ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ ಮತ್ತು ಬಹುಭಾಷಾ ಕವಿಗೋಷ್ಠಿ

ಕೊಪ್ಪಳ : ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆಯ ೭ ನೇ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ ೪, ರವಿವಾರ, ಸರಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳದಲ್ಲಿ ಮುಂಜಾನೆ ೧೦.೧೫ ಕ್ಕೆ ಜರುಗಲಿದೆ. ಮುಖ್ಯ ಆಮಂತ್ರಿತರಾಗಿ ಹೈ ಕೋರ್ಟ್ ಹಿರಿಯ ನ್ಯಾಯವಾದಿಗಳು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ ಮತ್ತು ಕೇಂದ್ರ ಗೃಹ ಇಲಾಖೆಯ ಹಿರಿಯ ಅನುವಾದಕರು, ಮರಾಠಿ ಪ್ರಖರ ಕವಿಗಳೂ ಆಗಿರುವ ಡಾ. ಸಂಜಯ ಬರುಡೆ ಆಗಮಿಸಲಿದ್ದಾರೆ.
ಓರಿಸ್ಸಾದ ಖ್ಯಾತ ಕವಿ ಮನೋರಂಜನ್ ಸಾಹು, ಮರಾಠಿ ಖ್ಯಾತ ಕವಿ ಚಂದ್ರಕಾAತ ಪೋತದಾರ, ನಿರ್ದೇಶಕ ಶ್ರೀಧರ ಜಾವೂರ, ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ, ಬಳ್ಳಾರಿ ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ಹಿರಿಯ ಕವಯಿತ್ರಿ ಮಾಲಾ ಬಡಿಗೇರ ಮತ್ತು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅತಿಥಿಗಳಾಗಿ ಉಪಸ್ಥಿತರಿರುವರು.
ಹಿರಿಯ ಧೀಮಂತ ಕವಿ ವಸಂತ ಕುಷ್ಟಗಿಯವರ ಸೆಪ್ಟಂಬರ್ ೧೭ ಹೈದರಾಬಾದ ಸಂಸ್ಥಾನ ವಿಲಿನೀಕರಣದ ಬೆಳಕಿನಲ್ಲಿ, ಮಹೇಶ ಬಳ್ಳಾರಿ ಅನುವಾದಿತ ಕೃತಿ ಎಲೆಗಳ ಹಾಡು, ಪಾಪು ಗುರು ಅವರ ಈ ಹೊತ್ತಿಗೆ ಇಷ್ಟು ಸಾಕು, ನಿರ್ಮಲಾ ಶೆಟ್ಟರ್ ಅವರ ‘ಪುಟ್ಟ ಪಾದ – ಪುರುಷ ಪಾದ, ಮರಾಠಿ ಕವಿ ಚಂದ್ರಕಾAತ ಪೋತದಾರ್ ಅವರ ಮರಾಠಿ ಕೃತಿ ವರ್ತಮಾನ ಪತ್ರ ಅಣಿಮಿ ಕಾಯಿ ಸಂದರ್ಭ ಕೃತಿಗಳು ಸಾಹಿತ್ಯೋತ್ಸವವದಲ್ಲಿ ಲೋಕಾರ್ಪಣೆಯಾಗಲಿವೆ. ಕವಿ ಮಂಜುನಾಥ ಚಿತ್ರಗಾರ ಕೃತಿಗಳ ಕುರಿತು ಮಾತನಾಡುವರು.
ಇದೇ ಸಂದರ್ಭದಲ್ಲಿ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ -೨೦೨೬ ರ ವಿಜೇತರಾದ ಪಾಪು ಗುರು ಮತ್ತು ನಿರ್ಮಲಾ ಶೆಟ್ಟರ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ. ೫,೦೦೦ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ರಾಧಾ ಕುಲಕರ್ಣಿ, ಜೈಲರ್ ಅಮರೇಶ ಪೂಜಾರಿ, ಹಿರಿಯ ಇಂಗ್ಲೀಷ ಶಿಕ್ಷಕ ಎಸ್.ಸಿ. ಹಿರೇಮಠ, ಯುವ ಮಹಿಳಾ ಉದ್ಯಮಿ ಶಿಲ್ಪಾ ಗಾಳಿ ಸಮಾಜಮುಖಿ ಗೌರವ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.
ಬಹುಭಾಷಾ ಕವಿಗೋಷ್ಠಿ
ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವದ ಪ್ರಯುಕ್ತ ಹಿಂದಿನ ದಿನ, ದಿನಾಂಕ ೦೩-೧೦-೨೦೨೬, ಶನಿವಾರ ಸಂಜೆ ೫ ಗಂಟೆಗೆ, ಬಹುಭಾಷಾ ಕವಿಗೋಷ್ಠಿಯನ್ನು ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಉತ್ತರ ಭಾರತದ ಹೆಸರಾಂತ ೩೫ ಕ್ಕೂ ಹೆಚ್ಚು ಕವಿಗಳು ಮತ್ತು ಕೊಪ್ಪಳ ಜಿಲ್ಲೆಯ ಕವಿಗಳು ಈ ಕಾವ್ಯ ಸಂಗಮದಲ್ಲಿ ಭಾಗಿಯಾಗಲಿದ್ದಾರೆ.
ಈ ಎರಡೂ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಸಾಹಿತ್ಯೋತ್ಸವ ಸಮಿತಿಯ ಸಂಚಾಲಕ ಮಹೇಶ ಬಳ್ಳಾರಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
**
(ದಯವಿಟ್ಟು ಈ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿಕೆ)
(ಆಮಂತ್ರಣ ಪತ್ರಿಕೆಯನ್ನು ಅಟ್ಯಾಚ್ ಮಾಡಲಾಗಿದೆ)
** ಈ ಮೂಲಕ ತಮಗೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೋರಿಕೆ.
ಮಹೇಶ ಬಳ್ಳಾರಿ, ಕೊಪ್ಪಳ
ಮೊ. ೯೦೦೮೯೯೬೬೨೪