ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Get real time updates directly on you device, subscribe now.

ಕೊಪ್ಪಳ : ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ವಿವಿಧ ಘಟಕಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಅನೇಕ ಮುಖಂಡರು ಮಾತನಾಡಿದರು. ಕೇಂದ್ರ ಬಿಜೆಪಿ ಸರಕಾರ ಅಚ್ಛೇ ದಿನ್ ಹೆಸರಲ್ಲಿ ಜನರಿಗೆ ಬಹುದೊಡ್ಡ ಮೋಸ ಮಾಡುತ್ತಿದೆ. 12 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಕೇವಲ ಜನರಿಗೆ ಬರೆ ಎಳೆಯುವ ಕೆಲಸ‌ ಮಾಡುತ್ತಿದೆ. ಬೆಲೆ ಇಳಿಸುವ, ರುಪಾಯಿ ಮೌಲ್ಯ ವೃದ್ಧಿಸುವ, ಉದ್ಯೋಗ ಕೊಡುವ ಹಾಗೂ ಕಪ್ಪು ಹಣ ತರುವ ಭರವಸೆ ನೀಡಿ ಇಂದು ಸಾಮಾನ್ಯ ಜನರ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಬಿಜೆಪಿ ಅಮಿತ್ ಶಾ ವಿರುದ್ಧ ಹರಿಹಾಯ್ದರು. ನಗರದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ‌ ಮೂಲಕ ತೆರಳಿ, ಗಂಜ್ ವೃತ್ತದಲ್ಲಿ ಮಾತನಾಡಿದರು. ಈ ವೇಳೆ ಕಟ್ಟಿಗೆ ಒಲೆ ಹಚ್ಚಿ‌ ನೀರು ಕಾಯಿಸಿದರು. ಹೋರಾಟದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ಮಾಜಿ ಸಚಿವ ಡಿಸಿಸಿ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ, ಮುಖಂಡರುಗಳಾದ ಅಕ್ಬರ್ ಪಾಶಾ, ಸುರೇಶ ದಾಸರಡ್ಡಿ, ಅಮ್ಜದ್ ಪಟೇಲ್, ಮುತ್ತುರಾಜ‌ ಕುಷ್ಟಗಿ, ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಶೈಲಜಾ ಹಿರೇಮಠ, ಸಾವಿತ್ರಿ ಮುಜುಂದಾರ್, ವಿಶಾಲಾಕ್ಷಿ ತಾವರಗೇರ, ಸುಮಂಗಲಾ ನಾಯಕ, ರೇಷ್ಮಾ‌ ಖಾಜಾವಲಿ, ಗಂಗಮ್ಮ, ಸೌಮ್ಯ ಕಂದಗಲ್, ಮಲ್ಲಿಕಾರ್ಜುನ ಪೂಜಾರ, ಅಜೀಮ್‌ ಅತ್ತಾರ್, ಲಿಂಗೇಶ ಕಲ್ಗುಡಿ, ಗವಿಸಿದ್ದನಗೌಡ ಪಾಟೀಲ್, ಗವಿಸಿದ್ದಪ್ಪ ಕರಡಿ ಸೇರಿ ಅನೇಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!