ಸರಕಾರಿ ಶಾಲೆಗಳು ಉಳಿದಲ್ಲಿ ಮಾತ್ರ ಪ್ರಜಾತಂತ್ರ ಉಳಿಯುತ್ತದೆ; ಡಾ.ಎಸ್.ವಿ.ಡಾಣಿ

ಕೊಪ್ಪಳ,ಜೂ,೪ಸರಕಾರಿ ಶಾಲೆ-ಕಾಲೇಜುಗಳು ಉಳಿದಲ್ಲಿ ಮಾತ್ರ ಪ್ರಜಾತಂತ್ರ ಉಳಿಯುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿಗಳಾದ ಡಾ.ಎಸ್.ವಿ.ಡಾಣಿಯವರು ನುಡಿದರು. ಅವರು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಿAದ ನಡೆದ ಪ್ರತಿಭಾ ಪುರಸ್ಕಾರ, ಸಂಘದ ಮಹಾಸಭೆ ಮತ್ತುಕೊಪ್ಪಳ ಜಿಲ್ಲಾಉಪನ್ಯಾಸಕರ ಸಂಘಕ್ಕೆ ನೂತವಾಗಿಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮುಂದುವರೆದು ಸರಕಾರಿ ಶಲೆಗಳಲ್ಲಿ ಶಿಕ್ಷಕರನ್ನು ಆರ್ಹತೆಯಆಧಾರದ ಮೇಲೆ ನೇಮಿಸಲಾಗುತ್ತಿದೆ.ಅಲ್ಲಿಗುಣಮಟ್ಟದ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಸರಕಾರದಿಂದರೂಪಿಸಲಾಗುತ್ತಿದೆ.ಆ ಯೋಜನೆಗಳ ಫಲವಾಗಿಯೇಇಂದು ಪಿಯುಸಿ ಉತ್ತಮ ಫಲಿತಾಂಶ ಬರುತ್ತಿದೆ. ಮುಂದೆಯೂ ಸಹ ಉತ್ತಮ ಫಲಿತಾಂಶ ಬಂದು ನಮ್ಮಜಿಲ್ಲೆಯಲ್ಲಿ ಪ್ರತಿಭವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿ ಮತ್ತು ಮಕ್ಕಳು ಓದಿನ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್‌ರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಲಹೆ ನೀಡಿದರು.ಎಂದು ನುಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನಿರ್ದೇಶಕರಾದಜಿ.ಎಚ್.ಜಗದೀಶರವರು ಮಾತನಾಡಿಇಲಾಖೆಯಕಾರ್ಯ ಯೋಜನೆಗಳನ್ನು ವಿವರಿಸಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರ ಸಂಘದಜಿಲ್ಲಾಧ್ಯಕ್ಷರಾದಬಸಪ್ಪ ನಾಗೋಲಿಯವರು ನಮ್ಮ ಸಂಘದಿAದಆಡಳಿತಾತ್ಮಕ ವಿಷಯವಾಗಿ ಪ್ರಾಚಾರ್ಯರಿಗೆತರಭೇತಿ.ವಿಷಯವಾರುಉಪನ್ಯಾಸಕರಿಗೆಕಾರ್ಯಗಾರ,ಪ್ರತಿ ವರ್ಷ ನಿವೃತ್ತರಿಗೆ ಸನ್ಮಾನ ಮತ್ತುಜಿಲ್ಲೆಯಲ್ಲಿಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆಅಭಿನಂದಿಸುವ ಯೋಜನೆ ಹೊಂದಿದ್ದೇವೆಎAದರು. ಹಿರಿಯ ಪ್ರಾಚಾರ್ಯರಾದರಾಜಶೇಖರ ಪಾಟೀಲ್, ಉಪನ್ಯಾಸಕರ ಸಂಘದಜಿಲ್ಲಾಧ್ಯಕ್ಷರಾದ ಸೋಮಶೇಖರಗೌಡ ಮಾತನಾಡಿದರು. ವೇದಿಕೆಯ ಮಂಜುನಾಥಸ್ವಾಮಿ, ಡಾ.ರವಿಚವ್ಹಾಣ, ಲಲಿತಮ್ಮ, ಶಿವಾನಂದ ಮೇಟಿ, ಡಾ,ವೀರೇಶಕುಮಾರ, ಮುಂತಾದವರು ಉಪಸ್ಥಿರಿದ್ದರು.
ಈ ಕಾರ್ಯಕ್ರಮಕ್ಕೆಕು.ಪೂರ್ಣಿಮಾ ಮತ್ತು ಸಂಜನಾ ಪ್ರಾರ್ಥಿಸಿದರೆ, ಎಸ್.ಎಚ್.ಪಾಟೀಲ್‌ರವರು ಸ್ವಾಗತಿಸಿದರು. ಕೊನೆಗೆ ಎನ್.ಪಾಂಡುರAಗರವರು ವಂದಿಸಿದರು. ಆರಂಭದಲ್ಲಿಟಿ.ಸಿ ಶಾಂತಪ್ಪರವರು ಪ್ರಾಸ್ತಾವಿವಾಗಿ ಮಾತನಾಡಿದರು.ಬಸವರಾಜರವರು ವಾರ್ಷಿಕವರದಿ ಓದಿದರು.ಈ ಸಂದರ್ಭದಲ್ಲಿಜಿಲ್ಲೆಯಲ್ಲಿದ್ವಿತಿಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದಕಲಾ, ವಾಣಿಜ್ಯ ಮತ್ತು ವಿಜ್ಞಾನದಪ್ರತಿ ವಿಭಾಗದಿಂದಸರಕಾರಿ, ಮುರಾರ್ಜಿ, ಅನುದಾನಿತ ಮತ್ತುಅನುದಾನರಹಿತ ಕಾಲೇಜುಗಳಒಟ್ಟು ಹತ್ತು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತುಎರಡು ಸಾವಿರ ರೂಪಾಗಳ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.