ದುಶ್ಚಟದ ಮದ್ಯಪಾನ ಬಿಟ್ಟು ಕುಟುಂಬದ ರಕ್ಷಣೆ ಮಾಡಿ:- ದೊಡ್ಡಬಸವನಗೌಡ  ಪಾಟೀಲ ಬಯ್ಯಾಪೂರ

0

Get real time updates directly on you device, subscribe now.

 

ಕುಷ್ಟಗಿ:- ಈ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಚಟವೆಂದರೆ ಮದ್ಯಪಾನವಾಗಿದ್ದು ದುಶ್ಚಟದಿಂದ ದೂರ ಇದ್ದು ಕುಟುಂಬದ ರಕ್ಷಣೆ ಮಾಡುವಂತ ಕೆಲಸ ಪ್ರತಿಯೊಬ್ಬ ಯುವಕರಿಂದ ಮತ್ತು ಮದ್ಯಪಾನ ಮಾಡುವರಿಂದ ಆಗಬೇಕಾಗಿದೆ ಎಂದು ದಿಶಾ ಸಮಿತಿ ಸದಸ್ಯ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಹೇಳಿದರು.

 

ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಕ್ ಜಿ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಸಂಶೋಧನಾ ಕೇಂದ್ರ ವಿಸ್ತರಣೆ ಕಾರ್ಯಕ್ರಮದಡಿಯಲ್ಲಿ 2083ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಡವರ ರಕ್ತ ಹೀರುವ ಸ್ಲೋ ಪಾಯಿಸನ್ ಎಂದರೆ ಅದು ಮಧ್ಯಪಾನ ಮತ್ತು ಬೀಡಿ ಸಿಗರೇಟ್ ಪಾನ್ ಪರಾಕ್ಗಳಂತಹ ಪದಾರ್ಥಗಳಾಗಿದ್ದು ಚಟದಲ್ಲಿ ತೊಡಗಿರುವಂತಹ ಯುವಕರು ಮತ್ತು ಚಟವನ್ನು ಮಾಡುವಂತಹ ವ್ಯಕ್ತಿಗಳು ಇವುಗಳಿಂದ ದೂರವಿದ್ದಾಗ ಮಾತ್ರ ಒಂದು ಕುಟುಂಬದ ರಕ್ಷಣೆ ಆಗುತ್ತದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳುತ್ತಾರೆ ಎಂದರು. ಆದರೆ ಇವತ್ತು ಶ್ರೀ ಮಂಜುನಾಥ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಡವರ ಬಂಗಾರದ ಬಾಳನ್ನು‌ ಅಸಲು ಮಾಡಲು ಕುಸಿತದಿಂದ ತಮ್ಮ‌ ಆರೋಗ್ಯವನ್ನು ಹಾಳು ಮಾಡಿಕೊಂಡು ಸಮಾಜದ ದೃಷ್ಟಿಯಲ್ಲಿ ಕೆಟ್ಟ ವ್ಯಕ್ತಿಯಾಗಿ ಕಾಣುವಂತಹ ವ್ಯಕ್ತಿಗಳನ್ನು ಕರೆಸಿ ಮದ್ಯ ವ್ಯಸನ ಮುಕ್ತ ಯೋಜನೆಯ ಮೂಲಕ ಬಡವರಿಗೆ ದೀನ ದಲಿತರಿಗೆ  ಯೋಜನೆಗಳನ್ನು ಹಾಕಿ ಮದ್ಯ  ಮುಕ್ತ ಮಾಡಲು ಇವತ್ತು ಶ್ರೀ ಧರ್ಮಸ್ಥಳ ಮುಂದಾಗಿದೆ. ಇದನ್ನು ಕುಸಿತದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಇದರ ಉಪಯೋಗವನ್ನು ತೆಗೆದುಕೊಂಡು ಮದ್ಯಪಾನದ ವ್ಯಸನದಿಂದ ದೂರ ಇರಬೇಕು.  ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಈ ಯೋಜನೆಯನ್ನು ಸದುಪಯೋಗ ತೆಗೆದುಕೊಂಡು ದೃಶ್ಚಟದಿಂದ ದೂರ ಇದ್ದು ಬಡತನದಿಂದ ಮುಕ್ತಿ ಹೊಂದಬೇಕು ಎಂದು ಹೇಳಿದರು.

 

ನಂತರ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಐ ವಿಶ್ವನಾಥ ಹಿರೇಗೌಡರ್ ಮಾತನಾಡಿ ಸಾಕಷ್ಟು ಯುವಕರು ಮತ್ತು ವ್ಯಕ್ತಿಗಳು ಮದ್ಯಪಾನದಲ್ಲಿ ತೊಡಗಿಸಿಕೊಂಡಿದ್ದು ನಮ್ಮ ಪೊಲೀಸ್ ಇಲಾಖೆಯಿಂದ ಕೂಡ ಸಾಕಷ್ಟು ಕಾರ್ಯಕ್ರಮ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುದೆ ಆದರೆ ಮಧ್ಯಮದಿಂದ ದೂರ ಇರಲು ಮೊದಲು ಮದ್ಯ ಕುಡಿತವನ್ನು ಬೀಡಬೇಕು ಈ  ಕಾರ್ಯಕ್ರಮದ ಉದ್ದೇಶವೊಂದೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕು ಎನ್ನುವ ದೃಷ್ಟಿಯಿಂದ ಸಮಾಜದಲ್ಲಿ ಸರಿಸಮನಾಗಿ ಪ್ರತಿಯೊಬ್ಬರು ಬಾಳಬೇಕು ಎನ್ನುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಆದ್ದರಿಂದ ಯಾರು ಮಧ್ಯಪಾನ ಮತ್ತು ಪಾನ್ ಮಸಾಲ ಗಳಂತಹ ಚಟವನ್ನು ಬೀಡಬೇಕು ಚಟಮಾಡುವವರು  ಚಟವನ್ನು ಬಿಡಬೇಕು ಎಂದು ಹೇಳಿದರು.

 

ಈ ಸಂದರ್ಭದಲ್ಲಿ      ಪ್ರಾಸ್ತಾವಿಕವಾಗಿ ಮಾನ್ಯ ಜಿಲ್ಲಾ ನಿರ್ದೇಶಕರು ವಿಠ್ಠಲ ಪೂಜಾರಿ ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಈಗಾಗಲೇ ರಾಜ್ಯಾದ್ಯಂತ 2082 ಮದ್ಯವರ್ಜನ ಶಿಬಿರ ಕಾರ್ಯಕ್ರಮಗಳು ಪೂರ್ಣ ಗೊಂಡಿದ್ದು ಒಟ್ಟು 136000 ಸಾವಿರಕಿಂತಲೂ ಹೆಚ್ಚು ಮದ್ಯ ವ್ಯಸನಿಗಳಿಗೆ ವ್ಯಸನ ಮುಕ್ತ ಚಿಕಿತ್ಸೆ ನೀಡಲಾಗಿದೆ ಇದರಿಂದ ಮಧ್ಯಮ ವರ್ಗದ ಬಡ ಕುಟುಂಬದ ಅಭಿವೃದ್ಧಿ  ಹೊಂದಿವೆ, ಧರ್ಮಸ್ಥಳದ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕಾರ್ಯಕ್ರಮಗಳಾದ ಕೆರೆ ಅಭಿವೃದ್ಧಿ,ದೇವಸ್ಥಾನಗಳ ಜೀರ್ಣೋದ್ಧಾರ, ಮಹಿಳಾ ಸಬಲಿಕರ್ಣ,ವಿದ್ಯಾರ್ಥಿಗಳಿಗೆ ಶಿಷ್ಯವೇತನ,ಮಾಶಾಸನ,ಸರಕಾರಿ ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರನ್ನು ಒದಗಿಸುವಂತಹ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅನುಷ್ಠಾನದ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು  1083 ನೇ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ)ಬೆಳ್ತಂಗಡಿ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜಿಲ್ಲಾ  ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಕೊಪ್ಪಳ,  ಗ್ರಾಮ ಪಂಚಾಯತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನವಜೀವನ ಸಮಿತಿ ಕುಷ್ಟಗಿ,  ವೇ ಮೂ ಮಲ್ಲೇಶಯ್ಯ ಪಟದಯ್ಯ ಹಿರೇಮಠ, ಹಿರೇಬನ್ನಿಗೋಳ,  ವೇ|ಮೂ| ಚನ್ನಬಸಯ್ಯ ಗುರಯ್ಯ ಹಿರೇಮಠ, ಹಿರೇಬನ್ನಿಗೋಳ,

ಬಸವರಾಜ ನಾಲತವಾಡ ಅಧ್ಯಕ್ಷರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಿರೇಬನ್ನಿಗೋಳ, ಬಸವಂತಪ್ಪ ಗದ್ದಿ ಗೌರವಾಧ್ಯಕ್ಷರು,

ನಾಗೇಶ್ ಯೋಜನಾಧಿಕಾರಿಗಳು,

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಹಿರೇಬನ್ನಿಗೋಳ,

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ,

ರಹಮಾನಸಾಬ್  ದೊಡ್ಡಮನಿ, ವೀರೇಶ ಬಂಗಾರಶೆಟ್ಟರ,

ಮಹಾಂತಯ್ಯ ಅರಳ್ಳಿಮಠ, ವಿ.ವಿ. ಹಿರೇಮಠ, ಜಯತೀರ್ಥ ದೇಸಾಯಿ, ರುದ್ರಪ್ಪ ಶರಣಪ್ಪ ಅಕ್ಕಿ, ಸದಸ್ಯರು ಜಿಲ್ಲಾ ಜನ ಜಾಗೃತಿ ವೇದಿಕೆ ಕೊಪ್ಪಳ.

ಅಧ್ಯಕ್ಷರು ಹಾಲು ಒಕ್ಕೂಟ ಬಳ್ಳಾರಿ.ನಿರಂಜನ ಕ್ಷೇತ್ರ ಯೋಜನಾಧಿಕಾರಿಗಳು,

ಅರುಣ,ಮಹೇಶ್, ಗಣೇಶ, ಶರಣಪ್ಪ,ಪ್ರಕಾಶ,ನವೀನ್ ರಾಘವೇಂದ್ರ,ಮಂಜುಳಾ, ನಂದಾ,ಅಕ್ಕಮಹಾದೇವಿ, ಸಂಗೀತ, ದೀಪಿಕಾ, ರೀಹಾನ,ರೂಪಾ ಮೇಲ್ವಿಚಾರಕರು, ಒಕ್ಕೂಟದ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!