ಜ.05 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

0

Get real time updates directly on you device, subscribe now.

  ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110 ಕೆ.ವಿ ಒUSS ಕೊಪ್ಪಳ ಸ್ಟೇಷನ್ ನ ತುರ್ತು ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ಜನವರಿ 05 ರಂದು ಕೊಪ್ಪಳ ನಗರದಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ಕೊಪ್ಪಳ ಸ್ಟೇಷನ್ ಗೆ ಒಳಪಡುವ ಎಫ್-10 ಗವಿಮಠ, ಎಫ್-2  KWS    , ಎಫ್-4  LIS  ಫೀಡರ್ ಗೆ ಸಂಬAಧಪಟ್ಟ ಗವಿಶ್ರೀನಗರ, ಕೋರ್ಟ್ ಏರಿಯಾ, ಗವಿಮಠ ಜೈಲ್, ಕುವೆಂಪು ನಗರ, ಹಮಾಲರ ಕಾಲೋನಿ, ಗಡಿಯಾರ ಕಂಬ, ನಿರ್ಮಿತ ಕೇಂದ್ರ, ಮಹಿಬೂಬ ನಗರ, ಹುಲಿಕೇರಿ, ದಿಡ್ಡಿಕೇರಿ, ಸೈಲಾನ್ಪೂರ, ವಿಠ್ಠಲ ಮಾದರಿ ನಗರ, ಮಿಟ್ಟಿಕೇರಿ ಈ ಎಲ್ಲಾ ಲೈನ್ ಗಳಿಗೆ ಜ. 05 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಮೇಲಿನ ಕೆಲಸವು ಬೇಗನೆ ಮುಕ್ತಾಯವಾದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!