ಬಂಡಾರ ಪ್ರಕಾಶನದ ರೇಣುಕಾ ಕೋಡಗುಂಟಿಯವರಿಗೆನಂಜನಗೂಡುತಿರುಮಲಾಂಬ ಪ್ರಕಾಶನ ಪ್ರಶಸ್ತಿ

Get real time updates directly on you device, subscribe now.


ರಾಯಚೂರುಜಿಲ್ಲೆಯ ಮಸ್ಕಿಯ ಬಂಡಾರ ಪ್ರಕಾಶನದ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಪ್ರಮುಖಕಾರಣಕರ್ತರಲ್ಲಿಒಬ್ಬರಾದಬಂಡಾರ ಪ್ರಕಾಶನದರೇಣುಕಾಕೋಡಗುಂಟಿಯವರಕಾರ್ಯವನ್ನು ಗುರುತಿಸಿ ಕರ್ನಾಟಕ ಪ್ರಕಾಶರ ಸಂಘವು ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನ ಬೆಂಗಳೂರು ಇವರ ೨೦೨೫ನೇ ಸಾಲಿನ ಶ್ರೀಮತಿ ನಂಜನಗೂಡುತಿರುಮಲಾಂಬ ಪ್ರಕಾಶನ ಪ್ರಶಸ್ತಿಯನ್ನು ರೇಣುಕಾಕೋಡಗುಂಟಿಯವರಿಗೆ ದಿನಾಂಕ ೨೩.೪.೨೦೨೫ ರಂದು ನಡೆದಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.
ರಾಯಚೂರುಜಿಲ್ಲೆಯ ಮಸ್ಕಿಯ ಬಂಡಾರ ಪ್ರಕಾಶನವು ೨೦೦೬ ರಲ್ಲಿ ಪ್ರಾರಂಭವಾಯಿತು. ಕೋಡಗುಂಟಿಕುಟುಂಬದ ಬಸವರಾಜಕೋಡಗುಂಟಿ, ಪರಶುರಾಮಕೋಡಗುಂಟಿ ಮತ್ತುರೇಣುಕಾಕೋಡಗುಂಟಿ ಈ ಮೂರುಜನ ಸಹೋದರಿ ಸಹೋದರರು ಪ್ರಕಾಶನವನ್ನು ಆರಂಭಿಸಿ ಹಲವು ವಿಭಿನ್ನ ಯೋಜನೆಗಳನ್ನು ಮಾಡುವುದರ ಮೂಲಕ ನಾಡಿನ ವಿದ್ವಾಂಸರ ಗಮನ ಸೆಳೆದಿದ್ದಾರೆ.ಪರಶುರಾಮಕೋಡಗುಂಟಿ ಈ ಪ್ರಕಾಶನದ ಪ್ರಕಾಶಕರಾಗಿದ್ದಾರೆ. ಬಂಡಾರ ಪ್ರಕಾಶನದ ವಿಶೇಷತೆಎಂದರೆಭಾಷೆ, ಜಾನಪದ, ಸಂಶೋಧನೆಗೆಹೆಚ್ಚಿನ ಮಹತ್ವವನ್ನುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭಾಷೆ, ಸಂಶೋಧನೆ, ಜಾನಪದಕ್ಕೆ ಸಂಬಂಧಪಟ್ಟ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮತ್ತುಹೈದ್ರಾಬಾದ್‌ಕರ್ನಾಟಕದ ಬರಹಗಾರರನ್ನು ಬೆಳೆಸಬೇಕೆಂಬ ಕಾಳಜಿಯಿಂದ ಈ ಭಾಗದ ಹಲವು ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಇತ್ತೀಚಿಗೆಕಾವ್ಯಕರ್ನಾಟಕಉಪನ್ಯಾಸಆನ್ ಲೈನ್‌ಕಾರ್ಯಕ್ರಮವು ಸತತವಾಗಿ ೧೦೦ ದಿನಗಳ ಕಾಲ ಯಶಸ್ವಿಯಾಗಿ ನಡೆದಿರುವ ಬಗ್ಗೆ ಕನ್ನಡ ನಾಡಿನ ವಿದ್ವಾಂಸರು, ಸಾಹಿತ್ಯಾಸಕ್ತರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.ಇಷ್ಟು ಮಾತ್ರಅಲ್ಲದೆ ಅನೇಕ ವಿಚಾರ ಸಂಕಿರಣಗಳನ್ನು ಮಾಡಿದ್ದಾರೆ. ಪುಸ್ತಕಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸಲು ಮತ್ತು ಹೊಸ ಓದುಗರನ್ನು ಬೆಳೆಸುವುದಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು, ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಇಷ್ಟು ಮಾತ್ರಅಲ್ಲದೆಇನ್ನೂ ಅನೇಕ ಸಾಹಿತ್ಯಿಕಮತ್ತುಜನಪರಉತ್ತಮ ಕೆಲಸಗಳನ್ನು ಮಾಡಿದ್ದಾರೆ.ಬೇರೆ ಬೇರೆ ಪ್ರಕಾಶನದ ಮತ್ತುಎಲ್ಲಾ ವಿಶ್ವವಿದ್ಯಾಲಯದ ಪುಸ್ತಕಗಳನ್ನು ತರಿಸಿಕೊಂಡು ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದ್ದಾರೆ. ಸಾಹಿತ್ಯಕ್ಕೆ ಮೀಸಲಾದಯೂಟ್ಯೂಬ್‌ಚಾನಲ್ ನ್ನುಕೂಡ ನಡೆಸುತ್ತಿದ್ದಾರೆ.ಅವರ ಸಂಪರ್ಕದ ಮೋಬೈಲ್ ನಂಬರ್‌ಪರಶುರಾಮಕೋಡಗುಂಟಿ :೯೮೮೦೧೩೨೫೬೯

 

Get real time updates directly on you device, subscribe now.

Comments are closed.

error: Content is protected !!