ಘಟ್ಟರಡ್ಡಿಹಾಳ -ಅಳವಂಡಿ ರಸ್ತೆ ಹಾಗೂ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಅಳವಂಡಿ ಹೋಬಳಿಯ ವಿವಿಧ ಗ್ರಾಮಗಳಿಗೆ ಶಾಸಕ ಹಿಟ್ನಾಳ ಭೇಟಿ.
ಕೊಪ್ಪಳ : ಇಂದು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಕಂಪ್ಲಿ, ಅಳವಂಡಿ,ಗುಡುಗೇರಿ, ಕವಲೂರು, ಮುರ್ಲಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ ಹಾಗೂ ರಘುನಾಥನಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ನಡೆಯುತ್ತಿರುವ ಕಾಮಗಾರಿಯ ವೀಕ್ಷಣೆ ಹಾಗೂ ಇನ್ನೂ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಘಟ್ಟರಡ್ಡಿಹಾಳ -ಅಳವಂಡಿ ರಸ್ತೆ ಹಾಗೂ ಸೇತುವೆ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಈ ರಸ್ತೆ ನಿರ್ಮಾಣಕ್ಕೆ 4.26 ಕೋಟಿ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ 2.44 ಕೋಟಿ ಅನುದಾನವನ್ನು ನೀಡಿದ್ದರ ಫಲವಾಗಿ ಈ ರಸ್ತೆ ಹಾಗೂ ಸೇತುವೆ ನಿರ್ಮಾಣ ಆಗಿದ್ದು ಇದರಿಂದ ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲ ಆಗಿದೆ.ಶೀಘ್ರದಲ್ಲಿ ಈ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿ ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು.ಇದರಿಂದ ಘಟ್ಟರಡ್ಡಿಹಾಳ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಬರಲು ಸುಮಾರು 12 ಕಿ. ಮೀ ಕಡಿಮೆ ಆಗಲಿದೆ.
ಇದೇ ವೇಳೆ ಅಳವಂಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಇನ್ನೂ ಕೈಗೊಳ್ಳಬೇಕಿರುವ ಅಗತ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮಸ್ಥರು ಹಾಗೂ ಮುಖಂಡರಿಂದ ಮಾಹಿತಿ ಪಡೆದುಕೊಂಡರು.
ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿನ ಪ್ರಮುಖ ಸಮಸ್ಯೆಗಳು ಹಾಗೂ ಅಗತ್ಯ ಕಾಮಗಾರಿಗಳ ಕುರಿತು ಶಾಸಕರ ಗಮನಕ್ಕೆ ತಂದರು. ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ಜನರ ಅಗತ್ಯಗಳಿಗೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಭರಮಪ್ಪ ಹಟ್ಟಿ, ಗುರುಬಸವರಾಜ್ ಹಳ್ಳಿಕೇರಿ, ತೋಟಪ್ಪ ಸಿಂಟ್ರ, ಹನಮೇಶ ಹೊಸಳ್ಳಿ, ಚೌಡಪ್ಪ ಜಂಟ್ಲಿ, ಮಹೆಬೂಬ್ ಅರಗಂಜಿ,ಹೊನ್ನಕೆರಪ್ಪ ಕವಲೂರು, ದೇವಪ್ಪ ಹಳ್ಳಿ, ನಾಗರಾಜ್ ಕಗ್ಗಲ್,ಅಂದಪ್ಪ ಡಂಬಳ್, ನಜೀರ್ ಅಳವಂಡಿ, ನಿಂಗಪ್ಪ ಮೇಟಿ, ಪರಶುರಾಮ್ ಭೈರಾಪುರ, ಹೊನ್ನಪಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್ : ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಘಟ್ಟರಡ್ಡಿಹಾಳ -ಅಳವಂಡಿ ರಸ್ತೆ ಹಾಗೂ ಸೇತುವೆ ವೀಕ್ಷಿಸುತ್ತಿರುವುದು.