ದಿನಾಂಕ ೨೬-೦೧-೨೦೨೪ ಶುಕ್ರವಾರ, ಸಂಜೆ: ೫;೦೦ ಗಂಟೆಗೆ ಉಚ್ಛಾಯ (ಲಘು ರಥೋತ್ಸವ) ಹಾಗೂ ಸಂಗೀತ ಕಾರ್ಯಕ್ರಮ
ಉಚ್ಛಾಯ
ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನ ಲಘು ರಥವನ್ನು ಎಳೆಯುವದು ಒಂದು ಸತ್ ಸಂಪ್ರದಾಯ.ಇದಕ್ಕೆ ‘ಉಚ್ಛಾಯ’ ಎಂತಲೂ ಕರೆಯುತ್ತಾರೆ.ಅಂದು ಸಾಯಂಕಾಲ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ಜರುಗುವುದು ವಾಡಿಕೆ.ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ.
ಉದ್ದೇಶ:ಮಹಾರಥೋತ್ಸವು ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬುದೇ ಈ ಲಘು ರಥೊತ್ಸವದ ಉದ್ದೇಶ, ಮಹಾರಥೋತ್ಸವಕ್ಕೆ ಮುನ್ನುಡಿಯೂ ಆಗಿದೆ.
ಸುದ್ದಿ-೨
ಸಂಗೀತ ಕಾರ್ಯಕ್ರಮ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ದಿನಾಂಕ ೨೬.೦೧.೨೦೨೪ ಸಂಜೆ ೬:೦೦ಗಂಟೆಗೆ ಕೈಲಾಸ ಮಂಟಪದ ವೇದಿಕೆಯಲ್ಲಿ ಜರುಗಲಿದೆ.ಪರಮ ಪೂಜ್ಯ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಹೂವಿನಹಡಗಲಿದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಕು. ರಚನಾ ರಮೇಶ ಬಳ್ಳೊಳ್ಳಿ, ಹನಗುಂದ, ಕು. ಧೃತಿ ಹನುಮರಡ್ಡಿ ಮಾಲಿ ಪಾಟೀಲ್, ಗಂಗಾವತಿ, ಕು. ಇಂಚರಾ ಸುಧೀಂದ್ರ ಪೂಜಾರ, ಕೊಪ್ಪಳ, ಕು. ಹರ್ಷಿತಾ ಭಾವಿ ಬೆಂಗಳೂರು ಇವರಿಂದ ಭರತನಾಟ್ಯ, ಕಾರ್ಯಕ್ರಮ ಜರುಗಲಿದೆ. ಮತ್ತು ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದಸಂಗೀತ ಸುನಾದ ಕಾರ್ಯಕ್ರಮ ಜರುಗಲಿದ್ದು, ಕು.ಹರ್ಷಿತಾ ಹಿರೇಮಠ, ಕು.ಸಿಂಚನಾ ತೋಟದ ಅರವಿಂದ ಗಾಯನ, ಶ್ರೀ ಗೌರಿ, ಕು. ಅಮೃತ, ಕು.ಸನ್ನಿಧಿ ಕೆಅರವಿಂದ ವಚನ, ಕು. ಸಂಜನಾ, ಕು. ಸಾಯಿ ಸಮರ್ಥ, ಕು. ಪುನೀತ ಅವರಿಂದ ತತ್ವಪದ, ಕು. ಖುಷಿ, ಕು. ಭಾನುಪ್ರೀಯ, ಕು. ಆರ್ಯ, ಕು. ಮಂಜುನಾಥ, ಕು.ವೈಷ್ಣವಿ ಅವರಿಂದ ದೇಶಭಕ್ತಿ ಗೀತೆ, ಕು. ಚೇತನ ರಡ್ಡಿ, ಕು. ಸಮರ್ಥ ಅವರಿಂದ ಹಾರ್ಮೋನಿಯಂ, ಶ್ರೀ ಗೌರಿ, ಕು.ಸನ್ನಿಧಿ ಎಂ ಹಾಗೂ ಸಂಗಡಿಗರಿಂದ ಜನಪದ, ಕು. ವರ್ಷಿಣಿ, ಕು. ನೇತ್ರಾವತಿ ಅವರಿಂದ ಭಾವಗೀತೆ, ಕು. ವೈಷ್ಣವಿ ಕೆ, ಕು. ತನು, ಕು. ತನ್ಮಯಿ ಅವರಿಂದ ಅಭಂಗವಾಣಿ ಕಾರ್ಯರಕ್ರಮ ನಡೆಸಿಕೊಡಲಿದ್ದಾರೆ. ನಂತರ ಕು. ಶ್ರೀ ಗೌರಿ, ಕು. ಸಂಜನಾ, ಕು. ಸಾಯಿ, ಕು. ಸನ್ನಿಧಿ, ಕು. ವೈಷ್ಣವಿ, ಕು. ಪುನೀತ, ಕು. ಅಮೃತ, ಕು. ಸನ್ನಿಧಿ ಎಂ (ಮಂಗಲವನು ಪಾಡುವೆನಾನು)ಮಂಗಲಗೀತೆ ಜರುಗುವುದು. ಕು. ಸಾಯಿ ದಿಶಾ, ಕು.ತನುಶ್ರೀ ಹಾಗೂ ಸಂಗಡಿಗರು ಪ್ರಾರ್ಥನೆ ನೆರವೇರಿಸುವರು. ಕು. ಸಂಜನಾ, ಕು. ಸಾಯಿ ಸಮರ್ಥ, ಕು. ವೈಷ್ಣವಿ ನಿರೂಪಿಸುವರು. ಹೆಚ್ಚಿನ ಮಾಹಿತಿಗಾಗಿ ೯೪೪೯೬೩೪೬೮೪ ಸಂಪರ್ಕಿಸಲು ಕೋರಲಾಗಿದೆ.
Comments are closed.