ವಸತಿ ವ್ಯವಸ್ಥೆ ದಿನಾಂಕ: ೨೭-೦೧-೨೦೨೪ ರಿಂದ ೨೯-೦೧-೨೦೨೪ ರ ವರೆಗೆ
ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗಲು ಜಾತ್ರಾ ಮಹೋತ್ಸವದಲ್ಲಿ ವಸತಿ ವ್ಯವಸ್ಥೆಕಲ್ಪಿಸಲಾಗಿದೆ. ಶ್ರೀ ಗಮಿಮಠದ ಶಾಲಾ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಕಲ್ಯಾಣ ಮಂಟಪ, ಸಭಾಭವನಗಳಲ್ಲಿ ಒಟ್ಟು ೧ ಕೇಂದ್ರಗಳಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.ವಸತಿ ಕೇಂದ್ರಗಳಲ್ಲಿ ಸ್ನಾನ, ಶೌಚಾಲಯ ವ್ಯವಸ್ಥೆಯಜೊತೆಗೆ ಸೊಳ್ಳೆಬತ್ತಿ, ಮೇಣದ ಬತ್ತಿ, ಜಮಖಾನ, ಹಾಗೂ ಶುದ್ದಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ವಸತಿ ನೀಡುವ ಪ್ರತಿಯೊಂದು ಸ್ಥಳ ಮತ್ತು ಕೊಠಡಿಗಳಲ್ಲಿ ಸಮರ್ಪಕ ವಿದ್ಯುತ್, ಸುರಕ್ಷತೆ ಮತ್ತು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.
* ಸ್ತ್ರೀಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಇದೆ.
* ವಸತಿ ನೀಡುವ ಪ್ರತಿಯೊಂದು ಸ್ಥಳಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಎಲೆಕ್ಟ್ರೀಷಿಯನ್ನ, ಪ್ಲಂಬರ, ಸೆಕ್ಯುರಿಟಿಗಾರ್ಡ ನಿಯೋಜನೆ ಮಾಡಲಾಗಿದೆ.
* ಭಕ್ತರಿಗೆ ಪ್ರತಿ ದಿನ ಬೆಳಗ್ಗೆ ದಿನ ಪತ್ರಿಕೆಯನ್ನುಕೊಡಲಾಗುವದು.
* ದಿನದ ೨೪ ಘಂಟೆಯುಕರ್ತ್ಯವ್ಯ ನಿರ್ವಹಿಸಲು ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ.
* ಶ್ರೀ ಮಠದಆವರಣದಲ್ಲಿ ವಸತಿ ನೊಂದಣಿಕೇಂದ್ರವನ್ನುಆರಂಭಿಸಲಾಗುವದು.
* ಭಕ್ತರು ವಸತಿ ನೋಂದಣಿ ಸ್ಥಳದಲ್ಲಿ ತಮ್ಮ ಹೆಸರು, ಊರಿನ ಹೆಸರು ನೋಂದಾಯಿಸಿ ವಸತಿ ನೀಡುವ ಸ್ಥಳದ ರಶೀದಿಯನ್ನು ಪಡೆದುಕೊಳ್ಳಬೇಕು.
ವಸತಿ ಕೇಂದ್ರಗಳ ಮಾಹಿತಿ ಈ ಕೆಳಗಿನಂತಿವೆ.
ಉಚಿತ ವಸತಿ ನೋಂದಣಿಕೇಂದ್ರ ಶ್ರೀ ಗವಿಮಠಆವರಣ
೧. ವಸತಿ ಕೇಂದ್ರಗಳ ಮಾಹಿತಿ ಈ ಕೆಳಗಿನಂತಿವೆ.
ಸ್ವಾಮಿವಿವೇಕಾನಂದ ಸಿಬಿಎಸಿ ಗೊಂಡಬಾಳ್ ರೋಡ್ ಕೊಪ್ಪಳ,ಮಾಸ್ತಿ ಪಬ್ಲಿಕ್ ಸ್ಕೂಲ್ ಕೊಪ್ಪಳ,ಪಾಂಡುರಂಗ ದೇವಸ್ಥಾನ ಕೊಪ್ಪಳ, ವಾಸವಿ ಮಂಗಳ ಭವನ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವಕಾಲೇಜು ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳ, ಶ್ರೀಮತಿ ಶಾರದಮ್ಮ ವಿ. ಕೊತಬಾಳ ಬಿಬಿಎಮ್‌ಕಾಲೇಜು ಕೊಪ್ಪ, ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಯಾತ್ರಾ ನಿವಾಸ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ವೃದ್ಧಾಶ್ರಮ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಕೊಪ್ಪಳ, ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆ ಕೊಪ್ಪಳ, ಶ್ರೀ ಕೇತೇಶ್ವರಕಲ್ಯಾಣ ಮಂಟಪ ಕೊಪ್ಪಳ.ಮಧುಶ್ರೀ ಗಾರ್ಡನ್ ಹೊಸಪೇಟರಸ್ತೆ ಕೊಪ್ಪಳ,ಸೂಚಿಸಿದ ವಸತಿ ಸ್ಥಳಗಳಲ್ಲಿ ಕರೆಯ ಮೇರೆಗೆಡಾ.ಎಸ್ ಸವಡಿ ೯೮೪೫೬೪೬೮೮೫, ಡಾ.ರವಿ ೯೫೧೩೨೫೪೩೭೧೭, ಡಾ. ಪ್ರಭು ೯೮೮೬೬೭೭೦೮೮, ಡಾ.ಶಿರೂರಮಠ ೭೦೧೯೨೨೧೪೭೧ ವೈದ್ಯರುಗಳು ಕರ್ತವ್ಯ ವಿರ್ವಹಿಸುವರು.ವಸತಿಕುರಿತಂತೆಹೆಚ್ಚಿನ ಮಾಹಿತಿಗಾಗಿ೯೨೪೨೧೮೧೩೨೨, ೮೩೧೦೫೨೫೪೫೭,೯೯೮೦೨೮೮೮೭೧, ೯೯೮೬೬೮೦೮೩೩, ಸಂಪರ್ಕಿಸಲು ಗವಿಮಠದ ಪ್ರಕಟಣೆ ತಿಳಿಸಿದೆ.
Comments are closed.