ವಿಜೃಂಭಣೆಯಿಂದ ಜರುಗಿದ ಗೊಂಡಬಾಳ ಗ್ರಾಮದ ಬನಶಂಕರಿ ದೇವಿ ರಥೋತ್ಸವ

Get real time updates directly on you device, subscribe now.

ಕೊಪ್ಪಳ,ಫೆ,24; ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಸಾವಿರಾರು ಭಕ್ತರ ನಡವೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.  ರಥಕ್ಕೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಹೂ, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಫೆ, 22 ಗುರುವಾರ ಬೆಳಿಗ್ಗೆ ಶ್ರೀದೇವಿಗೆ ಕಂಕಣಧಾರಣ ಕಾರ್ಯಕ್ರಮ ಫೆ,23 ಶುಕ್ರವಾರ ಬೆಳಗ್ಗೆ ಶ್ರೀದೇವಿಯ ಮಹಾರಥೋತ್ಸವದ ಶಾಂತಿ ಮತ್ತು ಪುರ್ಣಾಹುತಿ ಸಂಜೆ ಲಘುರಥೋತ್ಸವ (ಉಚ್ಛಾಯ) ಫೆ,24 ಶನಿವಾರ ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಾನದಲ್ಲಿ ಹೋಮ ಹವನ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 12-00 ಗಂಟೆಯಿಂದ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಹತ್ತಿರ ಅನ್ನಸಂತರ್ಪಣೆ ನಡೆಯವುದು. ಸಂಜೆ 5;30ಕ್ಕೆ ಶತಾಯುಷಿ ಕಲ್ಲಮ್ಮ ನಿಂಗಪ್ಪ ಕರ್ಕಿಹಳ್ಳಿ ಇವರು ಶ್ರೀ ದೇವಿಯ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ರಾತ್ರಿ 8-00 ಗಂಟೆಗೆ ಶಾಲಾ ಮಕ್ಕಳಿಂದ ಶ್ರೀ ಬನಶಂಕರಿದೇವಿ ದೇವಸ್ಥಾನದ ಹತ್ತಿರ ವಿವಿಧ ನೃತ್ಯ ಮತ್ತು ಡ್ಯಾನ್ಸ್ ಕಾರ್ಯಕ್ರಮಗಳು ನಡೆಯಿತು. ಗೊಂಡಬಾಳ ಹಾಗೂ ಸುತ್ತ ಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು. ಫೆ, 25 ರವಿವಾರ ಸಂಜೆ ಶ್ರೀ ದೇವಿಯ ಕಡುಬಿನ ಕಾಳಗ (ಛಟ್ಟು) ಹಾಗೂ ಮದ್ದು ಸುಡುವುದು ರಾತ್ರಿ 10-30 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ ಗೊಂಡಬಾಳ
ಇವರಿಂದ ಅಣ್ಣನ ಅರಮನೆ ಎಂಬ ಸುಂದರ ಸಾಮಾಜಿಕ ನಾಟಕ ನಡೆಯುತ್ತದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: