ಸಕ್ಕರೆ, ಕ್ಯಾನ್ಸರ್, ಹೃದ್ರೋಗ ನರರೋಗ, ಕಿಡ್ನಿ ಕಾಯಿಲೆಗಳಿಗು ಚಿಕಿತ್ಸೆ: ಉಸ್ಮಾನ್ ಬಿಚಕತ್ತಿ
ಗಂಗಾವತಿ; ಶಿಕ್ಕಲಗಾರ್, ಬಿಚಕತ್ತಿ ಕ್ಷೇಮಾಭಿವೃದ್ಧಿ ಸಂಘದಿAದ ನಗರದ ಕರ್ನೂಲ್ ಬಾಬಾ ದರಗಾದ ಬಳಿ ಇರುವ ಮೊಹಮದೀಯ ಶಾದಿ ಮಹಾಲ್‌ನಲ್ಲಿ ಡಿಸೆಂಬರ್ ೩೦, ೩೧ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಬೆಳಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩ ಗಂಟೆಯ ವರೆಗೆ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ನಗರಸಭೆ ಸದಸ್ಯ ಉಸ್ಮಾನ್ ಬಿಚಕತ್ತಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಸಾಮಾನ್ಯ ಕಾಯಿಲೆಗಳ ಜತೆಗೆ, ಕ್ಯಾನ್ಸರ್, ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು, ಚಿಕ್ಕಮಕ್ಕಳ ಕಾಯಿಲೆ, ಸೀಳು ತುಟಿ, ಸೀಳು ಅಂಗಳ, ಸ್ತಿçà ರೋಗ ಗರ್ಭ ಕೋಶ ತೊಂದರೆ, ಮೂಳೆ ಮತ್ತು ಕೀಲು ರೋಗ, ಕಿವಿ, ಮೂಗು ಮತ್ತು ಗಂಟಲು, ಸಾಮಾನ್ಯ ರೋಗ ಶಸ್ತç ಚಿಕಿತ್ಸೆ, ರಕ್ತದೊತ್ತಡ ಸಕ್ಕರೆ ಕಾಯಿಲೆ, ಸುಟ್ಟ ಗಾಯಗಳು, ಮಧುಮೇಹ ಗಾಯಗಳು, ಜನ್ಮಜಾತ ವಿರೂಪತೆ ಇವುಗಳ ತಪಾಸಣೆ ಹಾಗು ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧಿ ನೀಡಲಾಗುವುದು ಗಂಭೀರ ಸಮಸ್ಯೆಗಳಿದ್ದರೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ರೋಗಿಗಳಿಗೆ ಪ್ರಯಾಣದ ವೆಚ್ಚ ಭರಿಸಲಾಗುವುದು ಎಂದರು. ಸಂಘದ ಗೌರವಧ್ಯಕ್ಷ ಹಫೀಜ್ ಮಹ್ಮದ್ ಖಾಸೀಂ ಬಿಚಕತ್ತಿ ಮಾತನಾಡಿ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಸೇರಿದಂತೆ ಎಲ್ಲ ಸಮುದಾಯದ ಜನರು ತಪಾಸಣೆಯಲ್ಲಿ ಪಾಲ್ಗೊಳ್ಳಬಹುದು, ಬಿಪಿಎಲ್ ಕಾರ್ಡುದಾರರಿಗೆ ಉಚಿತ ತಪಾಸಣೆಯ ಜತೆಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಒಂದು ವೇಳೆ ಕಾರ್ಡ್ ಇಲ್ಲದವರಿಗೂ ನಮ್ಮ ಕಟುಂಬದಿAದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಗಂಗಾವತಿ ಸುತ್ತಮುತ್ತಲಿನ ಸಾರ್ವಜನಕರು ಆಗಮಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಇನ್ನೋರ್ವ ನಗರಸಭೆ ಸದಸ್ಯ ಅಬ್ದುಲ್ ಜಬ್ಬರ್ ಬಿಚಕತ್ತಿ ಮಾತನಾಡಿ, ಶಾಸಕ ಗಾಲಿ ಜನಾರ್ದನರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್, ಡಾ.ಈಶ್ವರ ಸವಡಿ, ಡಾ.ಅಮರೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಕಾಂಗ್ರೆಸ್ ಮುಖಂಡರಾದ ಶಾಮೀದ್ ಮನಿಯಾರ್, ಒಣ ಬಳ್ಳಾರಿ ಹನುಮಂತಪ್ಪ ವಾಣಿಜ್ಯೋದ್ಯಮಿಗಳಾದ ಕೆ.ಕಾಳಪ್ಪ, ಮಸ್ಕಿ ಸಿದ್ದಣ್ಣ, ಸಂತೋಷ್ ಕೇಲೋಜಿ, ಸಿಂಗನಾಳ್ ಸುರೇಶ್ ಡಿಎಚ್ ಒ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಸಂದರ್ಭದಲ್ಲಿ ಬಿ.ಕೆ.ಸೂಫಿ ಚಾಂದ್ ಬಿಚಕತ್ತಿ, ಮಹ್ಮದ್ ಖಾಜಾ ಬಿಚಕತ್ತಿ, ಅಬ್ದುಲ್ ಗಫಾರ್ ಬಿಚಕತ್ತಿ ಹಾಗು ಸಲ್ಮಾನ್ ಬಿಚಕತ್ತಿ ಇದ್ದರು.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Prev Post
Next Post
Comments are closed.