ಕೌಟುಂಬಿಕ ಆಸಕ್ತಿ ಬದಿಗೊತ್ತಿ ಸಾಹಿತ್ಯ ಕೃಷಿಗೆ ಒತ್ತು ನೀಡಿ: ಲೇಖಕಿ ಡಾ.ಮುಮ್ತಾಜ್ ಬೇಗಂ
ಕೊಪ್ಪಳ,
ಸಾಹಿತ್ಯ ಕೃಷಿಯ ಆಸಕ್ತಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. 15 ವರ್ಷಗಳ ನಂತರ ಲೇಖಕಿಯರು ಸಂಘಟಿತರಾಗಿದ್ದು ಉತ್ತಮ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಮುಮ್ತಾಜ್ ಬೇಗಂ ಹೇಳಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನದ ಪದಗ್ರಹಣ ಸ್ವಿಕರೀಸಿ ಮಾತನಾಡಿದರು.
ಲೇಖಕಿಯರು ಕೌಟುಂಬಿಕ ಆಸಕ್ತಿಗಳನ್ನ ಮೀರಿ ಲೇಖಕಿಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಯಾವುದೇ ಜಾತಿ, ವರ್ಗಕ್ಕೆ ಸಿಮೀತವಾಗದ ಕರ್ನಾಟಕ ಲೇಖಕಿಯರ ಸಂಘವಿದ್ದು, ಎಲ್ಲಾ ಸಾಹಿತ್ಯಾಸಕ್ತರು ಸಂಘದಲ್ಲಿ ಸದಸ್ಯತ್ವ ಪಡೆದು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪ್ರಜಾಪ್ರಭುತ್ವದಲ್ಲಿ ಮಹಿಳೆಯ ಪಾತ್ರ ಬಹು ದೊಡ್ಡದು ಎಂಬುದು ಭವಿಷ್ಯದಲ್ಲಿ ಮತ್ತಷ್ಟು ಮನದಟ್ಟಾಗುವ ಸಮಯ ಬರಲಿದೆ ಎಂದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ ಎಂದ ಬೇಗಂ, ಮಹಿಳೆಯರ ಅಭಿವ್ಯಕ್ತಿ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು.
ವರ್ಷಪೂರ್ತಿ ಸಾಹಿತ್ಯಕ ಚಟುವಟಿಕೆ ಹಮ್ಮಿಕೊಳ್ಳಲು ಲೇಖಕಿಯರ ಸಂಘ ಉದ್ದೇಶಿಸಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಕೊಪ್ಪಳ ವಿವಿ ಕುಲಪತಿ ಬಿಕೆ ರವಿ, ಹನುಮಾಕ್ಷಿ, ಸಾವಿತ್ರಮ್ಮ, ಅನಸೂಯ, ಪುಷ್ಪ, ವಿಜಯಲಕ್ಷ್ಮಿ ಭಾಗಿಯಾಗಿದ್ದರು.
Comments are closed.