ರಾಜ್ಯಕ್ಕೆ ಕನ್ನಡ ಲೇಖಕಿಯರ ಕೊಡುಗೆ ಅಪಾರ : ಕುಲಪತಿ ಬಿ.ಕೆ. ರವಿ
ಕನ್ನಡ ನಾಡಿಗೆ ಲೇಖಕಿಯರ ಕೊರತೆ ಇಲ್ಲ- ರಾಜ್ಯಕ್ಕೆ ಕನ್ನಡ ಲೇಖಕಿಯರ ಕೊಡುಗೆ ಅಪಾರ : ಕುಲಪತಿ ಬಿ.ಕೆ. ರವಿ
ಕೊಪ್ಪಳ,ಜೂ-11
ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ. ಕನ್ನಡ ನಾಡಿಗೆ ಲೇಖಕಿಯರ ಕೊರತೆ ಇಲ್ಲ. ಪ್ರತಿಭಾವಂತ ಲೇಖಕಿಯರು ನಮ್ಮಲ್ಲಿದ್ದಾರೆಂದು ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಹೇಳಿದ್ದಾರೆ.
ರಾಜ್ಯದೆಲ್ಲೆಡೆ ಅನೇಕ ಸಾಮಾಜಿಕ, ಸಾಹಿತ್ಯಕ ಲೇಖನಗಳನ್ನ ಪ್ರತಿಭಾವಂತ ಲೇಖಕಿಯರು ನಾಡಿಗೆ ಪರಿಚಯಿಸಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂತ ವಿಶ್ವ ವಿದ್ಯಾಲಯದಲ್ಲಿ ಚೀನಾ ಮಂಗಳಮ್ಮ ಪ್ರಥಮ ಬಾರಿಗೆ ಪತ್ರಕೋದ್ಯಮ ವಿಭಾಗ ಆರಂಭಿಸಿದ್ದನ್ನ ಸ್ಮರಿಸಿದರು. ಮಾಧ್ಯಮ ಮತ್ರು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತರೊದು ಉತ್ತಮ ಬೆಳವಣಿಗೆ ಎಂದರು. ಅನೇಕ ಲೇಖಕಿಯರ ಜತೆ ಒಡೆನಾಟ ಹೊಂದಿದ್ದೇನೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕುಲಪತಿ ಬಿ.ಕೆ. ರವಿ ಮಾತನಾಡಿದರು.
ಈಗಿನ ಸಂದರ್ಭದಲ್ಲಿ ತಂತ್ರಜ್ನಾನ ಬಹಳಷ್ಟು ವೃದ್ದಿಯಾಗಿದೆ . ಆದ್ರೆ ಹಿಂದೆ ಕೇವಲ ಸ್ಥಿರ ದೂರವಾಣಿಯಲ್ಲಿ ಪತ್ರಿಕೊದ್ಯಮ ಕೆಲಸ ಮಾಡುವುದು ಬಹಳಷ್ಟು ಕಷ್ಟವಾಗಿತ್ತು ಎಂದು ತಮ್ಮ ಸೇವಾನುಭವ ಬಿಚ್ಚಿಟ್ಟರು. ಕನ್ನಡ ನಾಡಿಗೆ ಕನ್ನಡ ಲೇಖಕಿಯರ ಕೊಡುಗೆ ಅಪತವಾಗಿದೆ ಎಂದು ಹೇಳಿದರು.
ಮಹಿಳೆಯರು ಕೌಟುಂಬಿಕ ನಿರ್ವಹಣೆ ಮುಗಿಸಿ ಸಾಹಿತ್ಯ ಅಭಿರುಚಿಯತ್ತ ಆಸಕ್ತಿ ತೋರಿಸುವುದು ಸುಲಭದ ಮಾತಲ್ಲ ಎಂದು ಹೇಳಿದರು.
ಕಷ್ಟದ ಸಂದರ್ಭದಲ್ಲೂ ಸಾಹಿತ್ಯ ಕೃಷಿ ಬೆಳೆಸಿರುವುದು ಗಮನಾರ್ಹ ಎಂದ ರವಿ, ಕನ್ನಡ ಲೇಖಕಿಯರ ಕೊಡುಗೆ ರಾಜ್ಯಕ್ಕೆ ಅಪಾರವಿದೆ ಎಂದು ಒತ್ತಿ ಹೇಳಿದರು.
ಇಂದಿನ ತಂತ್ರಜ್ನಾದ ಭರಾಟೆಯ ಮಧ್ಯೆಯೂ ಸಾಹಿತ್ಯ ಕೃಷಿ ಮುಂದುವರೆಯಲಿ. ಅಗತ್ಯಕ್ಕೆ ತಕ್ಕಷ್ಟು ತಂತ್ರಜ್ನಾನವನ್ನ ಮೈಗೂಡಿಸಿಕೊಳ್ಳಿ ಎಂದರು. ಓದಿಗೆ ಹೆಚ್ಚಿನ ಅವಕಾಶ ಕೊಡಿ ಪ್ರತಿಭಾವಂತ ಲೇಖಕಿಯರು ಪುಸ್ತಕಗಳನ್ನ ಬರೆಯುವ ಮೂಲಕ ಸಾಹಿತ್ಯಕ್ಕೆ ಉತ್ತೇಜನ ನೀಡಿ ಕನ್ನಡ ಭಾಷೆಯ ಶ್ರಿಮಂತಿಕೆ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಕೊಪ್ಪಳ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ. ಮುಮ್ತಾಜ್ ಬೇಗಂ, ಹನುಮಾಕ್ಷಿ ಗೋಗಿ, ಸಾವಿತ್ರಿ ಮುಜುಮದಾರ್, ಅನಸೂಯ ಜಾಗಿರದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Comments are closed.