ಕನಕಗಿರಿ ಉತ್ಸವ: ಮೈದಾನ ಸಿದ್ಧತೆ, ಶುಚಿತ್ವ ಕಾರ್ಯ
ಕಣ್ಣಿದ್ದರೇ ಕನಕಗಿರಿ ನೋಡು, ಕಾಲಿದ್ದರೇ ಹಂಪೆಯ ನೋಡು ಎಂಬ ಮಾತಿನಂತೆ ಐತಿಹಾಸಿಕ ದೇವಾಲಯಗಳನ್ನು ಹೊಂದಿರುವ ಕನಕಗಿರಿಯಲ್ಲಿ 2024ರ ಕನಕಗಿರಿ ಉತ್ಸವದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
ಕನಕಗಿರಿ ಉತ್ಸವದ ವೇದಿಕೆ ಹಾಗೂ ಇತರ ಸ್ಥಳಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಕನಕಗಿರಿ ತಹಶೀಲ್ದಾರರಾದ ವಿಶ್ವನಾಥ ಮುರಡಿ ಅವರು ಫೆಬ್ರವರಿ 23ರಂದು ಪರಿಶೀಲಿಸಿದರು.
2023-24ನೇ ಸಾಲಿನ ಕನಕಗಿರಿ ಉತ್ಸವವು ಮಾರ್ಚ್ 2 ಮತ್ತು 3ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಉತ್ಸವದ ತಯಾರಿಯ ಭಾಗವಾದ ವೇದಿಕೆ ಸ್ಥಳ ಮತ್ತು ಆವರಣ ಸ್ವಚ್ಛತಾ ಕಾರ್ಯಗಳು ನಡೆದಿದೆ. ಅಲ್ಲದೇ ಕನಕಗಿರಿಯ ಐತಿಹಾಸಿಕ ಸ್ಥಳಗಳ ಸ್ವಚ್ಛತಾ ಕಾರ್ಯಗಳು ಸಹ ಅಲ್ಲಲ್ಲಿ ನಡೆಯುತ್ತಲಿವೆ. ಉತ್ಸವದ ಮುಖ್ಯ ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಅಳವಡಿಕೆ, ಗಣ್ಯರ ಸಾರ್ವಜನಿಕರ ಪ್ರತ್ಯೇಕ ಆಸನಗಳ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ನಾನಾ ಕಾರ್ಯಗಳ ಸಿದ್ದತೆ ಬಿರುಸಿನಿಂದ ನಡೆದಿದೆ.
Comments are closed.