ಲಾರಿಗೆ ಕಾರ್ ಡಿಕ್ಕಿ:  ಓರ್ವ  ಸಾವು,  ನಾಲ್ವರ  ಗಂಭೀರ ಗಾಯ

Get real time updates directly on you device, subscribe now.

ಮುನಿರಾಬಾದ್ :  ಚಲಿಸುತ್ತಿದ್ದ ಲಾರಿಗೆ ಹಿಂದೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮಕಾರಿ ಚಲಾಯಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ.

ಮುನಿರಾಬಾದ್ನ ಐಆರ್‌ಬಿ ಗೇಟ್ ಎದುರುಗಡೆ ಅಪಘಾತ ನಡೆದಿದ್ದು ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೀಕರ ಅಪಘಾತ ನಡೆದಿದೆ.

ಕಾರ್ ನಲ್ಲಿದ್ದ ನಿಜಾಮುದ್ದೀನ್ ಎನ್ನುವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ತಮಿಳುನಾಡು ಮೂಲದವರು ಎನ್ನಲಾಗಿದ್ದು ಎಲ್ಲಿಗೆ ಹೊರಟಿದ್ದರು ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನು ದೊರೆಯಬೇಕಿದೆ.

ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!