ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಗವಿಸಿದ್ದಪ್ಪ ಹೊಸಮನಿ ಪದೋನ್ನತಿ

0

Get real time updates directly on you device, subscribe now.

 

ಕೊಪ್ಪಳ ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೊಪ್ಪಳ ಕಚೇರಿಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಗವಿಸಿದ್ದಪ್ಪ ಹೊಸಮನಿ ಅವರು ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಯಚೂರು ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗವಿಸಿದ್ದಪ್ಪ ಅವರಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ, ಕೊಪ್ಪಳ ಜಿಲ್ಲೆಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸ್ಥಳ ನಿಯುಕ್ತಿಗೊಳಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ ಅವರು ಮೇ 16ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗೊರೆಬಿಹಾಳ ಗ್ರಾಮದವರಾದ ಗವಿಸಿದ್ದಪ್ಪ ಹೊಸಮನಿ ಅವರು 2016ರಲ್ಲಿ ವಾರ್ತಾ ಇಲಾಖೆಗೆ ನೇಮಕಗೊಂಡು ವಾರ್ತಾ ಸಹಾಯಕರ ಹುದ್ದೆಯ ಜೊತೆಗೆ ಪ್ರಭಾರಿ ಜಿಲ್ಲಾ ವಾರ್ತಾಧಿಕಾರಿಯಾಗಿ ಬೀದರ, ವಿಜಯಪುರ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ.

 

===
‎Koppala  : Gavisiddappa Hosamani, who was in additional charge of the post of Assistant Director in the Koppal office of the Information and Public Relations Department, has been promoted to Assistant Director.
Gavisiddappa, who was working as an Assistant in the Raichur Senior Assistant Director’s Office of the Information and Public Relations Department, has been promoted to the post of Assistant Director and posted to the Assistant Director’s Office of the Information and Public Relations Department in Koppal district, a notification issued by Hemanth Nimbalkar, Commissioner of the Information and Public Relations Department, on May 16.
Originally from Gorebihala village in Kushtagi taluk of Koppal district, Gavisiddappa Hosamani was appointed to the Information Department in 2016 and has previously worked as the District Information Officer-in-Charge in Bidar, Vijayapura, Raichur, and Vijayanagar districts, along with the post of Information Assistant.

 

Get real time updates directly on you device, subscribe now.

Leave A Reply

Your email address will not be published.

error: Content is protected !!