ಡಿಸೆಂಬರ್ 29 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
: 110/33/11 ಕೆ.ವಿ ಗಿಣಿಗೇರಾ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಂಟೆನನ್ಸ್ ಕೆಲಸ ನಡೆಸುತ್ತಿರುವ ಪ್ರಯುಕ್ತ ಹ್ಯಾಟಿ ಮುಂಡರಗಿ ಉಪ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ ವಿವಿಧ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ಡಿಸೆಂಬರ್ 29 ರಂದು ಬೆಳಿಗ್ಗೆ 10ರಿಂದ ಸಂಜೆ 06 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳವಿನಾಳ, ಹಾಲವರ್ತಿ, ಬಹದ್ದೂರಬಂಡಿ, ಡಿ.ಹೊಸಳ್ಳಿ, ಚುಕನಕಲ್, ಮುದ್ದಾಬಳ್ಳಿ, ಹಳೆಗೊಂಡಬಾಳ, ಗೊಂಡಬಾಳ, ಹ್ಯಾಟಿ, ಮುಂಡರಗಿ ಮತ್ತು ಮೆಳ್ಳಿಕೇರಿ ಹಾಗೂ ಎಫ್-8 ಹ್ಯಾಟಿ ಮುಂಡರಗಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.