AIMSS ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ 194 ನೇ ಜನ್ಮ ದಿನದ ಅಂಗವಾಗಿ ನರೇಗಾ ಕೂಲಿ ಕಾರ್ಮಿಕರ ನಡುವೆ ಪಾಕ್ಷಿಕ ಕಾರ್ಯಕ್ರಮ

0

Get real time updates directly on you device, subscribe now.

AIMSS ನ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗಿ ಅವರು “ಅಂದಿನ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಟವನ್ನು ಕಟ್ಟಿದವರು. ಶಿಕ್ಷಣದಿಂದಲೇ ಮಹಿಳೆಯರಿಗೆ ಮುಕ್ತಿ ಸಿಗುವುದು ಎಂದು ನಂಬಿದ್ದವರು. ಅವರು ಮಹಿಳಾ ಶಿಕ್ಷಣಕ್ಕಾಗಿ,ವಿಧವಾ ಪುನರ್ ವಿವಾಹಕ್ಕಾಗಿ ಧ್ವನಿ ಎತ್ತಿದ್ದರು. ಬಾಲ್ಯ ವಿವಾಹ, ವರದಕ್ಷಿಣೆ, ಜಾತಿ ತಾರತಮ್ಯ, ಮೌಢ್ಯತೆಯ ವಿರುದ್ಧ ಹೋರಾಟವನ್ನು ಕಟ್ಟಿದಂತಹ ಧೀರೆ. ಬಾಲಕಿಯರಿಗೆ ವಿದ್ಯೆ ಹೇಳಿಕೊಡಲು ಶಾಲೆಗೆ ಹೆಜ್ಜೆ ಇಡುತ್ತಿರುವಾಗ ಸುತ್ತಲಿನವರ ಅವಾಚ್ಯ ಬೈಗುಳ, ದಾರಿಯಲ್ಲಿ ಹೋಗುತ್ತಿದ್ದರೆ ಹಲ್ಲೆ ಮಾಡುವ ಪ್ರಯತ್ನ, ಸಗಣಿ ಎರಚಲು ಕಾದು ನಿಂತ ಪುರುಷರು. ಆದರೂ ಆಕೆ ಹಾಗೆಯೇ ಮುನ್ನಡೆದು ಶಾಲೆಗೆ ಹೋಗಿ ಬರುತ್ತಿರುವುದು ನಿಲ್ಲಲಿಲ್ಲ. ತಾನು ನಂಬಿದ ಸತ್ಯಕ್ಕಾಗಿ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ . ಬದಲಿಗೆ ಇನ್ನೂ ಹೆಚ್ಚು ದ್ರುಢವಾಗುತ್ತಾ ಹೋಯಿತು. ಮಹಿಳೆಯರು ಧೈರ್ಯವಾಗಿ ಮುನ್ನಡೆಯಬೇಕು, ಘನತೆಯಿಂದ ಗೌರವಯುತವಾಗಿ ಸಹ ಬಾಳ್ವೆಯಿಂದ ಬಾಳಬೇಕು ಎಂಬುದು ಸಾವಿತ್ರಿಬಾಯಿ ಫುಲೆ ಅವರ ಕನಸಾಗಿತ್ತು ” ಎಂದು ಹೇಳಿದರು.
 ಮತ್ತೋರ್ವ ಜಿಲ್ಲಾ ಸಂಘಟನಾಕಾರರಾದ ಶಾರದಾ ಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ” ಇಂದು ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಕೊಲೆ, ಮರ್ಯಾದೆಗೇಡು ಹತ್ಯೆಗಳು, ಆಸಿಡ್ ದಾಳಿ, ಗುಂಪು ಅತ್ಯಾಚಾರ..ಹೀಗೆ ಹಲವು ಬಗೆಯ ಅಗೌರವ, ಅನಾದರಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಸಾಂಸ್ಕೃತಿಕ ಅಧಪತನದಿಂದಾಗಿ ಸಮಾಜದಲ್ಲಿ ನೀತಿ-ನೈತಿಕತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಎಐಎಂಎಸ್ಎಸ್, ಸಾವಿತ್ರಿಬಾಯಿ ಫುಲೆ ಯಂತಹ ದಿಟ್ಟ ಹೋರಾಟಗಾರ್ತಿಯ ಜೀವನದಿಂದ ಸ್ಫೂರ್ತಿ ಪಡೆದು, ಅವರು ಕಂಡ ಕನಸಿನ ಸಮಾಜವನ್ನು ಕಟ್ಟಲು ಶ್ರಮಿಸುತ್ತಿದೆ.
 ಈ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕೊಪ್ಪಳ ಜಿಲ್ಲಾ ಘಟಕವು ಜನವರಿ 3 ರಿಂದ 18ರ ವರೆಗೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಮಹಿಳಾ ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಖಾತ್ರಿಗಾಗಿ ಆಗ್ರಹಿಸುತ್ತಾ ಪಾಕ್ಷಿಕ ಕಾರ್ಯಕ್ರಮಗಳನ್ನು ಎಲ್ಲಾ ಸ್ತರದ ಮಹಿಳೆಯರ ನಡುವೆ ಹಮ್ಮಿಕೊಳ್ಳುತ್ತಿದೆ. ಸಾವಿತ್ರಿಬಾಯಿ ಫುಲೆ ಅವರ ಜೀವನ ಹೋರಾಟದ ಸ್ಫೂರ್ತಿಯನ್ನು ಎಲ್ಲೆಡೆ ಹರಡುವ ಈ ಮಹಾನ್ ಉದ್ದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ” ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಹುಸೇನ್ ಬಿ, ರಾಜೇಶ್ವರಿ, ಪಾರ್ವತಿ, ಗಂಗಮ್ಮ,ದೇವಿಕಾ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!