ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಸಂಸ್ಥೆಗಳಲ್ಲಿ ಮ್ಯಾನೇಜ್ಮೆಂಟ್/ನಿರ್ವಹಣಾ ಶಿಕ್ಷಣ ಮತ್ತು ವೃತ್ತಿ ಅವಕಾಶಗಳು
Gangavati ಎಸ್ .ಕೆ .ಎನ್. ಜಿ ಕಾಲೇಜಿನ ಬಿ. ಬಿ. ಎ ವಿಭಾಗದವತಿಯಿಂದ ಐ. ಕ್ಯು. ಏ. ಸಿ ಅವರ ಸಹಯೋಗದಲ್ಲಿ ಒಂದು ದಿನದ ವಿಶೇಷ ಉಪನ್ಯಾಸ “” ಕಾರ್ಯಕ್ರಮವನ್ನು ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಸಾದ್ ಕುಲಕರ್ಣಿ, ನಿರ್ವಹಣಾಶಸ್ತ್ರ ವಿಭಾಗ,ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳಿಯಾಳ, ಉತ್ತರಕನ್ನಡ ಜಿಲ್ಲೆ ಇಂದ ಆಗಮಿಸಿ ವಿದುರ್ಥಿಗಳಿಗೆ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದ ನಂತರ ಸರಕಾರಿ, ಖಾಸಗಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳನ್ನು ವಿಸ್ತಾರವಾಗಿ ವಿವರಿಸಿದರು. IBPS ಅವರು ಆಯೋಜಿಸುವ ಬ್ಯಾಂಕಿಂಗ್ ಪರೀಕ್ಷೆಗಳು, ಪ್ರಮುಖವಾಗಿ BBA/MBA ನಂತರ ಇರುವ ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಹಣಕಾಸು, ಖಜಾನೆ ಮತ್ತಿತರೆ ವಿಭಾಗಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್/ತಜ್ಞ ಅಧಿಕಾರಿಗಳಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು, ಇದರ ಜೊತೆಗೆ ವಿದ್ಯಾರ್ಥಿಗಳು ಕ್ಲರ್ಕ್ ಮತ್ತು ಪ್ರೊಬೇಷನರಿ ಆಫೀಸರ್ ಹುದ್ದೆಗಳ ಪರೀಕ್ಷೆಗಳನ್ನು ಕೂಡ ತೆಗೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು, ಮತ್ತು ಇನ್ನಿತರೆ ಹಣಕಾಸು ಸಂಸ್ಥಗಳಲ್ಲಿ, ಷೇರು ಮಾರುಕಟ್ಟೆಗಳಲ್ಲಿನ ಉದ್ಯೋಗ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾಜಿ ದೇವೇಂದ್ರಪ್ಪ, IQAC ಸಂಚಾಲಕರಾದ ಡಾ. Y.S ವಗ್ಗಿ, ಸಹ ಸಂಚಾಲಕರಾದ ಶ್ರೀ. ಅಕ್ಕಿ ಮಾರುತಿ, BBA ವಿಭಾಗದ ಮುಖ್ಯಸ್ಥರಾದ ಶ್ರೀಮತಿ. ಅನಿತಾ ಕೆ. ಎಂ ಮತ್ತು BBA ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶ್ರಫ್ ಆಳ್ಳಳ್ಳಿ ಉಪಸ್ಥಿತರಿದ್ದರು.
Comments are closed.