ಕೊಪ್ಪಳದಲ್ಲಿ ಸೇವಾದಳ ಶತಮಾನೋತ್ಸವ ಸಂಭ್ರಮ

Get real time updates directly on you device, subscribe now.


ಇಂದು ಕೊಪ್ಪಳದಲ್ಲಿ ಭಾರತ ಸೇವಾದಳಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೇವಾದಳ ವಿದ್ಯಾರ್ಥಿಗಳಿಂದ ಹಿಂದೂಸ್ತಾನಿ ಸೇವಾದಳದ ಶತಮಾನೋತ್ಸವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು 1923 ಡಿಶಂಬರ 28 ರಂದು ಡಾ. ನಾ. ಸು. ಹರ್ಡಿಕರ ಅವರ ಸ್ವಾತಂತ್ರ್ಯ ಹೋರಾಟದ ದೂರ ದೃಷ್ಟಿಯಿಂದ ಪಂಡಿತ್ ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯೊಂದಿಗೆ ಮಾಹಾತ್ಮಾ ಗಾಂಧೀಜಿಯವರ ಉಪಸ್ಥಿತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಯುವಕರಿಗೆ ರಾಷ್ಟ್ರ ಪ್ರೇಮ ರಾಷ್ಟ್ರ ಭಕ್ತಿ. ರಾಷ್ಟ್ರ ಧ್ವಜ ಆರೋಹಣ ಅವರೋಹಣ. ನೀತಿ ಸಂಹಿತೆ ಕುರಿತು ಶಿಕ್ಷಣ ನೀಡುವ ದಿಸೆಯಲ್ಲಿ ಜನ್ಮ ತೆಳೆಯಿತು ಸ್ವಾತಂತ್ರ್ಯ ಪಡೆದ ನಂತರ ಡಾ. ನಾ. ಸು. ಹರ್ಡಿಕರವರು ಕರ್ನಾಟಕದಲ್ಲಿ 1950 ರಲ್ಲಿ ಭಾರತ ಸೇವಾ ದಳ ಎಂಬ ಹೆಸರಿನೊಂದಿಗೆ ಜಾತ್ಯತೀತ ಹಾಗೂ ರಾಜಕೀಯ ರಹಿತವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರೇಮ ರಾಷ್ಟ್ರ ಭಕ್ತಿ ರಾಷ್ಟ್ರ ಧ್ವಜ ನೀತಿ ಸಂಹಿತೆ ಆರೋಹಣ. ಅವರೋಹಣ ಹಾಗೂ ದೈಹಿಕ ಶಿಕ್ಷಣ ಕುರಿತು ಸ್ಥಾಪಿತವಾಗಿದೆ ನಗರದಲ್ಲಿ ನಡೆದ ಜಾಥಾದಲ್ಲಿ ಸುಮಾರು ಅರುನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಶ್ರೀ ಎಂ ವ್ಹಿ ಪಾಟೀಲ ಕೇಂದ್ರ ಸಮಿತಿ ಸದಸ್ಯರು ಶ್ರೀ ಚಂದ್ರಶೇಖರಯ್ಯ ಹಿರೇಮಠ ಜಿಲ್ಲಾಧ್ಯಕ್ಷರು ಶ್ರೀ ಸೋಮಶೇಖರ್ ಚ ಹರ್ತಿ ಜಿಲ್ಲಾ ಕಾರ್ಯದರ್ಶಿಗಳು ಶ್ರೀ ಬಸವಣ್ಣೆಪ್ಪ ಪತ್ರಿ ಜಿಲ್ಲಾ ಸಂಘಟಿಕರು ಶ್ರೀ ಬಸವರಾಜ್ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಶ್ರೀ ಬಸವರಾಜ್ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: