ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ: ’ಆರೋಗ್ಯಕರ ಜೀವನವನ್ನು ನಡೆಸುವ ಕಲೆ’

ಕೊಪ್ಪಳ ಏ. ೨೫: ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿಎನ್.ಎಸ್.ಎಸ್‌ಘಟಕ ಮತ್ತುಜಿಲ್ಲಾಏಡ್ಸ್‌ತಡೆಗೆಟ್ಟುವಿಕೆ ಮತ್ತು ನಿಯಂತ್ರಣಘಟಕ, ಕೊಪ್ಪಳಇವರ ಸಹಯೋಗದಲ್ಲಿ’ಆರೋಗ್ಯಕರಜೀವನವನ್ನು ನಡೆಸುವ ಕಲೆ’ ಎಂಬ ವಿಷಯದ ಮೇಲೆ ಒಂದು ದಿನದರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಈ ವಿಚಾರಸಂಕಿರಣವನ್ನು ಪ್ರೊ. ಕೆ ವಿ ಪ್ರಸಾದ ಉದ್ಘಾಟಿಸಿ ಮಾತನಾಡಿದ ಅವರುವಿದ್ಯಾರ್ಥಿಗಳು ಜ್ಞಾನ ಮತ್ತುಕೌಶಲ್ಯ ಪಡೆದುಉತ್ತಮ ವೃತ್ತಿ ಪಡೆಯುವಜೊತೆಗೆದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದುವುದುಅತೀ ಮುಖ್ಯಎಂದು ಹೇಳಿದರು.ನಂತರ ಜರುಗಿದಒಂದನೇ ಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾಏಡ್ಸ್‌ತಡೆಗೆಟ್ಟುವಿಕೆ ಮತ್ತು ನಿಯಂತ್ರಣ ಅಧಿಕಾರಿಗಳಾದ ಡಾ. ಶಶಿಧರ ಎ.ಇವರು ಲೈಂಗಿಕ ರೋಗಗಳ ಕುರಿತು ಮಾತನಾಡುತ್ತ, ಇಂದಿನ ಯುವಪೀಳಿಗೆ ದುಷ್ಚಟಗಳಿಗೆ ಬಲಿಯಾಗದೆತಮ್ಮಅಮೂಲ್ಯವಾದಜೀವನವನ್ನುಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಜೊತೆಗೆಯುವಕರು ಲೈಂಗಿಕ ರೋಗಗಳ ಕುರಿತುಜಾಗೃತ ವಹಿಸಬೇಕೆಂದು ತಿಳಿಸಿದರು.ಎರಡನೇ ಗೋಷ್ಠಿಯಲ್ಲಿಡಾ. ಆನಂದಚೌಹ್ಹಾಣ, ವೈದ್ಯರು, ಕಿಮ್ಸ ಕೊಪ್ಪಳ ಇವರುಮಾತನಾಡಿ ವಿಧ್ಯಾರ್ಥಿಗಳಿಗೆ ಆರೋಗ್ಯವಾಗಿರಲುಆಹಾರದ ಮಹತ್ವ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕೊನೆಯ ಗೋಷ್ಠಿಯಲ್ಲಿಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆಯುರ್ವೆದಿಕ್‌ಕಾಲೇಜಿನಪ್ರಾಧ್ಯಾಪಕರಾದಡಾ. ಸುರೇಶ ಹಕ್ಕಂಡಿ, ಇವರುಯುವಕರು ಇಂದಿನ ಜಾಗತಿಕಯುಗದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಅತಿ ಹೆಚ್ಚಾಗಿ ಬಳಸಿ ತಮ್ಮಅರೋಗ್ಯವನ್ನು ಹಾಳುಮಾಡಿಕೊಳ್ಳಬಾರದು ಎಂದು ಹೇಳಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಚನ್ನಬಸವ ಅವರುವಹಿಸಿ, ಯುವ ಪೀಳಿಗೆ ತಮ್ಮಜವಾಬ್ದಾರಿಅರಿತುಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬಾಳಲು ಕರೆ ನೀಡಿದರು.ಈ ವಿಚಾರ ಸಂಕಿರಣದಲ್ಲಿ ಬೇರೆಜಿಲ್ಲೆ ಮತ್ತು ತಾಲೂಕುಗಳಿಂದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಶರಣಪ್ಪಚೌವ್ಹಾಣ, ಡಾ. ಜಾಲಿಹಾಳ ಶರಣಪ್ಪ, ಉಪಪ್ರಾಚಾರ್ಯರಾದಡಾ. ಕರಿಬಸವೇಶ್ವರ ಬಿ ಹಾಗೂ ಐಕ್ಯೂಎಸಿ ಸಂಯೋಜಕರಾದಡಾ.ಅರುಣಕುಮಾರ ಭಾಗವಹಿಸಿದ್ದರು. ಜೊತೆಗೆ ಪ್ರಾಧ್ಯಾಪಕರಾದಶರಣಬಸಪ್ಪ ಬಿಳಿಎಲಿ,ಡಾ.ಮಂಜುನಾಥ ಗಾಳಿ, ಡಾ.ಮಂಜುನಾಥ ಎಂ, ಡಾ.ನಾಗರಾಜದಂಡೋತಿ, ಡಾ. ಶಶಿಕಾಂತ ಉ, ಕು. ಶೀದೇವಿ, ಡಾ. ಪ್ರಶಾಂತ ಕೆ, ಡಾ. ಸುಂದರ ಮೇಟಿ, ಮಹೇಶ್ ಬಿರಾದಾರ, ಸುಮಲತಾ ಬಿ.ಎಂ.ಮತ್ತಿತರು ಉಪಸ್ಥಿತರಿದ್ದರು.
Comments are closed.