ಅರ್ಥಪೂರ್ಣವಾಗಿ ನಡೆದ ಮಕ್ಕಳ ಹಕ್ಕುಗಳ ಸಂಸತ್-2023

Get real time updates directly on you device, subscribe now.

: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಕೊಪ್ಪಳ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು ಹಾಗೂ ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಬ್ರೆöÊಟ್‌ಇಂಡಿಯಾ ಸೊಸೈಟಿ, ಕೊಪ್ಪಳ ಜಿಲ್ಲೆಯ ಸಂಘ-ಸAಸ್ಥೆಗಳ ಇವರ ಸಂಯುಕ್ತಾಶ್ರಯದಲಿ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2023ರ ಕೊಪ್ಪಳ ಜಿಲ್ಲಾ ಮಟ್ಟದ ಮಕ್ಕಳ ಸಮಸ್ಯೆಗಳ ಕುರಿತು ಸಮಾಲೋಚನೆ ಸಭೆ ನವೆಂಬರ್ 8ರಂದು ಅರ್ಥಪೂರ್ಣವಾಗಿ ನಡೆಯಿತು.

ಕೊಪ್ಪಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ್ರ ರಾಮತ್ನಾಳ ಅವರು ಮಾತನಾಡಿ, ಮಕ್ಕಳು ತಮ್ಮ ನಾಯ್ಯಸಮ್ಮತವಾದ ಹಕ್ಕುಗಳ ಬಗ್ಗೆ ಮಾತನಾಡಲು ಈ ಕಾರ್ಯಕ್ರಮ ವೇದಿಕೆ ನೀಡಿದೆ. ಅದೇ ರೀತಿ ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಯಾರೇ ಅಧಿಕಾರಿಗಳು, ಸಾರ್ವಜನಿಕರಿಂದ ಮಕ್ಕಳು ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಆಶೆ ಆಮೀಸಗಳಿಗೆ ಒಳಗಾದರೆ ಮಕ್ಕಳ ಸಹಾಯವಾಣಿ-1098 ಅಥವಾ ತುರ್ತ ಸೇವೆ -112 ಗೆ ಮಕ್ಕಳು ಕರೆ ಮಾಡಿ ತಿಳಿಸಬೇಕು. ಅಂತಹ ಮಕ್ಕಳ ಪಾಲನೆ ಪೋಷಣೆ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಗೌರವಿಸುವ ಕೆಲಸವನ್ನು ನಮ್ಮ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾಡುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಯುನಿಸೆಪ್) ಕೊಪ್ಪಳ ಸಯೋಜಕರಾದ ಹರೀಶ ಜೋಗಿ ಮಾತನಾಡಿ, ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಮಕ್ಕಳ ಸಮಸ್ಯೆಗಳೇನು? ಮಕ್ಕಳ ನಿಜವಾದ ಬೇಡಿಕೆಗಳೇನು? ಮಕ್ಕಳ ಯಾವ ಸಮಸ್ಯೆ, ಬೇಡಿಕೆಗಳನ್ನು ಸರ್ಕಾರವು ತುರ್ತಾಗಿ ಪರಿಶೀಲಿಸಬೇಕಾಗಿದೆ? ಎಂಬುದರ ಬಗ್ಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ ಅವರು ಮಾತನಾಡಿ, ಅಪೌಷ್ಠಿಕತೆ, ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಬಿಕ್ಷಾಟಣೆ ಹೀಗೆ ಅನೇಕ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಾರೆ. ಏನಾದರು ತೊಂದರೆಯಾದಲ್ಲಿ ಮಕ್ಕಳು ಧೈರ್ಯದಿಂದ ತಿಳಿಸಬೇಕು. ಮಕ್ಕಳಿಗೆ ಸಂಬAಧಿಸಿದ ಈ ಕಾರ್ಯಕ್ರಮದ ಅನುಕೂಲತೆಯನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಮಾತನಾಡಿ, ಈ ಕಾರ್ಯಕ್ರಮಕ್ಕೆ ಬ್ರೆöÊಟ್ ಇಂಡಿಯಾ ಸೊಸೈಟಿ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಹಕಾರ ಸ್ಮರಣೀಯವಾಗಿದೆ. ಕೊಪ್ಪಳ ಜಿಲ್ಲೆಯ ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿವಿಧ ಸಂಸ್ಥೆಗಳ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಚೈಲ್ಡ್ ಪಂಡ್ ಇಂಡಿಯಾ ಸಂಯೋಜಕ ಶ್ರೀ ಪ್ರಕಾಶ ಕಡಗದ ಅವರು ಇದೆ ವೇಳೆ ಮಕ್ಕಳಿಗೆ ಮಕ್ಕಳ ಹಕ್ಕುಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಮತಿ ನಿಲೋಫರ್ ರಾಂಪುರೆ, ಕೊಪ್ಪಳ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಶರಣಪ್ಪ ಗದ್ದಿ, ಮಕ್ಕಳ ರಕ್ಷಣಾಘಟಕದ ಸಮಾಜಿಕ ಕಾರ್ಯಕರ್ತರಾದ ರವಿಕುಮಾರ ಪವಾರ, ಬಾಲಕರ ಬಾಲ ಮಂದಿರದ ಲಕ್ಷಿö್ಮ ಬಾಯಿ, ವಿಸ್ಥಾರ ಸಂಸ್ಥೆಯ ಗವಿಸಿದ್ದವ್ವ, ಮೈಮುದಾ ಕುದರಿಮೋತಿ, ಮಂಜುಳಾ ಯಮನೂರ, ಕೆ.ಎಚ್.ಪಿ.ಟಿ ಕೊಪ್ಪಳದ ಸವಿತಾ, ನೆತ್ರಾವತಿ, ಬಾಳಮ್ಮ, ಯಲ್ಲವ್ವ, ಆಶಾ-ಬಾಲಕಿಯರ ಬಾಲ ಮಂದಿರದ ಶಿವರಂಜಿನಿ, ಸಾಮಾಜಿಕ ಕಾರ್ಯಕರ್ತೆ ನೇತ್ರಾವತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತ ರವಿಕುಮಾರ ಬಡಿಗೇರ ನಿರೂಪಿಸಿದರು. ಪ್ರಕಾಶ ಕಡಗದ ಸ್ವಾಗತಿಸಿದರು. ಮಂಜುನಾಥ ಸಾಗರ ವಂದಿಸಿದರು.
ಮಕ್ಕಳ ಸಂವಾದಕ್ಕೆ ಆಯ್ಕೆ: ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮಕ್ಕಳನ್ನು 5 ಗುಂಪುಗಳನ್ನಾಗಿ ವಿಂಗಡಿಸಿ, ಆಯಾ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಪಟ್ಟಿ ತಯಾರಿಸಲಾಯಿತು. ಅತಿಥಿಗಳಾದ ಜಿಲ್ಲಾ ಮಕ್ಕಳ ರಕ್ಷಣಾಘಟಕ ಅಧಿಕಾರಿ ರೊಹಿಣಿ ಕೋಟಗಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಯುನಿಸೆಪ್) ಸಂಯೋಜಕರಾದ ಹರೀಶ ಜೋಗಿ, ಕಪುಚುನ್ ಕೃಷಿಕ ಸೇವಾ ಕೇಂದ್ರದ ವ್ಯವಸ್ಥಾಪಕ ಡಾ.ಸದಾಶಿವ ಕಾಂಬಳೆ ನೇತೃತ್ವದಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಮಕ್ಕಳ ನಾಯಕತ್ವ ಗುಣಗಳನ್ನು ಗುರುತಿಸಿ ಪರಿಶೀಲಿಸಿ ಓಟ್ಟು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಕೊಪ್ಪಳ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ನವೆಂಬರ್ 21ರಂದು ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ನಡೆಯುವ ಮಕ್ಕಳ ಸಂವಾದ ಕಾರ್ಯಕ್ರಮಕ್ಕೆ ಎಲ್ಲರ ಒಮ್ಮತದ ಮೂಲಕ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಮಕ್ಕಳಿಗು ಬ್ರೆöÊಟ್‌ಇಂಡಿಯಾ ಸೊಸೈಟಿ ಮತ್ತು ಮಕ್ಕಳ ಹಕ್ಕುಗಳ ನೀಗಾ ಕೇಂದ್ರ ಬೆಂಗಳೂರ ಇವರಿಂದ ಪ್ರಮಾಣ ಪತ್ರ ವಿತರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: