ಅಳವಂಡಿ -ಬೆಟಗೇರಿ ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿ: ಸ್ಥಳಕ್ಕೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಭೇಟಿ

0

Get real time updates directly on you device, subscribe now.

Kannadanet 24×7 News

ರೈತರ ಮುಖದಲ್ಲಿ ಮಂದಹಾಸ.

ಕೊಪ್ಪಳ :ಕೊಪ್ಪಳ ಮತಕ್ಷೇತ್ರದ ಬಹುದಿನಗಳ ಬೇಡಿಕೆ ಆಗಿದ್ದ ಅಳವಂಡಿ -ಬೆಟಗೇರಿ ಏತ ನೀರಾವರಿ ಯೋಜನೆ ಪ್ರಾಯೋಗಿಕ ಪರೀಕ್ಷೆ ಇಂದು ಯಶಸ್ವಿಗೊಂಡಿದೆ.

ನಂತರ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಸಂತಸ ಹಂಚಿಕೊಂಡು ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಳವಂಡಿ – ಬೆಟಗೇರಿ ಏತ ನೀರಾವರಿ ಯೋಜನೆಯು ಪೂರ್ಣಗೊಂಡಿದ್ದು, ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ. ಸುಮಾರು 9,000 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಕಾರ್ಯ ಸಾಕಾರಗೊಂಡಿದೆ. ತಮ್ಮ ಜಮೀನುಗಳಿಗೆ ನೀರು ಹರಿಯುತ್ತಿರುವುದು ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ಈ ಭಾಗದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದೆ.

ಮುಂದಿನ ತಿಂಗಳು ಒಂದನೇ ವಾರದಲ್ಲಿ ಜಲಸಂಪನ್ಮೂಲ ಸಚಿವರಾದ ಎನ್ ಚಲುವರಾಯಸ್ವಾಮಿ ಅವರಿಂದ ಲೋಕಾರ್ಪಣೆ ಮಾಡಿಸಲು ತೀರ್ಮಾನ ಮಾಡಲಾಗಿತ್ತು ಆದರೆ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಇರುವುದರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ನೀತಿ ಸಂಹಿತೆ ಮುಗಿದ ತಕ್ಷಣವೇ ಈ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡಿ ರೈತರಿಗೆ ಅರ್ಪಣೆ ಮಾಡುತ್ತೇವೆ ಎಂದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ, ಭರಮಪ್ಪ ಹಟ್ಟಿ, ವಿರುಪಣ್ಣ ನವೋದಯ, ಭರಮಪ್ಪ ಬೆಟಗೇರಿ, ಹನಮೇಶ ಹೊಸಳ್ಳಿ, ನಾರಾಯಣ ಬೆಟಗೇರಿ, ವೆಂಕಣ್ಣ ಬೆಟಗೇರಿ, ಸ್ವಾಮಿ ಬೆಟಗೇರಿ, ಕೊಟೇಶ್ ಬೆಟಗೇರಿ, ಚಂದ್ರಪ್ಪ ಇಳಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!