ವೀಡಿಯೋ ಟ್ರೇಲರ್ ಸಾಂಗ್ ನೊಂದಿಗೆ ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಆಹ್ವಾನ

0

Get real time updates directly on you device, subscribe now.

 

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ೨೦೨೫ ರ ಮಹಾಜಾತ್ರೆಯ ಜಾತ್ರಾ ಮಹೋತ್ಸವದ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಈ ಬಾರಿಯೂ ಜನೇವರಿ ೧೫, ೧೬ ಹಾಗೂ ೧೭ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್ ನಾಳೆ ೦೨.೦೧.೨೦೨೫ ರ ಸಮಯ ಬೆಳಿಗ್ಗೆ ೧೧:೦೦ ಗಂಟೆಗೆಗವಿಮಠದ ಮುಂಭಾಗದಲ್ಲಿ ಸ್ವಚ್ಛತಾ ಸೇವೆಗೈಯುತ್ತಿರುವ ಸೇವಾ ಸಿಬ್ಬಂದಿಗಳಾದ (ಸಫಾಯಿಚಾರಿ)ಲಕ್ಷ್ಮಿ, ನಾಗಮ್ಮ, ಬರಮವ್ವ ಶೋಭಾ, ಲಕ್ಷ್ಮವ್ವ, ಈರಮ್ಮ, ಹುಲಿಗೆಮ್ಮ, ನಾಗಮ್ಮ, ಫಕೀರಮ್ಮ, ಗುಂಡಪ್ಪ, ಮಾತಂಗೆವ್ವಇವರು ಬಿಡುಗಡೆಗೊಳಿಸಿದರು. ಇದರಲ್ಲಿ

 

ಭಕ್ತಿಯ ಮನೆ ಮನಗಳಲ್ಲಿ

ಮುಕ್ತಿಯ ಕೆನೆ ನೆನಹಿನಲ್ಲಿ

ಓಂಕಾರವು ಕೋಟೆ ಕಟ್ಟಿ

ಬೆಟ್ಟಗಳು ಧ್ಯಾನದಲಿ

ಸಿದ್ದ ಪುರುಷ ಗವಿಸಿದ್ದನೇ

ಇಷ್ಟ ಪ್ರಾಣ ಭಾವದಲ್ಲಿ

ಜಾತ್ರೋತ್ಸವ ನಮ್ಮ ಯಾತ್ರೋತ್ಸವ

 

ಎಂಬ ಅಧಮ್ಯ, ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕ್ಕೆ ಜೀವ ತುಂಬುವ ಕಂಠಸಿರಿಯ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಮೈದುಂಬಿ ಹಾಡಿರುತ್ತಾರೆ. ಈ ಹಾಡಿನಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದ ವೈಭವದ ದೃಶ್ಯ, ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ಧೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶಒಳಗೊಂಡಿದೆ. ತೆಪ್ಪೋತ್ಸವ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯಪೂರ್ಣ ಪುಣ್ಯಕಾರ್ಯಗಳು ಇದರಲ್ಲಿ ಅಂತರ್ಗತವಾಗಿವೆ.ನಂದಿಕೋಲು ಕುಣಿತ, ಶ್ರೀ ಸಿದ್ಧೇಶ್ವರ ಮೂರ್ತಿ ಮೆರವಣಿಗೆ ಮತ್ತು ಭಕ್ತಿಯ ಸಿಂಚನದ ಚಿತ್ರ ವಿಡಿಯೋ ಸೊಬಗನ್ನು ಹೆಚ್ಚಿಸಿದೆ. ಇಲ್ಲಿನ ಪ್ರಾಕೃತಿಕ ಬೆಟ್ಟ-ಗುಡ್ಡಗಳ, ಕೆರೆ, ಸಹಜತೆಯ ವೈಭವ ಮತ್ತಷ್ಟು ವಿಡಿಯೋದ ಆಕರ್ಷಣೆ ಹೆಚ್ಚಿಸಿವೆ.

 

ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶ್ರೀ ಗವಿಮಠದ ಉಚಿತವಸತಿ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ನುಡಿ ಸೇವೆಗೈಯುವುತ್ತಿರುವದು ಮತ್ತೊಂದು ವೈಶಿಷ್ಟ್ಯತೆಯಾಗಿದೆ. ಈ ಹಾಡನ್ನು ಸುಮಾರು ೧೫೦೦ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತುಸಾವಿರಾರು ಮೇಣದ ದೀಪಗಳು ಹಾಗೂ ಪೇಪರ ಗ್ಲಾಸುಗಳನ್ನು ಬಳಸಿ ಚಿತ್ರಿಕರಣ ಮಾಡಲಾಗಿರುವ ವೀಡಿಯೋ ಟ್ರೇಲರ್ ಸಾಂಗ್‌ನೊಂದಿಗೆ ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಆಹ್ವಾನ ನೀಡಲಾಗಿದೆ.

ಈ ಕೆಳಕಂಡ ಲಿಂಕ್ ಮೂಲಕ ಹಾಡನ್ನು ಡೌನ್ಲೋಡ ಮಾಡಬಹುದು.

Get real time updates directly on you device, subscribe now.

Leave A Reply

Your email address will not be published.

error: Content is protected !!