ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರನ್ನೇ ಬದಲಾಯಿಸಿದ ಬ್ಯಾನರ್ ಗಳು

Get real time updates directly on you device, subscribe now.

ಕೊಪ್ಪಳ : ಆನೆಗೊಂದಿ ಉತ್ಸವದ ಅಂಗವಾಗಿ ಕೊಪ್ಪಳ ನಗರದ ವಿವಿಧಡೆಯಲ್ಲಿ ಹಾಕಲಾಗಿರುವ ಬ್ಯಾನರ್ ಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರನ್ನೇ ಬದಲಾಯಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಎಂದು ಈ ಬ್ಯಾನರ್ಗಳಲ್ಲಿ ಮುದ್ರಿಸಲಾಗಿದೆ. ಕೊಪ್ಪಳದ ಮುಖ್ಯರಸ್ತೆಯಲ್ಲಿ ಎರಡು ಬದಿಯಲ್ಲಿ ಹಾಕಲಾಗಿರುವ ವಿವಿಧ ಬ್ಯಾನರ್ ಗಳಲ್ಲಿ ಈ ತಪ್ಪು ಎದ್ದು ಕಾಣುವಂತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲಾಖೆಯ ಹೆಸರೇ ಬದಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆನೆಗೊಂದಿ ಉತ್ಸವಕ್ಕೆ ಸ್ವಾಗತ ಕೋರುವ ಈ ಬ್ಯಾನರ್ ಗಳಲ್ಲಿ ಈ ರೀತಿಯ ತಪ್ಪುಗಳು ಕಂಡುಬಂದಿದ್ದರೂ ಸಹ ಈತನಕ ಅಧಿಕಾರಿಗಳು ಇದರ ಕುರಿತು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿರುವ ಆನೆಗೊಂದಿ ಉತ್ಸವ 2024ರ ಈ ಸ್ವಾಗತ ಕೋರುವ ಬ್ಯಾನರ್ ಗಳಲ್ಲಿ ಜಿಲ್ಲಾಡಳಿತದಿಂದ ಹಾಕಲಾಗಿರುವ ಬ್ಯಾನರ್ಗಳಲ್ಲಿ ಯಾವುದೇ ರೀತಿಯ ತಪ್ಪುಗಳು ಕಂಡುಬಂದಿಲ್ಲ ಆದರೆ ಪ್ರವಾಸೋದ್ಯಮ ಇಲಾಖೆಯವರು ಹಾಕಿದ್ದಾರೆ ಎನ್ನಲಾಗಿರುವ ಈ ಬ್ಯಾನರ್ ಗಳಲ್ಲಿ ಈ ರೀತಿಯ ತಪ್ಪು ಕಂಡುಬಂದಿದ್ದರು ಸಹ ಈತನಕ ಯಾವುದೇ ರೀತಿಯ ಬದಲಾವಣೆಗೆ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ . ಇದು ಕೇವಲ ಒಂದು ಬ್ಯಾನರ್ ನ ಕಥೆಯಲ್ಲ ಕೊಪ್ಪಳದಲ್ಲಿ ಹಾಕಲಾಗಿರುವ ಎಲ್ಲಾ ಬ್ಯಾನರ್ಗಳಲ್ಲೂ ಇದೇ ರೀತಿಯ ತಪ್ಪು ಕಂಡು ಕಂಡು ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: