೆಯೊಳಗಾಗಿ ನೋದಣಿ ಕಡ್ಡಾಯವಾಗಿರುತ್ತದೆ. ಈ ಮ್ಯಾರಾಥಾನ್ ಸ್ಪರ್ಧೆಯು 5 ಕಿ.ಮೀ ರಸ್ತೆ ಓಟ ಒಳಗೊಂಡಿದ್ದು, ಸ್ಪರ್ಧಾಳುಗಳ ವೈದ್ಯರಿಂದ ದೈಹಿಕ ಸಧೃಡ ಪ್ರಮಾಣ ಪತ್ರ ಕಡ್ಡಾಯವಾಗಿ ತರತಬೇಕು. ಸ್ಪರ್ಧಾಳುಗಳು ನಿಗದಿತ ಸಮಯದೊಳಗೆ ಹಾಜರಿರಬೇಕು. ನಿರ್ಣಾಯಕರ ನಿರ್ಣಯವೇ ಅಂತಿಮ ತೀರ್ಮಾನವಾಗಿರುತ್ತದೆ. ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇದ್ದು, ಪ್ರಯಾಣ ಭತ್ಯೆ, ದಿನಭತ್ಯೆ, ನೀಡಲಾಗುವುದಿಲ್ಲ. ನೋಂದಣಿ ಮಾಡಿಸುವಾಗ ತಂಡದ ಪ್ರತಿಯೊಬ್ಬ ಸದಸ್ಯರ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಝರಾಕ್ಸ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶರಣಬಸವ ಬಂಡಿಹಾಳ ಮೊ.9036773070, ಶಿವಕಾಂತ ಮೊ: 9916799482, ವಿಠಲ ನಾಗ್ಲಿ ಮೊ: 9964279957ಗೆ ಸಂಪರ್ಕಿಸಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ ಜಾಬಗೌಡ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!