ಕೊಪ್ಪಳ ತಾಲೂಕು ೨ನೇ ಚುಟುಕು ಸಾಹಿತ್ಯ ಸಮ್ಮೇಳನ ನಿಯೋಜಿತ ಸವಾ೯ಧ್ಯಕ್ಷ ,ಕವಿ ಶ್ರೀನಿವಾಸ್ ಚಿತ್ರಗಾರರಿಗೆ ಸತ್ಕಾರ !

ಕೊಪ್ಪಳ : ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಜೂನ್ ತಿಂಗಳ ಕೊನೆ ವಾರದಲ್ಲಿ ಉದ್ದೇಶಿರುವ ಕೊಪ್ಪಳ ತಾಲೂಕು ಎರಡನೇ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಸವಾ೯ಧ್ಯಕ್ಷರಾದ ಕವಿ , ಶಿಕ್ಷಕರಾದ ಶ್ರೀನಿವಾಸ ಚಿತ್ರಗಾರ ಅವರಿಗೆ ಸೋಮವಾರ ತಾಲುಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕಿನ್ನಾಳ ಗ್ರಾಮದ ಅವರ ‘ಹಸನ್ಮುಖಿ ‘ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಆರ್ ಭಂಡಾರಿ ಅವರು ಮಾತನಾಡಿ, ಕೊಪ್ಪಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನವನ್ನು
ಜೂನ್ ಕೊನೆ ವಾರದಲ್ಲಿ ಕರಕುಶಲಗಳ
ತವರೂರಾದ ಕಿನ್ನಾಳ ಗ್ರಾಮದಲ್ಲಿ ನಡೆಸಬೇಕೆಂಬ ಬಯಕೆ ಪರಿಷತ್ ಗೆ ಇದ್ದು, ಜಾಗತಿಕ ಮಟ್ಟದಲ್ಲಿ ಕರಕುಶಲಗಳಿಂದ ಪ್ರಸಿದ್ಧಿ ಪಡೆದ ಕಿನ್ನಾಳ
ಗ್ರಾಮವಾಗಿದ್ದು, ಈ ಊರಿನಲ್ಲಿ ಹುಟ್ಟಿ ಬೆಳೆದ ಶ್ರೀನಿವಾಸ್ ಅವರು ಸುಮಾರು
೨೫ ಸಾಹಿತ್ಯ ಕೃತಿಗಳನ್ನು ರಚಿಸಿದ್ದು
ಕನ್ನಡ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯಕ್ಕೆ
ಅಮೂಲ್ಯ ಕೊಡುಗೆ ನೀಡಿದ್ದಾರೆ.
ಈ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯದ ಕಂಪು ಮೂಡಿಸುವುದು, ವಿವಿಧ ವಿಷಯ ಕುರಿತು ಗೋಷ್ಠಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ,ಸ್ಥಳೀಯ ಸಮಸ್ಯೆಗಳ ಕುರಿತು ಹಕ್ಕೊತ್ತಾಯ ಮಂಡನೆ ಉದ್ದೇಶವಿದೆ, ಸ್ಥಳೀಯರು ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಬ್ಬದ ಸಂಭ್ರಮದಂತೆ ಆಚರಿಸೋಣ ಎಂದು ಮನವಿ ಮಾಡಿದರು. ಅತಿಥಿಯಾಗಿದ್ದ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ,ಸಾಹಿತಿ
ಜಿ. ಎಸ್. ಗೋನಾಳ ಅವರು ಮಾತನಾಡಿ, ಕಲೆ,ಸಾಹಿತ್ಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಪಡೆದ ಕಿನ್ನಾಳ ಗ್ರಾಮದಲ್ಲಿ ಸಮ್ಮೇಳನ ವನ್ನೂ
ವಿಜೃಂಬಣೆಯಿಂದ ಯಶಸ್ಸಿಗೆ ಕಿನ್ನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರ,
ಯುವಜನರ ಸಹಯೋಗದಲ್ಲಿ ಸಭೆ ನಡೆಸಿ
ದಿನಾಂಕ ನಿಗದಿ ಹಾಗೂ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿ ಮೂಲಕ ಜವಾಬ್ದಾರಿ
ಹಂಚಿಕೊಳ್ಳುವುದಾಗಿ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಚಿತ್ರಗಾರ ಆವರು ಸವಾ೯ಧ್ಯಕ್ಷ ಹುದ್ದೆಗೆ ಜವಾಬ್ದಾರಿ ನೀಡಿದ್ದು ಸಂತಸ ತಂದಿದೆ ಕಿನ್ನಾಳ ಗ್ರಾಮದ ಘನತೆ
ಹೆಚ್ಚಳಕ್ಕೆ ಸಾಹಿತ್ಯದ ಮೂಲಕವೇ ಪ್ರೋತ್ಸಾಹ ದೊರೆತಿರುವುದು ಕನ್ನಡ ತಾಯಿಗೆ ಧನ್ಯ ಭಾವದಿಂದ ಅಪಿ೯ಸುವೆ ಎಂದು ತಿಳಿಸಿದರು. ತಾಲುಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೈಲಾರಪ್ಪ ಉ೦ಕಿ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿಗಳಾದ ಎ.ಪಿ.ಅಂಗಡಿ,
ಶಿವಪ್ಪ ಕೋಗಳಿ, ರಾಘವೇಂದ್ರ ಗುಬ್ಬಿ, ಶಿಕ್ಷಕರಾದ ವಿನಾಯಕ, ವಿದ್ಯಾವತಿ ಶ್ರೀನಿವಾಸ ಚಿತ್ರಗಾರ,
ಮಂಜುನಾಥ್ ಚಿತ್ರಗಾರ,
ಶಾಂತಪ್ಪ ಪಟ್ಟಣಶೆಟ್ಟಿ,ಗವಿಸಿದ್ದಪ್ಪ ಬಾರಕೇರ, ಅನ್ನಪೂಣ೯ ಮಹೇಶ್ ಮನ್ನಾಪುರ,
ವಿನೋದ್ ಎಸ್.ಕೆ, ಮೊದಲಾದವರು ಉಪಸ್ಥಿತರಿದ್ದರು.
ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ್ ನೆಲಾಗಣಿ ಅವರು ಸ್ವಾಗತಿಸಿ ನಿರೂಪಿಸಿದರು.