ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬಂಧನ ಖಂಡಿಸಿ ಪ್ರತಿಭಟನೆ
ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಹಾಗೂ ಕಾರ್ಯಕರ್ತರನ್ನು ಬೇಷರತ್ತು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ| ಡಿಸಿಪಿ ಲಕ್ಷ್ಮೀ ಪ್ರಸಾದ ಅಮಾನತ್ತುಗೊಳಿಸಿ|| ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಆಗ್ರಹ
*-*-*
ಕೊಪ್ಪಳ,ಡಿ.೨೯: ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಶುಕ್ರವಾರದಂದು ರಾ.ಹೆ ೬೩ ತಡೆದು ದರು. ವರ್ಷದ ೩೬೫ ದಿನಗಳ ಕಾಲ ಕನ್ನಡ, ಕನ್ನಡಿಗ, ಕರ್ನಾಟಕದ ಒಳಿತಿಗಾಗಿ ಚಿಂತಿಸುವ ಕನ್ನಡಪರ ಹೋರಾಟಗಾರ, ಕನ್ನಡ ಚಳುವಳಿಯ ಭೀಷ್ಮ, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ ಅವರ ನೇತೃತ್ವದಲ್ಲಿ ಡಿ.೨೭ ರಂದು ಕಡ್ಡಾಯ ಕನ್ನಡ ನಾಮಫಲಕ ಅಭಿಯಾನದ ನೇತೃತ್ವವಹಿಸಿ ಬೃಹತ್ ಪ್ರತಿಭಟನಾ ಜಾಗೃತಿ ಹೋರಾಟ ಹಮ್ಮಿಕೊಂಡಿರುವ ಅವರನ್ನು ಮತ್ತು ಹಲವು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ ಅಗೌರವದಿಂದ ನಡೆಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಿ.ಗಿರೀಶಾನಂದ ಜ್ಞಾನಸುಂದರ ಬಲವಾಗಿ ಖಂಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ರಾಜ್ಯ ಸರ್ಕಾರದ, ಬಿಬಿಎಂಪಿ ಹಾಗೂ ಸ್ಥಳೀಯ ಪ್ರಾಧಿಕಾರಗಳ ಸ್ಪಷ್ಟ ಆದೇಶವನ್ನು ಉಲ್ಲಂಘನೆ ಮಾಡಿ ಆಂಗ್ಲ ಮತ್ತು ಇತರೆ ಭಾಷೆಗಳ ನಾಮಫಲಕವನ್ನು ಹಾಕಿರುವವರ ಉದ್ದಿಮೆಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ ಸಂರ್ಕಿಣಗಳು ಹಾಗೂ ಮಾಲ್‌ಗಳಿಗೆ ನವೆಂಬರ್-೨೦೨೩ ರಿಂದ ನಾಮಫಲಕಗಳನ್ನು ಬದಲಾವಣೆಗೊಳಿಸಲು ಗಡವು ಮತ್ತು ಕಾಲಾವಕಾಶ ನೀಡಿದ್ದರು ಸಹ ಉದ್ಧಟತನ ತೋರಿ ನಿಷ್ಕಾಳಜಿವಹಿಸಿರುವುದನ್ನು ಖಂಡಿಸಿ ಬೆಂಗಳೂರಿನ ಸಾದಹಳ್ಳಿ ಟೋಲ್‌ಗೇಟ್ ನಿಂದ ಕಬ್ಬನ್‌ಪಾರ್ಕವರೆಗೆ ಬೀದಿಗಿಳಿದು ಪ್ರತಿಭಟನಾ ಮೆರೆವಣಿಗೆ ಹೊರಡುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ್ರು ಮತ್ತು ಹಲವು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ ಅಗೌರವದಿಂದ ನಡೆಸಿಕೊಂಡಿರುವ ಪೋಲೀಸ್ ಇಲಾಖೆಯ ಡಿಸಿಪಿ ಲಕ್ಷ್ಮೀ ಪ್ರಸಾದ ಅವರನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಪಡಿಸಿದರು.
ಸರ್ಕಾರ ಮಾಡುವ ಕೆಲಸವನ್ನು ಟಿ.ಎ ನಾರಾಯಣಗೌಡ ನೇತೃತ್ವದ ಕರವೇ ಮಾಡಿರುತ್ತಾರೆ. ಇದನ್ನು ಪೋಲೀಸ್ ಮುಖಾಂತರ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಹಾಗೂ ಬಂಧಿತರಾದ ಟಿ.ಎ ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಕೂಡಲೇ ಬೇಷರತ್ತು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಕನ್ನಡ ಮತ್ತು ಕನ್ನಡಿಗರ ಪರ ಸರ್ಕಾರವೆಂದು ಸಾಬೀತುಪಡಿಸಿ, ಇಲ್ಲದಿದ್ದರೆ, ಕರವೇ ರಾಜ್ಯಾಧ್ಯಂತ ಬೀದಿಗಳಿದು ಉಘ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ, ಯುವ ಘಟಕ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಗೌರವಾಧ್ಯಕ್ಷ ಸಂಜಯ ಖಟವಟೆ, ಕುಷ್ಟಗಿ ತಾಲೂಕಾಧ್ಯಕ್ಷ ಪ್ರಕಾಶ ಮನ್ನೆರಾಳ, ಕಾರಟಗಿ ತಾಲೂಕಾಧ್ಯಕ್ಷ ಪ್ರಶಾಂತ ನಾಯಕ, ಕುಕನೂರು ತಾಲೂಕಾಧ್ಯಕ್ಷ ರಮೇಶ ಹಾಲವರ್ತಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಯಲಬುರ್ಗಾ ಯುವ ಘಟಕ ತಾಲೂಕಾಧ್ಯಕ್ಷ ಶಿವಕುಮಾರ ಗೌಡರ, ಕಾರ್ಯಕರ್ತರಾದ ಆನಂದ ಎಲಿಗಾರ, ನೂರಬಾಷಾ ಕವಲೂರು, ಶರಣಯ್ಯ ಹಿರೇಮಠ, ಮಂಜುನಾಥ ಇನಾಮದಾರ, ಶ್ರೀಕಾಂತ ಗುರುವಿನ್, ಗುರುಸಿದ್ದಪ್ಪ ಬೇಳೂರು, ಬಸವರಾಜ ಚಿಕೆನಕೊಪ್ಪ, ಶಶಿ ಬೀಡನಾಳ, ಈರಣ್ಣ ಗುಡಿಗೇರ, ಚಂದ್ರು ಭಜಂತ್ರಿ, ಸಂದೀಪ ಭಜಂತ್ರಿ, ಫ್ರಜ್ವಲ ಬೆಸ್ತರ, ಹನುಮೇಶ ನಾಯಕ, ಸೊಹೇಲ್ ಎಸ್.ಪಿ, ಹಾಗೂ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,
Comments are closed.