ಕೊಪ್ಪಳದ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆಯಿಂದ ಉಚಿತ ಶವಸಂಸ್ಕಾರ ವಾಹನಕ್ಕೆ ಚಾಲನೆ

0

Get real time updates directly on you device, subscribe now.

 

ಕೊಪ್ಪಳ : ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯಿಂದ ಉಚಿತ ಶವಸಂಸ್ಕಾರ ವಾಹನಕ್ಕೆ ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ನಗರದ ಮುಸ್ಲಿಮ್ ಸಮುದಾಯದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರಿಗೂ ಖಬ್ರಸ್ಥಾನ ದೂರವಿರುವ ಕಾಲೋನಿಗಳ ನಿವಾಸಿಗಳ ಅನುಕೂಲಕ್ಕಾಗಿ ‘ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿ’ ವತಿಯಿಂದ ಉಚಿತ ಶವ ಸಂಸ್ಕಾರ ವಾಹನವನ್ನು ಸಾರ್ವಜನಿಕ ಸೇವೆಗೆ ನಗರದ ಯೂಸೂಫಿಯಾ ಮಸೀದಿಯ ಪೇಷ್ ಇಮಾಮ್ ಮೌಲಾನಾ ಮುಫ್ತಿ ಮೊಹಮ್ಮದ್ ನಝೀರ್ ಅಹ್ಮದ್ ಅವರು ಚಾಲನೆ ನೀಡಿದರು.
ನಗರದ ಯೂಸೂಫಿಯಾ ಮಸೀದಿಯ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ
ಮುಸ್ಲಿಮ್ ಸಮುದಾಯದ ಮುಖಂಡರು ಮಾತನಾಡಿ, “ಅನೇಕ ಬಡ ಕುಟುಂಬಗಳಿಗೆ ಮತ್ತು ದೂರದ ಕಾಲೋನಿಗಳ ಜನರಿಗೆ ಮೃತರ ಅಂತ್ಯಸಂಸ್ಕಾರದ ಸಮಯದಲ್ಲಿ ವಾಹನದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು.
ಇದನ್ನು ಮನಗಂಡು ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯು ಹಮ್ಮಿಕೊಂಡಿರುವ ಈ ಜನೋಪಯೋಗಿ ಕಾರ್ಯ ಶ್ಲಾಘನೀಯವಾಗಿದೆ.
ಕಷ್ಟದಲ್ಲಿದ್ದವರಿಗೆ ನೆರವಾಗಲು ಈ ವಾಹನ ಬಳಕೆಯಾಗಲಿದೆ,” ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್.ನಗರ ಸಭೆ ಮಾಜಿ ಸದಸ್ಯರಾದ ಕಾಟನ್ ಪಾಷಾ.ಮಾನವಿ ಪಾಶಾ. ಸಲೀಮ್ ಅಳವಂಡಿ.ಗಫಾರ್ ದಿಡ್ಡಿ.ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯ ಮುಖ್ಯಸ್ಥ ಸಿರಾಜ್ ಕೊಲ್ಕಾರ್. ಗೌರವಾನ್ವಿತ ಸರ್ವ ಪದಾಧಿಕಾರಿಗಳು, ಉಲ್ಮಾಗಳು, ಸಮಾಜದ ಹಿರಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Koppal: Al Amin Baitul Mal Committee inaugurated a free funeral vehicle on Friday.

For the benefit of the poor and middle class of the city’s Muslim community, including the residents of colonies far from the grave, a free funeral vehicle was launched by the ‘Al Amin Baitul Mal Committee’ for public service by the Pesh Imam of the city’s Yusufia Mosque, Maulana Mufti Mohammad Nazir Ahmed.

Speaking at a program organized near the city’s Yusufia Mosque, leaders of the Muslim community said, “It was difficult for many poor families and people from distant colonies to arrange a vehicle during the funeral of the deceased.
Remembering this, this public service work organized by the Al Amin Baitul Mal Committee is commendable.

This vehicle will be used to help those in need,” he said.

The inauguration ceremony was attended by former city council president Amjad Patel, former city council members Cotton Pasha, Manavi Pasha, Salim Alavandi, Gafar Diddi, Al Amin Baitul Mal Committee head Siraj Kolkar, respected office bearers, ulema, senior leaders of the society and youth who made the program a success.

Get real time updates directly on you device, subscribe now.

Leave A Reply

Your email address will not be published.

error: Content is protected !!