ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ವಿಶೇಷ ಚೇತನರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಜೀವನ ಸಂಗಾತಿ ಜೊತೆಗೆ ಜೀವನೋಪಾಯ
ಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಎರಡು ದಾರಿಗಳು ಗೋಚರಿಸುತ್ತವೆ. ಒಂದು ಆತ್ಮಹತ್ಯೆಯ ದಾರಿ ಇನ್ನೊಂದು ಆತ್ಮ ಪರಿವರ್ತನೆಯ ದಾರಿ. ಕಷ್ಟಕ್ಕೆ ಹೆದರಿ ಸಾಯಲೂಬಹುದು ಅಥವಾ ಸಹನೆ, ಸಹಾನುಭೂತಿ, ಸಾಹಸದಿಂದ ಇತಿಹಾಸವನ್ನೇ ಸೃಷ್ಠಿಸಲೂಬಹುದು. ದೇವರು ಕರುಣಿಸಿದ ದೇಹದ ಯಾವುದೋ ಒಂದು ಅಂಗವೈಕಲ್ಯಯಾಗಿದೆಯಂದು ಪರಿತಪಿಸಬಾರದು ಅದು ಅಂಗವಿಕಲತೆಯೇ ಹೊರತು ಬದುಕಿನ ವಿಕಲತೆಯಲ್ಲ. ಬದುಕು ಬವಣೆಗಳ ಗೂಡಾಗದೆ ಭರವಸೆಯ ಬೆಳಕಾಗಬೇಕು. ಅಂಗವಿಕಲತೆಯು ಮನೋವಿಕಲತೆಗೆ ದಾರಿ ಮಾಡಿಕೊಡಬಾರದು. ನಾನು ಸೃಷ್ಠಿಸಿ ಸೃಜಿಸಿದÀ ಬದುಕನ್ನು ಕಂಡು ಭಗವಂತನೇ ಮೆಚ್ಚಿ, ನೀನು ಸೃಷ್ಠಿಸಿಕೊಂಡ ಬದುಕಿನ ಮುಂದೆ ನನ್ನದೇನು ಇಲ್ಲ ಅನ್ನುವ ಹಾಗೇ ಬದುಕಿ ಜಗತ್ತಿಗೆ ಮಾದರಿಯಾಗಬೇಕು ವಿಶೇಷ ಚೇತನರು.
ಈ ನಿಲುವನ್ನು ಗಮನದಲ್ಲಿಟ್ಟುಕೊಂಡು ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೪ರ ಪ್ರಯುಕ್ತ ಈ ವರ್ಷ ಸಂಸ್ಥಾನ ಶ್ರೀ ಗವಿಮಠವು ವಿಶೇಷ ಚೇತನರ ಬದುಕಿಗೆ ವಿಶೇಷ ಚೈತನ್ಯ ಒದಗಿಸುವ ದೃಷ್ಠಿಯಿಂದ ಉಚಿತ ಸಾಮೂಹಿಕ ವಿವಾಹ ನೆರವೇರಿಸಲು ನಿರ್ಧರಿಸಿದೆ. ದಿನಾಂಕ: ೨೧-೦೧-೨೦೨೪ ರಂದು ಶ್ರೀಮಠದ ಆವರಣದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ೫೦ ನವಜೋಡಿಗಳಿಗೆ ಅವಕಾಶ ಇದೆ ಮದುವೆಯ ನಂತರ ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗಲು ನೊಂದಾಯಿತ ಜೋಡಿಗಳಿಗೆ ಜೀವನೋಪಾಯಕ್ಕಾಗಿ ೧ ಝರಾಕ್ಸ್ ಯಂತ್ರ, ಪೆಟ್ಟಿ ಶಾಪ್(ಸಣ್ಣ ಅಂಗಡಿ) ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕೆAದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:-
ಶ್ರೀ ನಾಗರಾಜ ದೇಸಾಯಿ – ೯೪೪೮೨೬೩೦೧೯
(ಮುಖ್ಯಸ್ಥರು ಸರ್ವೋದಯ ಸಂಸ್ಥೆ, ಕೊಪ್ಪಳ.)
ಶ್ರೀ ಮಲ್ಲಿಕಾರ್ಜುನ ವೈ ಪೂಜಾರ – ೯೯೦೧೫೦೧೨೩೫
(ಜಿಲ್ಲಾಧ್ಯಕ್ಷರು ವಿಕಲಚೇತನರ ಒಕ್ಕೂಟ ಕೊಪ್ಪಳ.)
Comments are closed.