ಬಸ್ ನಲ್ಲಿ ಪ್ರಯಾಣಿಸಿ ಮಹಿಳೆಯರಿಗೆ ಶಕ್ತಿ ತುಂಬಿದ ಸಚಿವ ಶಿವರಾಜ ತಂಗಡಗಿ

ಮಾತಿನಂತೆ ನಡೆದಿದ್ದೇವೆ-ತಂಗಡಗಿ

Get real time updates directly on you device, subscribe now.

*ಬಸ್ ನಲ್ಲಿ ಪ್ರಯಾಣಿಸಿ ಮಹಿಳೆಯರಿಗೆ ಶಕ್ತಿ ತುಂಬಿದ ಸಚಿವ ಶಿವರಾಜ ತಂಗಡಗ*

ಕೊಪ್ಪಳ .):
ನಿತ್ಯ ಜನ ಜುಂಗುಳಿಯಿಂದಿರುತ್ತಿದ್ದ ಬಸ್ ನಿಲ್ದಾಣದಲ್ಲಿ ಹಬ್ಬದ ಸಂಭ್ರಮ.. ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದ ಬಸ್ ಗಳು, ಉಚಿತ ಪ್ರಯಾಣದ ಬಸ್ ಏರಲು ಸಂಭ್ರಮದಲ್ಲಿದ್ದ ಮಹಿಳೆಯರು..!
ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ಜೂನ್ 11ರಂದು ಕಂಡು ಬಂದ ದೃಶ್ಯಗಳಿವು.
ಹೌದು..! ನೂತನ ಶಕ್ತಿ ಯೋಜನೆಗೆ ರಾಜ್ಯದ್ಯಂತ ಏಕಕಾಲಕ್ಕೆ ಚಾಲನೆ ಸಿಗುವ ಸಂಭ್ರಮಕ್ಕೆ ಕೊಪ್ಪಳ ಕೇಂದ್ರೀಯ ಬಸ್‌ ನಿಲ್ದಾಣದ ಆವರಣವು ಸಹ ಸಾಕ್ಷಿಯಾಯಿತು.
ಪೂರ್ವ ನಿಗದಿಯಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೊತ್ತೇರುವ ವೇಳೆಗೆ ಕೊಪ್ಪಳ ನಗರಕ್ಕೆ ಆಗಮಿಸಿ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು.
ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಚಿವರು,
ಬಸ್ ನಿಲ್ದಾಣದ ಆವರಣದಲ್ಲಿ ಶೃಂಗಾರಗೊಂಡು ನಿಂತಿದ್ದ
ಉಚಿತ ಬಸ್ ಪ್ರಯಾಣದ ಕೊಪ್ಪಳ ಜಿಲ್ಲೆಯ ಮೊದಲ ಕೊಪ್ಪಳ-ಹುಲಗಿ-ಕೊಪ್ಪಳ ಬಸ್ ಏರಿ ಸಂಚರಿಸಿ ಮಹಿಳಾ ಶಕ್ತಿ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಗರಸಭೆ ಅಧ್ಯಕ್ಷೆ
ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಉಮಾ‌ ಪಾಟೀಲ, ಜ್ಯೋತಿ ಗೊಂಡಬಾಳ ಮೊದಲಾಗಿ ಕಿಶೋರಿ ಬೂದನೂರ, ಪದ್ಮಾವತಿ ಕಂಬಳಿ, ಮಂಜುಳಾ ಹಲಗೇರಿ, ರೇಖಾ ಬಿಜಾಪುರ, ಗೀತಾ, ಲತಾ ಚಿನ್ನೂರ, ಸೌಭಾಗ್ಯ ಗೊರವರ, ಅಂಬಿಕಾ ನಾಗರಾಳ, ರೂಪಾ ಬಂಗಾರಿ, ಕಾವೇರಿ ರಾಗಿ ಹಾಗೂ
ಇನ್ನೀತರರು ಒಬ್ಬೋಬ್ಬರಾಗಿ ಸಾಲಾಗಿ ಶಕ್ತಿ ಯೋಜನೆಯ ಬಸ್ ಏರುತ್ತ ಸಂತಷ ವ್ಯಕ್ತಪಡಿಸಿದರು.
ಶಾಸಕರು ಸೇರಿದಂತೆ ಇನ್ನೀತರ ಕಾರ್ಯಕರ್ಯರು, ಅಭಿಮಾನಿಗಳೊಂದಿಗೆ ಸಚಿವರು ಸಹ ಬಸ್ ಏರಿ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಟಿಕೇಟ್ ವಿತರಿಸಿ ಗವಿಮಠದವರೆಗೆ ಸಂಚರಿಸಿ ಗಮನ ಸೆಳೆದರು. ಬಳಿಕ ಮಹಿಳಾ ಕಾರ್ಯಕರ್ತರು ಮತ್ತು ಮಹಿಳಾ ಪ್ರಯಾಣಿಕರು ಗವಿಮಠದ ಆವರಣದಲ್ಲಿ ಸಚಿವರೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡು ಸಂಭ್ರಮಿಸಿದರು.
*ಮಾತಿನಂತೆ ನಡೆದಿದ್ದೇವೆ*:
