ಬಸವರಾಜ್ ರಾಯರಡ್ಡಿಯವರಿಗ ಸಂಪುಟ ದರ್ಜೆಯ ಸಿಎಂ ಆರ್ಥಿಕ ಸಲಹೆಗಾರ ಸ್ಥಾನಮಾನ

Get real time updates directly on you device, subscribe now.

ಬೆಂಗಳೂರು : ತಮ್ಮ ನೇರ ಮಾತುಗಳಿಂದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಜುಗುರ ಉಂಟು ಮಾಡುತ್ತಿದ್ದ ಯಲಬುರ್ಗಾ ಶಾಸಕ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ್ ರಾಯರಡ್ಡಿಯವರನ್ನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಇದು ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿದೆ ಎಂದು  ಸರಕಾರದ ಆದೀನ ಕಾರ್ಯದರ್ಶಿ ಟಿ.ಎ.ಮೊಹ್ಮದ್ ಅಕ್ಬರ್ ಆದೇಶದಲ್ಲಿ ತಿಳಿಸಿದ್ದಾರೆ.

ನಿಗಮ ಮಂಡಳಿಗಳ ನೇಮಕಾತಿಗೂ ಮುನ್ನ ಈ ನೇಮಕ ಮಾಡಲಾಗಿದ್ದು ರಾಯರಡ್ಡಿಯವರ  ಅಸಮಾಧಾನ  ಶಮನಗೊಳಿಸಲು  ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸಿದೆ ಎನ್ನಲಾಗುತ್ತಿದೆ

Get real time updates directly on you device, subscribe now.

Comments are closed.

error: Content is protected !!