ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಜಗದಗಲಕೆ ವಿಸ್ತರಿಸಲಿ

Get real time updates directly on you device, subscribe now.

ಮಂತ್ರಾಲಯದಲ್ಲಿ ಸಾಂಸ್ಕೃತಿಕ ಸಂಭ್ರಮದಲ್ಲಿ ಸಾಹಿತಿ ದೀಪಶ್ರೀ ಬಣ್ಣನೆ!  *
  ಕೊಪ್ಪಳ:  ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಜಗತ್ತಿ ನಲ್ಲೆಡೆ ಪಸರಿಸಲಿ ಎಂದು ಮೈಸೂರಿನ ಶಿಕ್ಷಕಿ, ಕವಯಿತ್ರಿ ದೀಪಶ್ರೀ ಅಭಿಪ್ರಾಯಪಟ್ಟರು. ಅವರು ಸೋಮವಾರ  ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ                        ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್   ಕುಕನೂರು ಕೊಪ್ಪಳ ಜಿಲ್ಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಸುವಣ೯ ಕನಾ೯ಟಕ ಸಂಭ್ರಮಾಚರಣೆ   ರಾಷ್ಟ್ರೀಯ ಕನ್ನಡ ಹಬ್ಬ  ,  ನಾಡು ನುಡಿ ಕುರಿತು ವಿಚಾರ ಸಂಕಿರಣ ಹಾಗೂ ಭಕ್ತಿ ಸಂಗೀತ ,   “ಕವಿಗಳು ಕಂಡಂತೆ  ಶ್ರೀಗುರು ರಾಘವೇಂದ್ರ ರಾಯರ ಕುರಿತ ಕವಿಗೋಷ್ಠಿ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು.
 ಕನ್ನಡ ಭಾಷೆ ಪರಂಪರೆ ಬಗ್ಗೆ ಎಷ್ಟು ಬರೆದರೂ,ಮಾತನಾಡಿದರು ಸಹ ಕಡಿಮೆ ಆದರೆ ಅದರ ಶ್ರೀಮಂತಿಕೆ ಅಗಾಧ ವಾಗಿದೆ ಎಂದು ತಿಳಿಸಿದರು.  ಮುಖ್ಯ ಅತಿಥಿ ಯಾಗಿದ್ದ  ಧಾರವಾಡದ ಪತ್ರಕತ೯  ಎಚ್. ಆರ್.ವಸ್ತ್ರದ ಅವರು ಮಾತನಾಡಿ,  ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ  ಟ್ರಸ್ಟ್ ಹೊರನಾಡು ಕನ್ನಡಿಗರು ಜಾಗೃತ ರಾಗಿ ನಾಡು ನುಡಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಉತ್ತಮ ಸೇವೆಗೆ ಚಾಲನೆ ನೀಡುತ್ತಿರುವುದು ಉತ್ತಮ ಬೆಳವಣಿಗೆ . ಆಂಧ್ರ, ತಮಿಳು ಸೇರಿ ಹಲವಾರು ಭಾಷಿಕರು ಸೇರುವ ಧಾಮಿ೯ಕ ಕೇಂದ್ರ ಮಂತ್ರಾಲಯದಲ್ಲಿ  ಸಾಂಸ್ಕೃತಿಕ ಸಂಭ್ರಮ  ಹಮ್ಮಿಕೊಂಡಿದ್ದು ಸಂತಸದ ಬೆಳವಣಿಗೆ ಎಂದರು. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಈ ಸಂಸ್ಥೆಗೆ ದೊರೆಯಲಿ ಎಂದು ನುಡಿದರು.    ಕವಿಗಳು ಕಂಡಂತೆ ಶ್ರೀ ರಾಘವೇಂದ್ರ ರಾಯರು ಕುರಿತು ಕವಿಗೋಷ್ಠಿಯಲ್ಲಿ
ಮೈಸೂರಿನ ಸಾಹಿತಿ ಶಿಕ್ಷಕರಾದ ಭಾಗ್ಯಲಕ್ಷ್ಮಿ ನಾರಾಯಣ,
 ದೀಪಶ್ರೀ ಎನ್,ಮಾಲಾ ಕೆ , ರಾಯಚೂರಿನ ಏಚ್. ಅಡವಿರಾವ್,ಕೊಪ್ಪಳದ  ಬಸವರಾಜ್ ಚೌಡಕಿ ಮೊದಲಾದವರು ಭಾಗವಹಿಸಿ ಕವಿತೆ ವಾಚಿಸಿದರು.
ರಾಯರ ಕುರಿತ ಗಾಯನ ಕಾಯ೯ಕ್ರಮದಲ್ಲಿ
 ಭಾಗ್ಯಲಕ್ಷ್ಮಿ ನಾರಾಯಣ. ಧಾರವಾಡದ ಎಚ್ ಆರ್ ವಸ್ತ್ರದ, ದೀಪಶ್ರೀ‌ ಎನ್, ಜ್ಯೋತಿ ಎನ್ ಬೆಟ್ಟಯ್ಯ  ಗಾಯನ ಪ್ರಸ್ತುತ ಪಡಿಸಿದರು.
ಹಾಗೂ ಅಪ್ಪಳಿಸು ಪತ್ರಿಕೆಯ  ವಿಶೇಷ ಸಂಚಿಕೆಯನ್ನು ಮೈಸೂರಿನ ಉದ್ಯಮಿ
ಲಕ್ಷ್ಮೀ ನಾರಾಯಣ ಅವರು ಬಿಡುಗಡೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ನಂತರ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Get real time updates directly on you device, subscribe now.

Comments are closed.

error: Content is protected !!