ಇದಕ್ಕು ಮೊದಲು ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನಡೆದ ಶಕ್ತಿ ಯೋಜನೆ ಚಾಲನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿ, ಮಹಿಳೆಯರ ಯೋಜನೆಯನ್ನು ಮೊಟ್ಟ‌ಮೊದಲಿಗೆ ಜಾರಿ ಮಾಡಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದೇವೆ ಎಂದರು. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾನ್ಯ ಸಿದ್ಧರಾಮಯ್ಯನವರು ಶಕ್ತಿ ಯೋಜನೆಗೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸಮರ್ಥ ಮುಖ್ಯಮಂತ್ರಿಗಳಾಗಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ
ಸಚಿವ ಸಂಪುಟದಲ್ಲಿ ಐದಾರು ತಾಸುಗಳ ಸಮಯ ಚರ್ಚೆ ಆಗಿದೆ. ತಾಯಂದಿರ ಮೂಲಕವೇ ವಿನೂತನ ಯೋಜನೆಗಳಿಗೆ ಚಾಲನೆ ಕೊಡುತ್ತಿದ್ದೇವೆ. ಮೊದಲ ಯೋಜನೆಗೆ ಶಕ್ತಿ ಎಂದು ಹೆಸರಿಟ್ಟಿರುವುದು ಇನ್ನು ಅರ್ಥಪೂರ್ಣವಾಗಿದೆ. ಚುನಾವಣಾ ಪೂರ್ವದಲ್ಲಿ ಮಾತುಕೊಟ್ಟಂತೆ ನಾವು ನಡೆದುಕೊಂಡಿದ್ದೇವೆ. ಮಹಿಳೆಯರಿಗೆ ಶಕ್ತಿ ಕಾರ್ಡು ಕೊಡುವ ಪ್ರಕ್ರಿಯೆಯನ್ನು ಬೇಗನೇ ಪೂರ್ಣಗೊಳಿಸುತ್ತೇವೆ.
ಜುಲೈ 1ರಿಂದ ಅನ್ನ ಭಾಗ್ಯ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಈ ಹಿಂದಿನಂತೆಯೇ, ಮಾನ್ಯ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಈಗಲೂ ಹಲವಾರು ಕಾರ್ಯಕ್ರಮಗಳು ನೇರವಾಗಿ ಬಡವರ ಮನೆಗೆ ತಲುಪಲಿವೆ. ಎಲ್ಲಾ ಕಡೆಗಳಲ್ಲಿ ಇಂದಿರಾ ಕ್ಯಾಂಟಿನಗಳು ಪುನಾರಂಭವಾಗಲಿವೆ ಎಂದರು. ಕೊಪ್ಪಳ ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗೆ ಬಸ್ ಓಡಿಸಲು, ಎಲ್ಲಾ ರಸ್ತೆ ಅಭಿವೃದ್ದಿ ಪಡಿಸುವುದಕ್ಕೆ ಕ್ರಮ ವಹಿಸಲು ತಾವು ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಹತ್ವದ ಯೋಜನೆಗಳ ಜಾರಿಗೆ ನೇತೃತ್ವ ವಹಿಸಿರುವ ಮಾನ್ಯ
ಸಿದ್ಧರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಬಸವಣ್ಣಪ್ಪ ಕಲಶೆಟ್ಟಿ, ಡಿಎಸ್ಪಿ ಶರಣಬಸಪ್ಪ ಸುಬೇಧಾರ, ಕೆಕೆಆರ್ ಟಿಸಿಯ ಕೊಪ್ಪಳ ವಿಭಾಗದ
ವಿಭಾಗಿಯ ನಿಯಂತ್ರಣಾಧಿಕಾರಿ
ವೆಂಕಟೇಶ, ತಹಸೀಲ್ದಾರ ಅಮರೇಶ ಬಿರಾದಾರ ಹಾಗೂ ಇನ್ನೀತರರು ಇದ್ದರು. ಕೆಕೆಆರ್ಟಿಸಿಯ ಅಧಿಕಾರಿ ಸಂಜೀವಮೂರ್ತಿ ಅವರು ಪ್ರಾಸ್ತಾವಿಕ ಮಾತನಾಡಿ ಕೊಪ್ಪಳ ಬಸ್ ಘಟಕವು 1999ರಲ್ಲಿ ಆರಂಭವಾಗಿದೆ. ಒಟ್ಟು 443 ಬಸಗಳು ಇವೆ. 65,600 ಮಹಿಳಾ ನೌಕರರು ಪ್ರತಿ ದಿನ ಪ್ರಯಾಣಿಸುತ್ತಾರೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: