ಬೇವಿನಹಳ್ಳಿ :- ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಹೇಬೂಬ್ ಕಿಲ್ಲದಾರ್

ಹುಲಿಗಿ :- “ಬಂದೆವು ನಾವು ನಿಮ್ಮ ಚರಣಕ..
ನೀಡಾ ನಮಗಾ ಸುಖ… ಓ ಗಣಪ..
ಗೀಯ್ಯ ಗಾ ಗಾ ಗಿಯ್ಯ ಗಾ ಗೀಯ್ಯ ಗಾ…
ಗೀಯ್ಯ ಗಾ ಗಿಯ್ಯ ಗಾ ಗೀಯ್ಯ ಗಾ…” ಎಂದು ಗಣೇಶ ಸ್ತುತಿಯೊಂದಿಗೆ ಗೀಗಿ ಪದಗಳನ್ನು ಹಾಗೂ
“ಹಳ್ಳಿಗೆ ಹೋಗುವ ನಾವು ಹಳ್ಳಿಗೆ ಹೋಗುವ ನಾವ…
ಅಲ್ಲಿ ಬೆಟ್ಟ-ಬಿದಿರು ಬಳ್ಳಿ -ಕಳ್ಳಿ ಬೆಳೆದು ನಿಂತಾವ…
ಮೆತ್ತನೆ ಹೂವೂ ಮತ್ತಾವರಿಸಿ ಮೆತ್ತನೆ ಮೆತ್ತನೆ ಮೆತ್ತನೆ ಸುಳಿದಾವ….
ಹಳ್ಳಕೊಳ್ಳ ಹಾರುವುದೇ ನಮ್ಮ ಲಾಂಗ್ ಜಂಪ್…
ಬೇಲಿಗಿಲಿ ಜಿಗಿಯೋದ್ ನಮ್ಮ ಹೈ ಜಂಪ್…
ಕಬ್ಬಿನ ಕಂತೆ ಎತ್ತುವುದೇ ನಮ್ಮ ವೇಟ್ ಲಿಫ್ಟಿಂಗ್ …
ಹಳ್ಳಿಗೆ ಹೋಗುವ ನಾವು ಹಳ್ಳಿಗೆ ಹೋಗುವ ನಾವ…”
ಎಂದು ಒಂದು ಹಳ್ಳಿಯ ಸೊಗಡನ್ನು ಜನಪದ ಸಾಹಿತ್ಯ ದಲ್ಲಿ ಕಟ್ಟಿ ಪದಗಳನ್ನು ಹಾಡುತ್ತ ತಮಟೆ ಬಾರಿಸುತ್ತಾ ಮಕ್ಕಳಿಗೆ ಜಾನಪದ ಸಾಹಿತ್ಯದ ಸೊಗಡನ್ನು ಉಣಬಡಿಸಿದ್ದು ಅಂತಾರಾಷ್ಟ್ರೀಯ ಜನಪದ ಕಲಾವಿದ ಮಹೇಬೂಬ್ ಕಿಲ್ಲೆದಾರ ಅವರು.
ಅವರು ಸಮೀಪದ ಬೇವಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಮಟ್ಟದ ನಾಲ್ಕು ಮತ್ತು ಐದನೇ ತರಗತಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ 12ನೇ ದಿನದ ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಗೀಗಿ ಪದ, ಲಾವಣಿ ಹಾಡು, ಹಂತಿ ಪದ, ಶೋಭಾನ ಪದ ಹೀಗೆ ವಿವಿಧ ಜನಪದ ಸಾಹಿತ್ಯದ ಮಗ್ಗಲಗಳನ್ನು ಮೆಲುಕು ಹಾಕುತ್ತಾ ಮಕ್ಕಳಿಗೆ ಜಾನಪದ ಸಾಹಿತ್ಯ ಹೇಳುತ್ತಾ ತಮ್ಮ ಸುಮಧುರ ವಾದ ಕಂಠದಿಂದ ಜಾನಪದ ಹಾಡುಗಳನ್ನು ಹಾಡಿದರು.
ಬೇವಿನಹಳ್ಳಿ ಗ್ರಾಮ ಪಂಚಾಯತ, ಕಿರ್ಲೊಸ್ಕರ ಕಾರ್ಖಾನೆ ಹಾಗೂ ಸ್ಥಳೀಯ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಬೇಸಿಗೆ ಶಿಬಿರವಾಗಿ ಏರ್ಪಡಿಸಿ ಬೇವಿನಹಳ್ಳಿ, ಶಹಾಪುರ,ಲಿಂಗದಹಳ್ಳಿ ಗ್ರಾಮದ 4ಮತ್ತು 5ನೇ ತರಗತಿ ಮಕ್ಕಳಿಗೆ ನಿತ್ಯವೂ ವಿವಿಧ ಕ್ಷೇತ್ರದ ಒಬ್ಬೊಬ್ಬ ಸಾಧಕ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಕ್ಕಳಿಗೆ ವಿವಿಧ ಕ್ಷೇತ್ರದ ಮಾಹಿತಿಯನ್ನು ತಿಳಿಸುವ ಶಿಬಿರ ಹಮ್ಮಿಕೊಂಡು ಅದರಂತೆ ಶನಿವಾರ ಜಾನಪದ ಕ್ಷೇತ್ರದದ ಮಹೇಬೂಬ್ ಕಿಲ್ಲೆದಾರ ಅವರನ್ನು ಕರೆಯಿಸಿ ಮಕ್ಕಳಿಗೆ ಜಾನಪದ ಸಾಹಿತ್ಯದ ಬಗ್ಗೆ ಮನ ಮುಟ್ಟುವಂತೆ ಹಾಡುಗಳನ್ನು ಉಣಬಡಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕ ಶಿಕ್ಷಕರಾದ ಮಂಜುನಾಥ ಪೂಜಾರ್, ಹನುಮಂತಪ್ಪ ಮುಖ್ಯ ಶಿಕ್ಷಕ ರಾಜಮಹ್ಮದ್ ಹುನಗುಂದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ಬಹದ್ದೂರ ಬಂಡಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಮೂರ್ತಿ ಮೂಲಿಮನಿ, ಯಂಕನಗೌಡ ಪಾಟೀಲ್, ಮುರಳಿದರ ಬಿಸರಳ್ಳಿ, ಶಾಲಾ ಮೇಲೂ ಉಸ್ತುವಾರಿ ಸಮಿತಿ ಅಧ್ಯಕ್ಷರುಗಳಾದ ನಾಗರಾಜ ಮಡ್ಡಿ, ಹುಲ್ಲೇಶ ಕುರಿ, ಹನುಮಂತಪ್ಪ ದುಬ್ಬಳಿ, ಶಿಕ್ಷಣ ಪ್ರೇಮಿಗಳಾದ ಶ್ರೀಧರ್ ನದಿಚಾಗಿ, ಮುದ್ದಪ್ಪ ಬೇವಿನಹಳ್ಳಿ, ಬಸವರಾಜ್ ಬೂದಗುಂಪಿ, ಮಂಜುನಾಥ ಕುರಿ, ಪ್ರೌಢ ಶಾಲಾ ಮುಖ್ಯಶಿಕ್ಷಕ ಹನುಮಂತಪ್ಪ ಕುರಿ, ಶಿಕ್ಷಕರುಗಳಾದ ಅಶೋಕ, ಮಂಜುಳಾ ನಿವೃತ್ತ ಶಿಕ್ಷಕ ಜಹಿರ್ ಅಹಮದ್ ಸೇರಿದಂತೆ ಹಲವರು ಇದ್ದರು.
ಸಮೀಪದ ಬೇವಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಮಟ್ಟದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಜಾನಪದ ಕಲಾವಿದ ಮಹಬೂಬ್ ಕಿಲ್ಲೆದಾರ್…
Comments are closed.