ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದಿ ೨೭/೦೧/೨೦೨೪ ರಿಂದ ೩೦/೦೧/೨೦೨೪ ರಕ್ತದಾನ ಶಿಬಿರ
ದಲ್ಲಿ ದಿನಾಂಕ ೨೭/೦೧/೨೦೨೪ರಿಂದ೩೦/೦೧/೨೦೨೪ರವರೆಗೆ ೦೪ ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಹಾಗೂಭಾರತೀಯರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾಘಟಕ, ಕೊಪ್ಪಳ ಇವರ ಸಹಯೋಗದೊಂದಿಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ’ರಕ್ತದಾನ ಶಿಬಿರ’ವನ್ನು ಬೆಳೆಗ್ಗೆ ೦೯:೦೦ ಗಂಟೆಯಿಂದ ಸಾಯಂಕಾಲ ೦೫:೦೦ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಹಾಗೂ ೨೭/೦೧೧೨೦೨೪ ರಿಂದ ೦೯/೦೧/೨೦೨೪ವರೆಗೆ ಸಂಚಾರಿರಕ್ತ ಸಂಗ್ರಹಣಾ ವಾಹನದಲ್ಲಿರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
೨೦೨೩ನೇ ವರ್ಷದ ನವಂಬರ್‌ವರೆಗೆಒಟ್ಟು ನಮ್ಮಜಿಲ್ಲೆಯಲ್ಲಿ ೧೦೯೪ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು ೯೩೨೮ ಜನ ಸ್ವಯಂ ಪ್ರೇರಿತರಾಗಿರಕ್ತದಾನ ಮಾಡಿರುತ್ತಾರೆ.ಒಟ್ಟು ೧೦೪೨೨ಜನರು ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.
೨೦೨೪ನೇ ಸಾಲಿನಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ, ಗವಿಮಠಇವರ ಸಹಯೋಗದಲ್ಲಿ ದಿನಾಂಕ ೨೭/೦೧/೨೦೨೪ರಿಂದ೩೦/೦೧/೨೦೨೪ರವರೆಗೆ ೦೪ ದಿನಗಳ ಕಾಲ ಜರುಗುವ ‘ರಕ್ತದಾನ ಶಿಬಿರ’ಕ್ಕೆ ೧೫ ವೈದ್ಯರತಂಡ, ೧೫ ಜನ ಪ್ರಯೋಗ ಶಾಲಾ ತಂತ್ರಜ್ಞರತಂಡ, ೨೦ ಜನ ಸ್ವಯಂ ಸೇವಕರತಂಡ ಹಾಗೂ ೫೦ಕಾಟ್ ಬೆಡ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸದರಿರಕ್ತದಾನ ಶಿಬಿರದಲ್ಲಿ ೧೪೦೦-೧೮೦೦ ಜನ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿರಕ್ತದಾನ ಮಾಡುತ್ತಾರೆಂದು ನಿರೀಕ್ಷಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನಮೂದಿಸಿದ ವ್ಯಕ್ತಿಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ:೯೦೦೮೯೯೬೬೪೬, ೯೪೪೮೮೧೪೧೫೬ ಈ ಮೋಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
Comments are closed.