ಗ್ಯಾರಂಟಿ ಸ್ಕೀಂ ಬಗ್ಗೆ ಬಿಜೆಪಿಯ ಸುಳ್ಳು ಪ್ರಚಾರ : ಜ್ಯೋತಿ ಟೀಕೆ

Get real time updates directly on you device, subscribe now.

ಕೊಪ್ಪಳ: ರಾಜ್ಯದಲ್ಲಿ ಕಳೆದ ವರ್ಷದಿಂದ ಆರಂಭವಾಗಿರುವ ಕಾಂಗ್ರೆಸ್ ರಾಜ್ಯ ಸರಕಾರದ ಗ್ಯಾರಂಟಿ ಸ್ಕೀಂಗಳು ಬಡಜನರ ಪಾಲಿನ ಆಶಾಕಿರಣಗಳಾಗಿದ್ದು ಬಿಜೆಪಿ ಸುಳ್ಳು ಪ್ರಚಾರ ಮಾಡುವ ಮೂಲಕ ಜನರಿಗೆ ವಂಚಿಸುತ್ತಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಬಡಜನರಿಗಾಗಿ ಮಾಡಿರುವ ಅನ್ನಭಾಗ್ಯ, ಯುವನಿಧಿ, ಗೃಹಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ, ಅದಕ್ಕಾಗಿ ಬಜೆಟ್ನಲ್ಲಿ ಸಹ ಅನುದಾನ ಒದಗಿಸಿದ್ದು, ಯಾರ ಮೇಲೂ ಅದರ ಭಾರ ಹಾಕಿಲ್ಲ. ಇಂತಹ ಸನ್ನಿವೇಶದಲ್ಲಿ ಬಿಜೆಪಿಯಲ್ಲಿನ ಚುನಾಯಿತ ಜನಪ್ರತಿನಿಧಿಗಳೂ ಸೇರಿದಂತೆ ಅವರ ಏಜಂಟರು ಮತ್ತು ಐಟಿ ಸೆಲ್‌ನ ಜನ ಕೇವಲ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ, ಅದಕ್ಕೆ ಸಮರ್ಪಕವಾದ ಉತ್ತರ ನೀಡಲು ಯೋಜನೆಯು ಎಲ್ಲರಿಗೂ ದೊರೆಯುವಂತೆ ಮಾಡಲು ಗ್ಯಾರಂಟಿ ಅನುಷ್ಠಾನ ಸಮಿತಿಯೊಂದನ್ನು ಜಿಲ್ಲಾ ತಾಲೂಕ ಮತ್ತು ರಾಜ್ಯಮಟ್ಟದಲ್ಲಿ ಮಾಡಲಾಗಿದೆ, ಶೀಘ್ರ ಪೂರ್ಣ ಪ್ರಮಾಣದ ಕೆಲಸ ಮಾಡಲಿದೆ ಎಂದಿರುವ ಅವರು ಸರಿಯಾದ ಅಂಕಿ ಸಂಖ್ಯೆ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಸ್ಕೀಂ ಮೂಲಕ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಹೇಳಿಕೆ ಬಾಲಿಶವಾದದ್ದು ಕಾರಣ ಎಲ್ಲಾ ಯೋಜನೆಯ ಹಣ ಡಿಬಿಟಿ ಮೂಲಕ ನೇರ ವರ್ಗಾವಣೆ ಆಗುತ್ತವೆ, ಇಲ್ಲಿ ಯಾರೂ ಹಣವನ್ನು ಹಿಡಿದುಕೊಂಡು ಕೈಯಿಂದ ಹಂಚುತ್ತಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸುವದನ್ನು ಬಿಜೆಪಿ ಬಿಡಬೇಕು ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ರಣಹೇಡಿ ಸುಳ್ಳುಬುರುಕರಿಗೆ ಜನ ಸರಿಯಾದ ಉತ್ತರ ಕೊಡಲಿದ್ದಾರೆ. ಬಿಟ್ಟಿ ಭಾಗ್ಯ ಎಂದು ತೆಗಳುವ ಮೋದಿಶಾ ಗುಲಾಮರಾದ ಬಿಜೆಪಿಯ ಸಂಸದರು, ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲನ್ನು ಕೊಡಿಸಲಾರದಷ್ಟು ಅಸಮರ್ಥರಾಗಿದ್ದಾರೆ ಎಂದು ಜ್ಯೋತಿ ಮೊದಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: