ಇನ್ನರ್ ವೀಲ್ ಸಂಸ್ಥೆಯಿಂದ  ಸ್ಯಾನಿಟರಿ ಪ್ಯಾಡ್ ಯಂತ್ರಗಳ ಅಳವಡಿಕೆ

0

Get real time updates directly on you device, subscribe now.

ಕೊಪ್ಪಳ: ಇನ್ನರ್ ವೀಲ್ ಕ್ಲಬ್  ಕೊಪ್ಪಳ ವತಿಯಿಂದ ಶ್ರೀ ಗವಿಸಿದ್ದೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು, ಕಾಟ್ರಳ್ಳಿಯಲ್ಲಿ ಆರು ಸ್ಯಾನಿಟರಿ ಪ್ಯಾಡ್ ಇನ್ಸಿನರೇಟರ್ (ಬರ್ನಿಂಗ್) ಯಂತ್ರಗಳನ್ನು ಅಳವಡಿಸಲಾಯಿತು.
ಈ ಯಂತ್ರಗಳನ್ನು ಸಂಸ್ಥೆಯ ದಾನಿಗಳಾದ ಮಧು ಶೆಟ್ಟರ್,  ಸುವರ್ಣ ಶೆಟ್ಟರ್, ಪ್ರತಿಭಾ ಹಿರೇಮಠ, ವಿದ್ಯಾ ಶರಣಪ್ಪ ಸಜ್ಜನ, ಪಾಷಾ ಕಾಟನ್ ಹಾಗೂ  ಸುಶೀಲ ಹತ್ತಿ ಅವರ ಸಹಕಾರದಿಂದ ಕೊಡುಗೆಯಾಗಿ ನೀಡಲಾಯಿತು.
ವಿದ್ಯಾರ್ಥಿನಿಯರ ಆರೋಗ್ಯ, ಸ್ವಚ್ಛತೆ, ಸುರಕ್ಷತೆ ಹಾಗೂ ಶಿಸ್ತುಬದ್ಧ ವಾತಾವರಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯಂತ್ರಗಳನ್ನು ಅಳವಡಿಸಲಾಗಿದೆ.
ಕೊಪ್ಪಳದ “ಪ್ಯಾಡ್ ವುಮನ್” ಎಂದೇ ಖ್ಯಾತರಾಗಿರುವ  ಭಾರತಿ ಗುಡ್ಲಾನೂರ್ ಅವರ ಮಾರ್ಗದರ್ಶನದಲ್ಲಿ ಈ ಆರು ಯಂತ್ರಗಳನ್ನು ಸ್ಥಾಪಿಸಲಾಯಿತು.
ಅವರು ವಿದ್ಯಾರ್ಥಿನಿಯರಿಗೆ ಯಂತ್ರಗಳ ಉಪಯೋಗದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮುಟ್ಟಿನ ಆರೋಗ್ಯ, ಸ್ವಚ್ಛತೆ ಹಾಗೂ ಅದರ ಮಹತ್ವದ ಕುರಿತು ಅರಿವು ಮೂಡಿಸಿದರು.
ಒಟ್ಟು 62,000 ವೆಚ್ಚದಲ್ಲಿ ಅಳವಡಿಸಲಾದ ಈ ಯಂತ್ರಗಳು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ವಿಲೇವಾರಿಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿನಿಯರ ಉತ್ತಮ ಆರೋಗ್ಯ ಮತ್ತು ಶುಚಿತ್ವವನ್ನು ಖಚಿತಪಡಿಸುತ್ತವೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಧು ಶೆಟ್ಟರ್ ಅವರು ಮಾತನಾಡಿ, “ಮುಟ್ಟು ಎನ್ನುವುದು ಹೆಣ್ಣಿನ ಸಹಜ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಯಾವುದೇ ಸಂಕೋಚ ಹೊಂದುವ ಅಗತ್ಯವಿಲ್ಲ. ಪ್ರತಿಯೊಬ್ಬ ಹೆಣ್ಣು ಮಗು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾರ್ಥಿನಿಯರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು ಹಾಗೂ ತಮ್ಮ ತಂದೆ-ತಾಯಿಗಳಿಗೆ ಹೆಮ್ಮೆಯ ಮಕ್ಕಳಾಗಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ರಾಧಾ ಕುಲಕರ್ಣಿ, ಸುಮಂಗಲ ಹಂಚಿನಾಳ, ಕೋಮಲ ಕುದುರಿಮೋತಿ, ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆಯರು, ಪದಾಧಿಕಾರಿಗಳು, ಸದಸ್ಯೆಯರು, ಯಂತ್ರಗಳನ್ನು ದಾನ ಮಾಡಿದ ದಾನಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!